ಕೊರಟಗೆರೆ : ತಾಲ್ಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ.ಮಠಕ್ಕೆಕರ್ನಾಟಕ ರಕ್ಷಣಾ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ಸುನಿಲ್ ಅವರು ಇಂದು ಕುಂಚಿಟಿಗ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಕುಂಚಿಟಿಗ ಸಮುದಾಯದ ಆಧ್ಯಾತ್ಮಿಕ ಕೇಂದ್ರವಾದ ಕುಂಚಿಟಿಗ ಮಠದಲ್ಲಿ. ಡಾ. ಶ್ರೀ ಹನುಮಂತನಾಥ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಕನ್ನಡ ಪರ ಹೋರಾಟಗಳು, ಯುವಜನ ಸಂಘಟನೆಗಳ ಬಲವರ್ಧನೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಯುವಕರಲ್ಲಿ ಕನ್ನಡ ಪ್ರೇಮವನ್ನು ಬೆಳೆಸಿ ಯುವಕರನ್ನ ಕನ್ನಡ ಪರವಾಗಿ ಮುಂಚೂಣಿಗೆ ತರುವ ದೃಷ್ಟಿಯಲ್ಲಿ ರಾಜ್ಯಧ್ಯಕ್ಷರಾದ ಸುನಿಲ್ ಕರ್ನಾಟಕ ರಕ್ಷಣಾ ಯುವ ವೇದಿಕೆ ಎಂಬ ಸಂಘಟನೆಯನ್ನು ಪ್ರಾರಂಭ ಮಾಡಿ ರಾಜ್ಯಾದ್ಯಂತ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ನಾಡು ನುಡಿ ರಕ್ಷಣೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಯುವಕರು ದೇಶದ ಶಕ್ತಿಯಾಗಿ ಹೊರಬರಬೇಕು ಎಂಬ ಗುರಿ ಹಾಗೂ ಇಂತಹ ಕನ್ನಡಪರ ಸಂಘಟನೆಗಳಿಗೆ ಸಮಾಜದ ಪ್ರಮುಖ ಮುಖಂಡರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಬದುಕು ಸ್ವಾರ್ಥದ ಬದುಕಾಗಬಾರದು. ಎಂದು ಡಾ. ಶ್ರೀ ಹನುಮಂತನಾಥ ಸ್ವಾಮಿಗಳು ನಾವು ನಿಸ್ವಾರ್ಥಿಗಳಾಗಬೇಕು ಸಮಾಜದ ಬಲಹೀನರ ಬಲವಾಗಿ ಕನ್ನಡ ನಾಡು ನುಡಿಗೆ ತನು ಮನವನ್ನು ಅರ್ಪಿಸಲು ಕನ್ನಡಿಗರು ಮುಂದಾಗಬೇಕು ಎಂದರು.
ರಾಜ್ಯಾಧ್ಯಕ್ಷರಾದ ಸುನಿಲ್ ರವರು ಮಾತನಾಡಿ : ನಮ್ಮ ಕರ್ನಾಟಕ ಹಾಗೂ ಕನ್ನಡ ಭಾಷೆಗೆ ಸುಮಾರು 2500 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು. ತಾಯಿ ಭಾಷೆಗೆ ಹೆಚ್ಚು ಒತ್ತನ್ನು ಸರ್ಕಾರ ನೀಡಬೇಕು. ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯ ಬಗ್ಗೆ ತಕ್ಷಣವಾಗಿ ಗಮನಿಸಿ ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆದ್ಯತೆಯನ್ನು ಕೊಡಬೇಕು.
ಕರ್ನಾಟಕದ ಜ್ವಾಲಾಂತ ಸಮಸ್ಯೆಗಳ ನಾಡು ನುಡಿ ರಕ್ಷಣೆಗೆ ರೈತರ ವಿಚಾರಧಾರೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕರ ಹಾಗೂ ಶೋಷಿತ ಮಹಿಳೆಯರ ಪರವಾಗಿ ವಿದ್ಯಾರ್ಥಿಗಳ ಪರವಾಗಿ ಯೋಜನಾತ್ಮಕ ಸಂಘಟಿತ ಮತ್ತು ಅಸಂಘಟಿತ ಪರವಾಗಿ ನಿರಂತರವಾಗಿ ನಮ್ಮ ಸಂಘಟನೆ ಸಮಾಜ ಸೇವೆಯಲ್ಲಿ ನಿಮ್ಮ ಜೊತೆಯಲ್ಲಿರುತ್ತೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಸುನಿಲ್ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷರಾದ ಕೃಷ್ಣ ಜಿಲ್ಲಾಧ್ಯಕ್ಷರಾದ ಉಮೇಶ್ ತುಮಕೂರು ಟೌನ್ ಅಧ್ಯಕ್ಷರಾದ ಆಟೋ ಚಾಲಕರ ತಾಲೂಕುಅಧ್ಯಕ್ಷ ರಮೇಶ್ ಮಹಿಳಾ ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ರಾಧಾ ಕಾರ್ಮಿಕ ಘಟಕ ತಾಲ್ಲೂಕು ಅಧ್ಯಕ್ಷರು ಮೆಡಿಕಲ್ ಹನುಮಂತ ರಾಜು ಸಂಘಟನೆಯ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
ವರದಿ : ನರಸಿಂಹಯ್ಯ ಹೊಸಕೋಟೆ
