ಟಿ.ನರಸೀಪುರ : ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಮಾಡಿದ ಹಿನ್ನೆಲೆಯಲ್ಲಿ ಒಪ್ಪಂದದ ಸಹಿ ಪತ್ರವನ್ನು ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಮೈಸೂರು ಚಾಮರಾಜನಗರ ಜಿಲ್ಲಾ ಕಾರ್ಯ ಅಧ್ಯಕ್ಷರಾದ ಕಿರಗಸೂರು ಶಂಕರ್ ನೇತೃತ್ವದಲ್ಲಿ ಕಿರಗಸೂರು ಗ್ರಾಮ ಪಂಚಾಯತಿ ಮುಂಭಾಗ ಗ್ರಾಮಸ್ಥರು ಹಾಗೂ ರೈತ ಮುಖಂಡರು ಸಹಿ ಪತ್ರವನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಿರಗಸೂರು ಗ್ರಾಮದಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ರಾಜಕೀಯ ತರ ಸಂಘಟನೆ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟ ಹಿನ್ನೆಲೆಯಲ್ಲಿ ಸಹಿ ಪತ್ರ ಸುಟ್ಟು ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ ಭಾರತ,ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ರೈತರಿಗೆ ಮರಣ ಶಾಸನ ಬರಿದಂತ್ತಾಗಿದ್ದು,ಕೃಷಿ ವಲಯಕ್ಕೆ ದೊಡ್ಡ ಆಘಾತ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ರೈತರಿಗೆ ಮಾರಕವಾಗುವ ಭಾರತ ಹಾಗೂ ಅಮೆರಿಕ ಜಂಟಿ ಹೇಳಿಕೆಯ ಪ್ರತಿಯನ್ನು ಸುಟ್ಟುಹಾಕಿ ವಿರೋಧ ವ್ಯಕ್ತಪಡಿಸುತ್ತಿದ್ದೇವೆ.

ಈ ಸಹಿಯನ್ನು ಹಿಂಪಡೆಯದಿದ್ದರೆ ಮುಂಬರುವ ದಿನಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ದೇಶಾದ್ಯಂತ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ,ಈ ಸಹಿಯನ್ನು ಹಿಂಪಡೆಯದಿದ್ದರೆ ಮುಂಬರುವ ದಿನಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ದೇಶಾದ್ಯಂತ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಾರ್ಚಿ 19 ಗುರುವಾರದಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ರೈತರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು ಅಮೇರಿಕಾ ಭಾರತ ಒಪ್ಪಂದದ ವಿಚಾರವವೂ ಸೇರಿ ರೈತರ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಬಗ್ಗೆ ಬೃಹತ್ ರೈತರ ಸಮಾವೇಶದಲ್ಲೇ ಎಚ್ಚರಿಕೆ ನೀಡಲಾಗುವುದು.
ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಬೆನಕನಹಳ್ಳಿ ಬಿಪಿ ಪರಶಿವಮೂರ್ತಿ, ಕರುಹಟ್ಟಿ ಉಮೇಶ್,ರಾಜ್ ಕುಮಾರ್,ಕೆಇಬಿ ಯೋಗೇಶ್, ರಘು, ಕಿರಗಸೂರು ಸುರೇಶ್,ರಾಜೀವ್, ಮಹಾದೇವ, ಮಹೇಶ್, ಅಂಕಪ್ಪ ,ಬಸವಲಿಂಗಪ್ಪ, ನಾಗ, ಮಾದೇಶ್, ಸ್ವಾಮಿ, ಚಂದ್ರು, ಶಂಕ್ರಿ ಸೇರಿದಂತೆ ಇನ್ನು ಮುಂತಾದ ರೈತರು ಭಾಗವಹಿಸಿದ್ದರು.
ವರದಿ : ಎಂ.ನಾಗೇಂದ್ರಕುಮಾರ್
