ಟಿ.ನರಸೀಪುರ : ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸಿದ್ದು ಇದರಿಂದ ರೈತರು,ಬಡವರು,ದಲಿತರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಪಡೆಯಲು ವಂಚಿತರಾಗುತ್ತಾರೆ.ಇದನ್ನು ವಿರೋಧಿಸಿ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸುತ್ತಿದೆ ಎಂದು “ರೈತ ರತ್ನ ಸರದಾರ” ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡರವರು ತಿಳಿಸಿದರು.
ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿರುವ ವೃದ್ಧಾಶ್ರಮದ ಸಭಾಂಗಣದಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಮಣ್ಣೆ ಮೋಹನ್ ರವರು ಮತ್ತು ಶ್ರೀ ರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್ ನ ಶ್ರೀ ನಾದಾನಂದನಾಥ ಸ್ವಾಮೀಜಿಯವರ ಸಹಯೋಗದಲ್ಲಿ ಹೊತ್ತಿಗೆ ಲೋಕಾರ್ಪಣೆ, ಸಾಧಕ ಜೀವಿಗಳಿಗೆ ಸನ್ಮಾನದ ದೀವಿಗೆ , ವಿಚಾರ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರ ಇಂದಿನ ಸಂಕಷ್ಟ ಮತ್ತು ಅದರ ಪರಿಹಾರ ಕುರಿತು ಮಾತನಾಡಿ ಕೊರೋನ ಬಂದ ಸಂದರ್ಭದಲ್ಲಿ ಹೊರ ರಾಷ್ಟ್ರಗಳು ಒಂದು ಮಾತನ್ನು ಹೇಳಿದ್ದವು ಕೊರೋನದಿಂದ ಭಾರತ ಹೆಚ್ಚು ಸಾವು ಮತ್ತು ನೋವನ್ನು ಅನುಭವಿಸಿ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.ಜಿಡಿಪಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಲಿದೆ ಎಂದಿದ್ದರು.6.5 ಇದ್ದ ಜಿಡಿಪಿ ಕೊರೋನ ಬಂದು ಹೋದ ಎರೆಡು ವರ್ಷದ ನಂತರ 8.8 ಜಿಡಿಪಿ ಬಂತು.ಕಾರಣ ರೈತರು ಯಾವುದೇ ಕೊರೋನಾಗೂ ಹೆದರದೆ ತಮ್ಮ ಕಾಯಕವನ್ನು ಹೊಲ,ಗದ್ದೆಗಳಲ್ಲಿ ಮಾಡಿದ್ದರ ಫಲ.ಪ್ರಪಂಚದಲ್ಲಿ ಯಾವುದೇ ಟೆಕ್ನಾಲಜಿ ಬಂದರೂ ಹಾಗೂ ದೇವರುಗಳಿಂದಲೂ ಸಹ ರೈತರು ಬೆಳೆಯುವ ಆಹಾರ ಪದಾರ್ಥಗಳನ್ನು ಜೆರಾಕ್ಸ್ ಕೂಡ ಮಾಡಲು ಸಾಧ್ಯವಿಲ್ಲ. ರೈತ ಭೂಮಿಯನ್ನು ಉಳುಮೆ ಮಾಡಿ ಫಸಲು ತೆಗೆದರೆ ಭಾರತ ಸೇರಿದಂತೆ ಇಡೀ ಪ್ರಪಂಚದ ಜನರಿಗೆ ಹೊಟ್ಟೆ ತುಂಬಿಸಲು ಸಾಧ್ಯ ಎಂದರು.

ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ರವರು ಮಾತನಾಡಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಮಣ್ಣೆ ಮೋಹನ್ ರವರು ಕರ್ನಾಟಕದ ಪ್ರತಿ ಹಳ್ಳಿಯ,ಎಲೆಮರೆಕಾಯಿಗಳಂತಿರುವ ಪ್ರತಿಭೆಗಳನ್ನು ಹೊರ ತೆಗೆದು,ಬರ ಸೆಳೆದು, ಬೆಳೆಸಿ,ಬೆಳಗಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಇವರ ಈ ಮಹತ್ಕಾರ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಾದರಿ ಎಂದು ತಿಳಿಸಿ ಯುವ ಸಮೂಹ ನಮ್ಮ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಬಗ್ಗೆ ತಿಳುವಳಿಕೆ ಪಡೆಯುವುದು ಹೆಚ್ಚು ಸೂಕ್ತ.ಅದಕ್ಕಾಗಿ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಿಕೆ ಆಸಕ್ತಿ ಮೂಡಲು ಸಹಾಯಕವಾಗುತ್ತದೆ. ಜೊತೆಗೆ ನಮ್ಮ ನಾಡಿನ ಪರಂಪರೆಯನ್ನು ಪಸರಿಸಲು ಸಾಧ್ಯವಾಗುತ್ತದೆಂದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷರಾದ ಸತೀಶ್ ಜವರೇಗೌಡರವರು ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಅಭಿಮಾನಿಗಳ ಸಂಘಗಳು ಬೃಹತ್ ಸಂಖ್ಯೆಯಲ್ಲಿ ಬೆಳೆಯುತ್ತಿವೆ.ರಾಜಕಾರಣಿಗಳು, ಸೋಷಿಯಲ್ ಮೀಡಿಯಾದಲ್ಲಿ ಹೈಲಾಟ ಆಡುವವರು,ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರು,ರೀಲ್ಸ್ ಮಾಡುವವರ ಹೆಸರುಗಳಲ್ಲಿ ಅಭಿಮಾನಿ ಸಂಘಗಳು ಹುಟ್ಟಿಕೊಳ್ಳುತ್ತಿವೆ.ವಾಸ್ತವವಾಗಿ ಸಂಘಗಳು ಹುಟ್ಟ ಬೇಕಿರುವುದು ಅನ್ನ ಕೊಡುವ ರೈತ,ದೇಶ ಕಾಯುವ ಸೈನಿಕ ಇದಕ್ಕೂ ಮಿಗಿಲಾಗಿ ಜನ ಸಮುದಾಯಕ್ಕೆ ಅರಿವನ್ನು ಮೂಡಿಸುವಂತಹ ಸಾಹಿತ್ಯದ ಅಭಿಮಾನ ಸಂಘಗಳು ಹುಟ್ಟಬೇಕಿತ್ತು.ಜನರ ಅಭಿರುಚಿ,ದೃಷ್ಟಿ ಕೋನಗಳು ಬದಲಾಗಿರುವುದರಿಂದ,ಕ್ಷಣಿಕ ಸುಖಕ್ಕೆ ತುತ್ತಾಗಿರುವುದರಿಂದ ಇಂದು ಸಾಹಿತ್ಯ, ಸಂಸ್ಕೃತಿ,ನೆಲ,ಜಲ ಇದಕ್ಕೆ ಕುರಿತಾದಂತಹ ಸಂಘಟನೆಗಳ ಕೊರತೆ ಅಪಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಇದರ ನಡುವೆ ಕಳೆದೊಂದು ದಶಕಗಳಿಂದ ಕೊಂಚ ಭರವಸೆ ಇಟ್ಚುಕ್ಕೊಳ್ಳುವಂತಹ ದಿಕ್ಕಿನಲ್ಲಿ ಕನ್ನಡ ನಾಡಿನಲ್ಲಿ ಹಲವಾರು ಸಾಹಿತ್ಯ,ಸಂಸ್ಕೃತಿಯ,ಪರಿಚಾರಿಕೆಯನ್ನ ಮಾಡಲು ಸಂಘಟನೆಗಳು ಹುಟ್ಟಿಕೊಂಡಿವೆ ಅದರಲ್ಲಿ ಗಮನಾರ್ಹವಾಗಿ ಗುರುತಿಸಬಹುದಾದ ಸಂಸ್ಥೆ ಜ್ಞಾನಗಂಗಾ ಸಂಸ್ಥೆ ಎಂದು ಶ್ಲಾಘಿಸಿದರು.

