ಕೊರಟಗೆರೆ: ಜನರೊಂದಿಗೆ ನನ್ನ 30 ವರ್ಷದ ಅವಿನಾಭಾವ ಸಂಬಂಧವಿದ್ದು ನನ್ನ ಹುಟ್ಟುಹಬ್ಬವನ್ನು ನನ್ನ ಅಭಿಮಾನಿಗಳು ಸಾರ್ವಜನಿಕ ಸೇವೆಯನ್ನಾಗಿ ಆಚರಿಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು.
ಅವರು ಕೊರಟಗೆರೆ ಪ್ರವಾಸಿಮಂದಿರದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಾನು ಸುಮಾರು 30 ವರ್ಷಗಳಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಸಾರ್ವಜನಿಕ ಸೇವಾ ಬದುಕಿನಲ್ಲಿ ಇದ್ದೇನೆ, ಡಿಸೆಂಬರ್ 27 ಶನಿವಾರದಂದು ನನ್ನ ಅಭಿಮಾನಿಗಳು ಹಿತೈಷಿಗಳು ನನ್ನ 59 ವರ್ಷದ ಹುಟ್ಟುಹಬ್ಬವನ್ನು ಸಾರ್ವಜನಿಕ ಸೇವಾ ಕಾರ್ಯಕ್ರಮವನ್ನಾಗಿ ಅಚರಿಸುತ್ತಿದ್ದು ಬೆಳಗ್ಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಬ್ರಡ್ ಹಾಗೂ ಬೆಚ್ಚನೆಯ ಹೊದಿಕೆಗಳನ್ನು ವಿತರಿಸಲಾಗುವುದು ಹಾಗೂ ಮದ್ಯಾಹ್ನ 1 ಗಂಟೆಗೆ ಕೊರಟಗೆರೆ ಪಟ್ಟಣಪಂಚಾಯಿತಿ ಪೌರಕಾರ್ಮಿಕರಿಗೆ ಬೆಚ್ಚನೆ ಉಡುಪು ಗಳನ್ನು ನೀಡಲಾಗುವುದು ನಂತರ ತುಮಕೂರು ನಗರದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಅಲ್ಲಿಯೂ ಆಚರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಪ.ಪಂ ಸದಸ್ಯ ಅಶ್ವಥನಾರಾಯಣರಾಜು, ಮುಖಂಡರುಗಳಾದ ವಿಜಯ್ಕುಮಾರ್, ರಮೇಶ್, ಉಮೇಶ್, ಲಕ್ಷ್ಮೀಕಾಂತ, ಶಶಿಕುಮಾರ್, ಪ್ರತಾಪರುದ್ರ, ಫಾರೂಕ್, ಅಜ್ಗರ್ ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ.
