ತುಮಕೂರು: ಗುಬ್ಬಿ ತಾಲೂಕು, ಬೆಲವತ್ತ ಗ್ರಾಮದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಮಂಡಲ ಪೂಜಾ ಕಾರ್ಯಕ್ರಮ ಡಿ. 22 ನೇ ಸೋಮವಾರ. ಶ್ರೀ ಭದ್ರಕಾಳಮ್ಮ ಶ್ರೀ ವೀರಭದ್ರಸ್ವಾಮಿ ಮತ್ತು ಮಾರಮ್ಮ ದೇವಿಯ ನೂತನ ದೇವಾಲಯ (02-11-2025 ರಿಂದ 04-11-2025) ಲೋಕಾರ್ಪಣೆಗೊಂಡಿದ್ದು ಡಿ.22 ರಂದು ಸೋಮವಾರ ಮಂಡಲ ಪೂಜಾ ಕಾರ್ಯಕ್ರಮದ ಕೊನೆಯ ದಿನವಾಗಿದ್ದು, ಈ ದಿನ ಬೆಳಿಗ್ಗೆ 7.00 ಘಂಟೆಯಿಂದ ಪೂಜಾ, ಅಭಿಷೇಕ, ಹೋಮ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 2-0 ಘಂಟೆಗೆ ಮುಕ್ತಾಯಗೊಂಡು ಸಂಜೆ ಶ್ರೀ ಭದ್ರಕಾಳಮ್ಮ, ವೀರಭದ್ರಸ್ವಾಮಿ, ಆಂಜನೇಯ ಸ್ವಾಮಿ, ಕರಗದಮ್ಮ ಇವರುಗಳನ್ನು ಊರಿನ ರಾಜಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ದಾಸೋಹವಿರುತ್ತದೆ. ಗ್ರಾಮಸ್ಥರು ಹಾಗೂ ಭಕ್ತರು ಎಲ್ಲರೂ ಆಗಮಿಸಿ ದೇವರ ಕೃಪೆಗೆ ಒಳಗಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
– ಕೆ.ಬಿ.ಚಂದ್ರಚೂಡ