ಭ್ರಷ್ಟಾಚಾರ, ಸಾಮಾಜಿಕ ಜಾಲತಾಣಗಳು,ಪ್ರಚಾರಗಳು ವಿಕೇಂದ್ರಿಕರಣವಾಗುತ್ತಿವೆ.ಎಲ್ಲಿ ಕಲೆ,ಸಾಹಿತ್ಯ, ಸಂಗೀತ,ಸಂಸ್ಕೃತಿ,ರಂಗಭೂಮಿ,ಕ್ರೀಡಾ ಚಟುವಟಿಕೆಗಳು ವಿಸ್ತಾರಗೊಳ್ಳುತ್ತವೆ ಅಂತಹ ಕಡೆ ಅತ್ಯುತ್ತಮ ಸಮಾಜ ನಿರ್ಮಾಣ ಹಾಗೂ ವ್ಯಕ್ತಿತ್ವಗಳು ರೂಪುಗೊಳ್ಳುತ್ತವೆ.ಮಣ್ಣೆ ಮೋಹನ್ ರವರ ನೂತನ ಕೃತಿ ಕರುನಾಡ ಕದನ ಕಲಿಗಳು ಯುವ ಜನತೆ ಹಾಗೂ ವಿದ್ಯಾರ್ಥಿಗಳನ್ನು ಮುಟ್ಚುವಂತ್ತಾಗಲಿ. ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾರಣರಂಗದಲ್ಲಿ ಕರ್ನಾಟಕದ ಪಾತ್ರ ಅಗಾಧವಾಗಿದೆ.
–ಸತೀಶ್ ಜವರೇಗೌಡ, ಅಧ್ಯಕ್ಷರು
ಸ್ಪಂದನ ಸಾಂಸ್ಕೃತಿಕ ಪರಿಷತ್ತು
ಮೈಸೂರು.
ಸಿರಿ ಧಾನ್ಯಗಳು ಮತ್ತು ಆರೋಗ್ಯಕರ ನೈಸರ್ಗಿಕ ಜೀವನ ಶೈಲಿಯ ಪ್ರತಿಪಾದಕರಾದ ಡಾ.ಸರಳಾ ಕೀಕೊ ರವರು ಔಷದ ಮುಕ್ತ ಜೀವನಕ್ಕೆ ಸಮೃದ್ಧ ಆಹಾರದಿಂದ ಸುಸ್ಥಿರ ಆರೋಗ್ಯದೃಡೆಗೆ ವಿಷಯವನ್ನು ಬಹಳ ಸರಳವಾಗಿ ತಿಳಿಸಿ ವಿಷ ಮುಕ್ತ ಆಹಾರಗಳಿಂದ ಮುಕ್ತಿ ಪಡೆಯೋಣ ಎಂದರು.

ಇದೇ ಸಂದರ್ಭದಲ್ಲಿ ಹಲವು ಹೊತ್ತಿಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಪ್ರೊ.ಭೋಗಣ್ಣರವರ ಜೀವನ ದರ್ಪಣ,ಹೆಚ್.ಎನ್.ಸುಮಲತಾರವರ ಭಾವದೊರತೆ,ಚೈತ್ರ ಗೋವರ್ಧನ್ ರವರ ಅಂಧರ ಅಂದದ ಅಂಗಳ,ಪರಮಾನಂದ ಬಳ್ಳೊಳ್ಳಿ ರವರ ಮನಸ್ಸಿನ ಮಾತು ಕಾಗದದ ಮೇಲೆ,ಕೆ.ಎಸ್.ಮಮತಾರವರ ಮಮತೆಯ ಕಡಲು,ಹೆಚ್.ಸರಿತಾಕಾಡುಮಲ್ಲಿಗೆ ಯವರ ಮರಳಿ ನೆನಪುಗಳ ದಾರಿಯಲ್ಲಿ ಹೊತ್ತಿಗೆಗಳನ್ನು ಮುಖ್ಯ ಅತಿಥಿಗಳು ಲೋಕಾರ್ಪಣೆಗೊಳಿಸಿದರು.

