ತಮಿಳುನಾಡು: ರಾಜ್ಯ ಸರ್ಕಾರವು ಸರ್ಕಾರೀ ನೌಕರರು ಮತ್ತು ಶಿಕ್ಷಕರಿಗೆ ಹೊಸ ಖಚಿತ ಪಿಂಚಣಿ ಯೋಜನೆ (Tamil Nadu Assured Pension Scheme – TAPS) ಜಾರಿಗೆ ತಂದಿದೆ. ಈ ಯೋಜನೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮಾದರಿಯಲ್ಲಿಯೇ ನೌಕರರಿಗೆ ಅನುಕೂಲ ನೀಡಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.
ಯೋಜನೆಯ ಪ್ರಮುಖ ಅಂಶಗಳು:
- ಖಚಿತ ಪಿಂಚಣಿ: ಕೊನೆಯ ಸಂಬಳದ ಶೇ 50ರಷ್ಟು ನೌಕರರಿಗೆ ಖಚಿತವಾಗಿ ನೀಡಲಾಗುವುದು.
- ನೌಕರರ ಕೊಡುಗೆ: ಸಂಬಳದ ಶೇ 10 ರಷ್ಟು ನೌಕರರಿಂದ ಸ್ವೀಕರಿಸಲಾಗುವುದು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ.
- ತುಟ್ಟಿಭತ್ಯೆ: ಪಿಂಚಣಿದಾರರು ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಅರ್ಹರಾಗುತ್ತಾರೆ.
- ಕುಟುಂಬ ಪಿಂಚಣಿ: ನಿವೃತ್ತ ಅಥವಾ ನಿಧನವಾದ ನೌಕರರ ಕುಟುಂಬ ಸದಸ್ಯರಿಗೆ ಕೊನೆಯ ಪಿಂಚಣಿಯ ಶೇ 60 ಮೊತ್ತ.
- ಉಪದಾನ: ನಿವೃತ್ತಿಯ ಸಮಯದಲ್ಲಿ ಅಥವಾ ಸೇವೆಯಲ್ಲಿದ್ದಾಗ ನಿಧನವಾದರೆ 25 ಲಕ್ಷ ರೂ. ವರೆಗೆ ಗ್ರಾಚ್ಯುಟಿ.
- ಕನಿಷ್ಠ ಪಿಂಚಣಿ: ಕನಿಷ್ಠ ಸೇವಾ ಅವಧಿ ಪೂರೈಸದ ನೌಕರರಿಗೂ ಖಚಿತ ಪಿಂಚಣಿ.
- ವಿಶೇಷ ಅನುಕಂಪದ ಪಿಂಚಣಿ: ಹೊಸ ಯೋಜನೆ ಜಾರಿಗೆ ಮೊದಲು ಪಿಂಚಣಿ ಇಲ್ಲದೆ ನಿವೃತ್ತರಾದವರಿಗೆ ನೀಡಲಾಗುವುದು.
- ಸರ್ಕಾರದ ಅನುದಾನ: 13,000 ಕೋಟಿ ರೂ. ಹೆಚ್ಚುವರಿ ಕೊಡುಗೆ, ವಾರ್ಷಿಕ ಹಂಚಿಕೆ 11,000 ಕೋಟಿ ರೂ., ಸಂಬಳ ಪರಿಷ್ಕರಣೆ ಅನುಗುಣ.
ಈ ಯೋಜನೆಯು ಸರ್ಕಾರಿ ನೌಕರರು ಮತ್ತು ಶಿಕ್ಷಕರ 20 ವರ್ಷಗಳ ಹಳೆಯ ಬೇಡಿಕೆಯನ್ನು ಈಡೇರಿಸುತ್ತಿದ್ದು, ಅವರಿಗೆ ಮತ್ತು ಅವರ ಕುಟುಂಬಗಳಿಗೆ ಪಿಂಚಣಿ ನಿಶ್ಚಿತತೆ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ಆರೋಗ್ಯವಂತ ಯುವ ಸಮುದಾಯದಲ್ಲಿ ಹಠಾತ್ ಸಾವುಗಳಲ್ಲಿರುವ ನಿಖರ ಕಾರಣ – ಹೊಸ ಅಧ್ಯಯನದ ಶಾಕ್ ವರದಿ
