ಕೊರಟಗೆರೆ ;- ಕೊರಟಗೆರೆ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಕಾಮರಾಜು ರವರನ್ನು ರಾಜ್ಯದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ನವರು ಹುಬಳ್ಳಿ ವಿಭಾಗದ ರೈಲ್ವೆ ಜೆಡ್.ಆರ್.ಯು.ಸಿ.ಸಿ ಸಮಿತಿಗೆ ನಾಮಿನಿ ಸದಸ್ಯರನ್ನಾಗಿ ನೇಮಕ ಮಾಡಿ ಅದೇಶ ನೀಡಿದ್ದಾರೆ.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹುಬಳ್ಳಿ ವಿಭಾಗದ ರೈಲ್ವೆ ಜೆಡ್.ಆರ್.ಯು.ಸಿ.ಸಿ ಸಮಿತಿಗೆ ನಾಮಿನಿ ಸದಸ್ಯರನ್ನಾಗಿ ನೇಮಕ ಗೊಂಡಿರುವ ಕಾಮರಾಜು ರವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದ ನಂತರ ತಾಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜು ಪತ್ರಿಕೆಯೊಂದಿಗೆ ಮಾತನಾಡಿ ಸೌತ್ ವೆಸ್ಟರನ್ ರೈಲ್ವೆ ಹುಬಳ್ಳಿ ವಿಭಾದ ರೈಲ್ವೆ ಜೆಡ್.ಆರ್.ಯು.ಸಿ.ಸಿ ಸಮಿತಿಗೆ ನಾಮಿನಿ ಸದಸ್ಯರನ್ನಾಗಿ ನೇಮಕ ಮಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ನವರಿಗೆ ಕೃತಜ್ಞತೆ ಸಲ್ಲಿಸಿ ಸಚಿವರು ನೀಡಿರುವ ಸ್ಥಾನದಲ್ಲಿ ಸಾರ್ವಜನಿಕರ ಸೇವೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಆರ್. ಸುದಾಕರಲಾಲ್ ಜೆಡಿಎಸ್ ಅಧ್ಯಕ್ಷ ಹಾಗೂ ನೂತನವಾಗಿ ಹುಬಳ್ಳಿ ರೈಲ್ವೆ ಜೆಡ್.ಆರ್.ಯು.ಸಿ.ಸಿ ಗೆ ನಾಮಿನಿ ಸದಸ್ಯರನ್ನಾಗಿ ನೇಮಕ ವಾಗಿರುವ ಕಾಮರಾಜು ರವರನ್ನು ಅಭಿನಂದಿಸಿ ಹುಬಳ್ಳಿ ವಿಭಾಗದಲ್ಲಿನ ರೈಲ್ವೆ ವಿಭಾಗದಲ್ಲಿ ಸಾರ್ವಜನಿಕರ ಸೇವೆ ಮಾಡುವಂತೆ ಅಬಿನಂದಿಸಿ ಸದಸ್ಯರನ್ನಾಗಿ ನೇಮಕ ಮಾಡಿ ಅದೇಶಮಾಡಿದ ಕೇಂದ್ರ ಸಚಿವರನ್ನು ಅಭಿನಂದಿಸಿದ್ದಾರೆ.
ಅಭಿನಂದಾನ ಕಾರ್ಯಕ್ರಮದಲ್ಲಿ ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಜೆಡಿಎಸ್ ಪಕ್ಷದ ಮುಖಂಡರುಗಳಾದ ಲಕ್ಷ್ಮೀಶ್, ಲಕ್ಷ್ಮಣ್, ರಮೇಶ್, ಕೊಡ್ಲಹಳ್ಳಿ ವೆಂಕಟೇಶ್, ರಮೇಶ್, ಕರುಡುಗಾನಹಳ್ಳಿ ರಂಗಣ್ಣ, ಕಾಂತರಾಜು, ವಿಎಸ್ಎಸ್ಎನ್ ಸದಸ್ಯ ರಮೇಶ್, ಅಶ್ವತ್ಥನಾರಾಯಣರಾಜು, ರವೀಶ್ ಸೇರಿದಂತೆ ಇನ್ನಿತರ ಮುಖಂಡರು ಕಾಮರಾಜು ರವರನ್ನ ಅಭಿನಂದಿಸಿದರು.
– ಶ್ರೀನಿವಾಸ್, ಕೊರಟಗೆರೆ.