ಇದೇ ಸಂದರ್ಭದಲ್ಲಿ ಹಲವು ರಂಗಗಳಲ್ಲಿ ಸಾಧನೆಗೈದು ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1. ಸಾಧಕರು : ಡಾ. ಸರಳಾ ಕೀಕೊ
ಪ್ರಶಸ್ತಿ: ‘ಆರೋಗ್ಯ ಆಶ್ವಿನಿ”
2. ಸಾಧಕರು : ಶ್ರೀಯುತ ಮಾದೇಗೌಡರು ಗ್ರಾಮದ ಯಜಮಾನರು ಪ್ರಶಸ್ತಿ: “ಗ್ರಾಮ ಸ್ವರಾಜ್ಯದ ಸಾಮ್ರಾಟ”
3. ಸಾಧಕರು : ಶ್ರೀಯುತ ಸಿದ್ದೇಗೌಡರು ಬಸವನಹಳ್ಳಿ ಗ್ರಾಮದ ಅಧ್ಯಕ್ಷರು ಪ್ರಶಸ್ತಿ: “ಗ್ರಾಮ ಸ್ವರಾಜ್ಯದ ಸಂಪಾರ”
4. ಸಾಧಕರು : ಶ್ರೀ ವೈ. ಕೆ ಚಂದ್ರು ಸಾವಯವ ಕೃಷಿಕ ಪ್ರಶಸ್ತಿ: ಸಾವಯವ ಕೃಷಿಕ, ಧರಣಿ ಮಂಡಲದ ಧನಿಕ”
5. ಸಾಧಕರು : ಡಾ ಶ್ರೀಹರ್ಷ ಆಯುರ್ವೇದ ವೈದ್ಯಾಧಿಕಾರಿ
6. ಸಾಧಕರು : ಶ್ರೀಮತಿ ಚಾಮಮ್ಮ, ಮರಮ್ಮ, ನೂಜುಳಾ, ರತ್ನಮ್ಮ ಧ್ವಯರು
7. ಸಾಧಕರು : ಶ್ರೀ ಜೆ.ಕೆ ಬಸವರಾಜು ಕೃಷಿಕ ಲೇಖಕ
8. ಸಾಧಕರು : ಶ್ರೀಮತಿ ಪುಷ್ಪ, ಹೆಚ್.ಡಿ ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ my mose mout
9. ಸಾಧಕರು : ಶ್ರೀ ಬನ್ನೂರು ನಾರಾಯಣ್ ರೈತ ಹೋರಾಟಗಾರರು.
10. ಸಾಧಕರು : ಶ್ರೀ ಬಿ ಧನಪಾಲ್ ಸಮಾಜ ಸೇವಕ

ಈ ಸಂದರ್ಭದಲ್ಲಿ ಶೇಷಾದ್ರಿ ಶಾಸ್ತ್ರಿಗಳು, ಛಂದೋಬದ್ಧ ಬರಹಗಾರ್ತಿ ಕೆ.ಪಿ.ಚೋಂದಮ್ಮ ಬಿಟ್ಟೀರ,ಪರಿಸರ ಸಂರಕ್ಷಣೆ, ಸಮಾಜ ಸೇವಕರಾದ ಸುರೇಶ್ ಕೌಜಲಗಿ,ನಿವೃತ್ತ ಕಾರ್ಯ ನಿರ್ವಹಕ ಅಧಿಕಾರಿ ಸಿದ್ದೇಗೌಡ,ಕೈಗಾರಿಕೋಧ್ಯಮಿ ಎಸ್.ಶೇಖರಪ್ಪ,ತುರಗನೂರು ಚಂದ್ರೇಗೌಡ,ಬಿ.ಆರ್.ಪ್ರದೀಪ್ ಕುಮಾರ್,ರಾಘವೇಂದ್ರಾಚಾರ್,ಆಶಾ,ಎಂ.ಎನ್.ನವೀನ್ ಕುಮಾರ್, ತೇಜುರತ್ನ,ಕೆ.ಎಸ್.ಮಮತಾ,ನಂದಾದೀಪ,ಕಮಲಾಕ್ಷಿ ಕೌಜಲಗಿ,ಹಾಲೇನಹಳ್ಳಿ ರಘುರಾಂಜೀ,ಬೇಗೂರು ವೀಣಾ,ಶ್ರೀನಿವಾಸಮೂರ್ತಿ, ಜೆ.ಕೆ.ಬಸವರಾಜು ಸೇರಿದಂತೆ ಹಲವಾರು ಯುವ ಸಾಹಿತಿಗಳು,ಬರಹಗಾರರು,ಕವಿಗಳು ಉಪಸ್ಥಿತಿತರಿದ್ದರು.
ಎಂ.ನಾಗೇಂದ್ರಕುಮಾರ್.
