ಕೊರಟಗೆರೆ:- ಮಾರ್ಚ್ 2026ರಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಎ ಐ ತಂತ್ರಜ್ಞಾನದ ಸಹಾಯದಿಂದ ಮೂರು ಭಾಷೆಗಳಾದ ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಗೀತ ಸಂಯೋಜನೆ ಮಾಡಲಾಗಿದೆ. ಇದು ಒಟ್ಟು 12 ಅಂಕಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಂ ತಿಳಿಸಿದ್ದಾರೆ
ಗೃಹ ಸಚಿವರು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ ಜಿ ಪರಮೇಶ್ವರ್ ಮಾರ್ಗದರ್ಶನ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮಾನ್ಯ ಉಪ ನಿರ್ದೇಶಕರು ಮಾಧವ ರೆಡ್ಡಿ ಅವರ ಸಾರ್ಥಕ ನೇತೃತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಯಾದ ರುದ್ರೇಶ್ ಸಹಕಾರದೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕನ್ನಡ ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಲ್ಲಿ ಕಂಠಪಾಠಕ್ಕೆ ನಿಗದಿ ಪಡಿಸಿರುವ ಪದ್ಯಗಳನ್ನು ತೊವಿನಕೆರೆ ಸಿ ಆರ್ ಪಿ ಗಳಾದ ಹರೀಶ್ ಕುಮಾರ್ ರವರು ಎ ಐ ಆಧಾರಿತ ರಾಜ್ಯ ಸಂಯೋಜನೆಯೊಂದಿಗೆ ಸಿದ್ದಪಡಿಸಲಾಗಿದೆ.

ಈ ವಿನೂತನ ಶೈಕ್ಷಣಿಕ ಪದ್ಯವನ್ನು ಕೊರಟಗೆರೆ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲ ಆಗುವಂತೆ ಸಿದ್ದಪಡಿಸಿದ್ದು ಪತ್ರಿಕೆಯಲ್ಲಿ ಪ್ರಕಟಣೆಗೊಂಡಿರುವ ಕ್ಯೂ ಆರ್ ಕೊಡನ್ನು ಸ್ಕ್ಯಾನ್ ಮಾಡಿಕೊಂಡು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
✍️ ವರದಿ: ಶ್ರೀನಿವಾಸ್ ಕೊರಟಗೆರೆ
