ತುಮಕೂರು:ರಾತ್ರಿ ಹೊತ್ತು ವಾಹನ ಚಾಲನೆ ಮಾಡುವ ಆಟೋ ಮತ್ತು ಭಾರೀ ವಾಹನ ಚಾಲಕರು ತಮ್ಮ ಕಣ್ಣುಗಳನ್ನು ನಮ್ಮ ವಾಸನ್ ಐ ಕೇರ್ ನಲ್ಲಿ ಉಚಿತವಾಗಿ ಪರೀಕ್ಷಿಸಿಕೊಂಡು ಅಗತ್ಯಬಿದ್ದರೆ ಉಚಿತವಾಗಿ 10ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು 10ಜನ ಆಟೋ ಚಾಲಕರುಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು,ಚಾಲಕರುಗಳಿಗೆ ಕಣ್ಣು ಬಹಳ ಮುಖ್ಯವಾದ ಅಂಗ,40ವರ್ಷ ಮೇಲ್ಪಟ್ಟ ಎಲ್ಲ ಚಾಲಕರು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು,50-60 ವರ್ಷದವರಿಗೆ ಕಣ್ಣಿನ ಪೊರೆ ಬರುವುದು ಸಹಜ ಆದ್ದರಿಂದ ಎಲ್ಲರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಕಡ್ಡಾಯ,ಮಧುಮೇಹ ಇರುವವರು ಕಣ್ಣಿನ ಸುರಕ್ಷತೆಯ ಬಗ್ಗೆ ಗಮನಹರಿಸಿ,ಎಲ್ಲ ಆಟೋ ಚಾಲಕರುಗಳಿಗೆ ರಿಯಾಯಿತಿ ದರದಲ್ಲಿ ಶಸ್ತçಚಿಕಿತ್ಸೆ ಮಾಡಲಾಗುವುದು ಅದರ ಜೊತೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ವಿತರಿಸಲಾಗುವುದು ಆಟೋ ಚಾಲಕರು ಮತ್ತು ಅವರ ಕುಟುಂಬ ವರ್ಗದವರು ವಾಸನ್ ಐ ಕೇರ್ ಗೆ ಭೇಟಿ ನೀಡಿ ಉಚಿತ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ವಾಸನ್ ಐ ಕೇರ್ ನ ಡಾ||ಸ್ಮಿತಾರವರು ತಿಳಿಸಿದರು.
ಅವರು ಇಂದು ನಗರದ ಎಸ್.ಎಸ್.ಪುರಂ ನಲ್ಲಿರುವ ವಾಸನ್ ಐ ಕೇರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಆಟೋ ಚಾಲಕರು ಮತ್ತು ಅವರ ಕುಟುಂಬವರ್ಗದವರಿಗೆ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದ ಕುರಿತು ಮಾತನಾಡಿದರು.

ಸಂಚಾರಿ ಪೋಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆದ ರಘುರವರು ಮಾತನಾಡುತ್ತಾ ಕಣ್ಣು ಮಾನವನ ಬಹು ಮುಖ್ಯ ಅಂಗ ಚಾಲಕರು ಕಣ್ಣಿನ ಬಗ್ಗೆ ಜಾಗೃತಿ ವಹಿಸಿ,ಕಾನೂನುಗಳನ್ನು ಗೌರವಿಸಿ ಆಟೋದೊಂದಿಗೆ ಇನ್ಸುರೆನ್ಸ್,ವಾಹನ ಚಾಲನಾ ಪರವಾನಗಿ,ಎಫ್.ಸಿ.ಇಟ್ಟುಕೊಂಡಿರಿ,ಚಾಲಕರ ಪಕ್ಕದಲ್ಲಿ ಹಣದ ಆಸೆಗೆ ಬೇರೆಯವರನ್ನು ಕೂರಿಸಿಕೊಂಡು ವಾಹನ ಚಾಲನೆ ಮಾಡಬೇಡಿ,ಯೂನಿಫಾರಂ ಹಾಕಿಕೊಳ್ಳಿ,ಟ್ರಾಫಿಕ್ ಸಿಗ್ನಲ್ ನ್ನು ಅನುಸರಿಸಿ 2ಸೆಕೆಂಡ್ ನಿಂತುಕೊಂಡರೆ ನಿಮಗೆ ಏನೂ ನಷ್ಠವಾಗುವುದಿಲ್ಲ ಅತಿವೇಗದಿಂದ ಅಪಘಾತಗಳನ್ನು ತಪ್ಪಿಸಿ,ದ್ವಿಚಕ್ರ ವಾಹನ ಚಾಲನೆ ಮಾಡುವವರು ಹೆಲ್ಮೆಟ್ ನ್ನು ಕಡ್ಡಾಯವಾಗಿ ಹಾಕಿಕೊಳ್ಳಿ ಪ್ರಾಣ ಬಹಳ ಮುಖ್ಯ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ||ಶೃತಿ,ವಾಸನ್ ಐ ಕೇರ್ ನ ಮಾರುಕಟ್ಟೆ ಮುಖ್ಯಸ್ಥ ನಾಗೇಂದ್ರ,ವ್ಯವಸ್ಥಾಪಕರಾದ ನವೀನ್, ಆಟೋ ಚಾಲಕರ ಮುಖಂಡ ನವೀನ್ ರಾಜಣ್ಣ,ಸಂಚಾರಿ ಠಾಣೆಯ ಪೇದೆ ಮಧು, ಮುಂತಾದವರು ಉಪಸ್ಥಿತರಿದ್ದರು
