ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜು ಇರಕಸಂದ್ರ ಕಾಲೋನಿಯಲ್ಲಿ ಅಂತಿಮ ಘಟ್ಟದ ದ್ವಿತೀಯ ಪಿಯುಸಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಕಾಲೇಜಿನ ಮೈದಾನದಲ್ಲಿ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಚಲನ ಚಿತ್ರ ನಟರಾದ ಹನುಮಂತೇಗೌಡರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಪರಮೇಶ್ ಮಾತನಾಡಿ: ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜು ತೊರೆದು ಮುಂದಿನ ದಿನಗಳಲ್ಲಿ ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ಮಾಡಬೇಕು. ಬರುವಂತಹ ಪರೀಕ್ಷೆಯಲ್ಲಿ ಅವರು ಗಟ್ಟಿಯಾಗಿ ದೃಢ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಹೋಗಬೇಕು. ಅದೇ ರೀತಿಯಾಗಿ ಅವರಿಗೆ ಉನ್ನತವಾಗಿರುವಂತಹ ವ್ಯಕ್ತಿಯನ್ನು ಅವರಲ್ಲಿರುವ ವ್ಯಕ್ತಿತ್ವ ವನ್ನು ಪರಿಚಯ ಮಾಡುವ ಮುಖಾಂತರ ಸಮಾಜದಲ್ಲಿ ಪೈಪೋಟಿ ಮಾಡುವಂತಹ ವ್ಯಕ್ತಿಗಳಾಗಬೇಕು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಗುರಿಯನ್ನು ಇಟ್ಟುಕೊಳ್ಳಬೇಕು. ಒಳ್ಳೆಯ ಫಲಿತಾಂಶವನ್ನು ಕಾಲೇಜಿಗೆ ತೆಗೆದುಕೊಂಡು ಬನ್ನಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಒಳ್ಳೆ ಒಳ್ಳೆಯ ಕೆಲಸಗಳನ್ನು ಸೇರಿಕೊಂಡು ನಿಮ್ಮ ತಂದೆ ತಾಯಂದಿರಿಗೆ ಹೆಸರನ್ನು ತನ್ನಿ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್. ಡಿ .ಎಮ್.ಸಿ. ಉಪಾಧ್ಯಕ್ಷರಾದ ಈಶ್ವರ್ ರವರಿಗೆ ಕಾಲೇಜಿನಿಂದ ಸನ್ಮಾನ ಮಾಡಲಾಯಿತು ಸಂದರ್ಭದಲ್ಲಿ ಚಲನಚಿತ್ರ ನಟರಾದ ಹನುಮಂತೇಗೌಡ ಕೆ.ಪಿ.ಎಸ್. ಶಾಲೆಯ ಎಸ್. ಡಿ. ಎಂ.ಸಿ. ಉಪಾಧ್ಯಕ್ಷ ಈಶ್ವರ್ ಡಾ. ರವಿಕುಮಾರ್ ನಿಹಾ. ಎಚ್.ಎಸ್. ಪ್ರಸನ್ನ. ಆಂಜನೇಯ. ಶಿವಸ್ಸ. ರೋಹಿಣಿ. ನಾಗೇಂದ್ರ. ಪಿಂಟು. ಸತೀಶ್ ಕುಮಾರ್. ವೆಂಕಟೇಶ್. ದುಶಾಂತ್. ಸಹಾಯಕರಾದ ನರಸಿಂಹಮೂರ್ತಿ ಹಾಗೂ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರುಹಾಜರಿದ್ದರು.

–ವರದಿ ನರಸಿಂಹಯ್ಯ ಹೊಸಕೋಟೆ
