ತುಮಕೂರು:ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 7/4 ಕೋಯ್ ಎನ್.ಸಿ.ಸಿ ವಿದ್ಯಾರ್ಥಿನಿ ಜೆಯುಒ ಎಂ.ದೇವಮ್ಮ ರವರು ದೆಹಲಿಯ ಥಾಲ್ ಸೈನಿಕ್ ಶಿಬಿರದಲ್ಲಿ (ಟಿ.ಎಸ್.ಸಿ) ಅತ್ಯುತ್ತಮ ಸಾಧನೆಗಾಗಿ ಮುಖ್ಯಮಂತ್ರಿ ಪ್ರಶಸ್ತಿಯನ್ನು ಪಡೆದಿದ್ದು ಅವರನ್ನು ಹೆಮ್ಮೆಯಿಂದ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.ವಿದ್ಯಾರ್ಥಿನಿ ದೇವಮ್ಮನವರ ಅನುಕರಣೀಯ ಸಮರ್ಪಣೆ, ಶಿಸ್ತು ಮತ್ತು ಕಾರ್ಯಕ್ಷಮತೆಯು ಘಟಕ ಮತ್ತು ಸಂಸ್ಥೆಗೆ ಅಪಾರ ಹೆಮ್ಮೆ ಮತ್ತು ಗೌರವವನ್ನು ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ||ಟಿ.ಬಿ.ನಿಜಲಿಂಗಪ್ಪನವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಕೆ ಬಿ ಚಂದ್ರಚೂಡ್
