ಕೆ.ಆರ್.ಪೇಟೆ,ಜ.20: ಪಟ್ಟಣದ ಬಸವನಗುಡಿ ಬೀದಿಯ ತೊಗಟವೀರ ಶ್ರೀ ರಾಮಮಂದಿರ ಸೇವಾ ಟ್ರಸ್ಟಿನ ಆವರಣದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿಯ 2025ನೇ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಕೆ.ಆರ್.ನೀಲಕಂಠ ಅವರಿಗೆ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಮಹಾಮಂಡಲದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಸ್.ಸಂತೋಷ್ಕುಮಾರ್ ಅವರಿಗೆ ತಾಲ್ಲೂಕು ನೇಕಾರ ತೊಗಟವೀರ ಕ್ಷೇಮಾಭಿವೃದ್ದಿ ಸಂಘ ಹಾಗೂ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಬಸವನಗುಡಿ ಬೀದಿಯ ತೊಗಟವೀರ ಶ್ರೀ ರಾಮಮಂದಿರ ಸೇವಾ ಟ್ರಸ್ಟಿನ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಗ ಮಹೋತ್ಸವ ಸಮಿತಿ ಹಾಗೂ ಶ್ರೀರಾಮಂದಿರ ಸೇವಾ ಟ್ರಸ್ಟಿನ ಅಧ್ಯಕ್ಷ ಹಂಸ ರಮೇಶ್ ಮಾತನಾಡಿ ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಕೆ.ಆರ್.ನೀಲಕಂಠ ಅವರು ಸುಮಾರು 40ವರ್ಷಗಳ ತಾಲ್ಲೂಕಿನಲ್ಲಿ ವಿವಿಧ ಪತ್ರಿಕೆಗಳ ವರದಿಗಾರರಾಗಿ, ಹೇಮಾವತಿ ವಾರಪತ್ರಿಕೆಯ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕೆ.ಆರ್.ನೀಲಕಂಠ ಅವರ 4ದಶಕಗಳಲ್ಲಿ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಇವರ ಈ ಸೇವೆಯನ್ನು ಗುರುತಿಸಿ ಕರ್ನಾಟಕದ ಸರ್ಕಾರವು ಪ್ರತಿಕೋದ್ಯಮದ ಅತ್ಯುತ್ತಮ ಪ್ರಶಸ್ತಿಯಾದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿರುವುದು ಇಡೀ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದು ಶುಭ ಹಾರೈಸಿದರು. ಅದೇ ರೀತಿ ಬಸ್ ಸಂತೋಷ್ಕುಮಾರ್ ಅವರು ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ, ವಿವಿಧ ಸಹಕಾರ ಸಂಘಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಮಹಾಮಂಡಲದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ರಾಜ್ಯ ಮಟ್ಟದ ಸಹಕಾರ ಸಂಘದಲ್ಲಿ ನಿರ್ದೇಶಕರಾಗುವುದು ಕಷ್ಟಸಾಧ್ಯವಾಗಿದೆ ಆದರೆ ಸಹಕಾರ ಕ್ಷೇತ್ರದಲ್ಲಿ ರಾಜ್ಯಮಟ್ಟದ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸ್ ಸಂತೋಷ್ಕುಮಾರ್ ಅವರ ಸಾಧನೆ ತಾಲ್ಲೂಕಿನ ಸಮಸ್ತ ಜನತೆಗೆ ಸಂದ ಗೌರವವಾಗಿದೆ ಎಂದು ಹಂಸ ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಶಿಕ್ಷಣ ತಜ್ಞ ಕೆ.ಆರ್.ಪುಟ್ಟಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಮಂಡ್ಯ ಹಾಗೂ ಮೈಸೂರು ಜಿಲ್ಲಾ ನೇಕಾರ ತೊಗಟವೀರ ಸಂಘದ ಅಧ್ಯಕ್ಷ ಇಂಜಿನಿಯರ್ ವೆಂಕಟೇಶ್, ಶ್ರೀರಂಗಪಟ್ಟಣ ತೊಟಗವೀರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜೆ.ಕುಮಾರಸ್ವಾಮಿ, ಶಿಕ್ಷಕ ಶ್ರೀರಂಗಪಟ್ಟಣ ರವಿಕುಮಾರ್, ಸಿಂಧುಘಟ್ಟ ನಾಗೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಾಜಶೇಖರ್, ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ಅಂಚನಹಳ್ಳಿ ಸುಬ್ಬಣ್ಣ, ಪುರಸಭೆ ಸದಸ್ಯರಾದ ಇಂದ್ರಾಣಿ, ವಿಶ್ವನಾಥ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಹೆಚ್.ರಾಮಕೃಷ್ಣ, ಕೆ.ಸಿ.ವಾಸು, ನೇಕಾರ ತೊಗಟವೀರ ಸಮಾಜದ ಹಿರಿಯ ಮುಖಂಡರಾದ ಕೆ.ಹೆಚ್.ಆರ್.ಚಂದ್ರಶೇಖರ್, ಉದ್ಯಮಿ ಅಂಬಾರಿ ರವಿ, ಗ್ಯಾಸ್ ರಾಜಶೇಖರ್, ಮೀಸೆ ರಮೇಶ್, ಚಂದ್ರಕಲಾ ರಮೇಶ್, ಉದ್ಯಮಿ ಹೊನ್ನಾವರ ಚಂದ್ರಶೇಖರ್, ಕೆ.ಎಂ.ರವಿನಂದನ, ಬಸವರಾಜು, ಹೊಸಹೊಳಲಿನ ಸುರೇಶ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
