ಮೈಸೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಕುರಿತು ಸ್ಪಷ್ಟನೆ ನೀಡುವಂತೆ ಹಾಗೂ ಸಮಗ್ರ ವೈಟ್ ಪೇಪರ್ ಬಿಡುಗಡೆ ಮಾಡುವಂತೆ ಕರ್ನಾಟಕ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರಿಗೆ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಾಮ್ರಾಟ್ ಸುಂದರೇಶನ್ ಆಗ್ರಹಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೃ ಮಾತನಾಡಿ ಸಂವಿಧಾನಾತ್ಮಕ ಸ್ಪಷ್ಟತೆ ಮತ್ತು ನ್ಯಾಯಕ್ಕಾಗಿ ಎಸ್ಸಿ ಹೊಲೆಯ ಸಮುದಾಯವು ಇಂದು ಬೀದಿಗಿಳಿದು ಹೋರಾಟ ಮಾಡುವಂತ್ತಾಗಿದೆ.ಕಾಲ,ಕಾಲಕ್ಕೂ ಈ ಸಮುದಾಯ ತನ್ನ ನ್ಯಾಯಯುತ ಬೇಡಿಕೆಗಳಿದ್ದರು ಅದನ್ನು ಪಡೆದುಕೊಳ್ಳಲು ಹೋರಾಟ ಮಾಡಿಯೇ ತೀಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮುದಾಯದ ದುರಂತ ಎನ್ನಬಹುದೆಂದರು.
ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರು ಕಾನೂನು ಮತ್ತು ಸಂವಿಧಾನದ ಪ್ರಕಾರವೇ ಜಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.ಅದನ್ನು ನಾವು ಗೌರವಿಸುತ್ತೇವೆ.ಆದರೆ ಪರಿಗಣನೆಯಲ್ಲಿರುವ ರೂಪುರೇಷೆಗಳ ಬಗ್ಗೆ ಸಂಪೂರ್ಣ ವಿವರ ನೀಡಬೇಕು. ಸಮುದಾಯವನ್ನು ಅಂಧಕಾರದಲ್ಲಿ ಇಡಬಾರದೆಂದರು.
ಸರ್ಕಾರವು ತಕ್ಷಣ ವೈಟ್ ಪೇಪರ್ ಬಿಡುಗಡೆ ಮಾಡುವಾಗ
ಅವಲಂಬಿಸಿರುವ ಸಂವಿಧಾನಾತ್ಮಕ ಮತ್ತು ಕಾನೂನು ಆಧಾರಗಳು.ನಿರ್ಧಾರಕ್ಕೆ ಆಧಾರವಾಗಿರುವ ಅಂಕಿ-ಅಂಶಗಳು ಅಥವಾ ಆಯೋಗಗಳ ವರದಿಗಳು
ಪರಿಶಿಷ್ಟ ಜಾತಿಯೊಳಗಿನ ಉಪವರ್ಗೀಕರಣದ ಮಾನದಂಡಗಳು,ಜಾರಿಗೆ ತರಲಿರುವ
ಸಮಾನತೆ ಮತ್ತು ನ್ಯಾಯ ಖಚಿತಪಡಿಸುವ ಭದ್ರತಾ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಇರಬೇಕೆಂದರು.
ವಿದ್ಯಾರ್ಥಿಗಳ ಭವಿಷ್ಯ ಕುರಿತು ಆತಂಕ ವ್ಯಕ್ತಪಡಿಸಿ, ಸರ್ಕಾರ ವಿದ್ಯಾರ್ಥಿಗಳ ಭಾವನೆ ಮತ್ತು ಭವಿಷ್ಯದೊಂದಿಗೆ ಆಟವಾಡಬಾರದು.ನೀತಿ ಸ್ಪಷ್ಟತೆಯ ಕೊರತೆಯಿಂದ ಯುವಕರಲ್ಲಿ ಭಯ ಮತ್ತು ಅನಿಶ್ಚಿತತೆ ಉಂಟಾಗುತ್ತದೆ ಎಂದು ಹೇಳಿ,ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.
ನ್ಯಾಯ ಮತ್ತು ಸ್ಪಷ್ಟತೆಯ ಬೇಡಿಕೆಗೆ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ಕಾಣಬಾರದು.ಅವರ ಮೇಲೆ ದಾಖಲಿಸಿರುವ ಎಫ್ಐಆರ್ಗಳನ್ನು ತಕ್ಷಣ ಹಿಂಪಡೆದು ಸಂವಾದಕ್ಕೆ ಮುಂದಾಗಬೇಕು.ಸರ್ಕಾರ ಸಮಗ್ರ ಸ್ಪಷ್ಟನೆ ನೀಡಿ ಜನರ ವಿಶ್ವಾಸವನ್ನು ಕಾಪಾಡಬೇಕು.
ಸಾಮ್ರಾಟ್ ಸುಂದರೇಶನ್
ಜಿಲ್ಲಾ ಕಾರ್ಯದರ್ಶಿ
ಬಿಜೆಪಿ ಮೈಸೂರು ಗ್ರಾಮಾಂತರ
– ನಾಗೇಂದ್ರ ಕುಮಾರ್ ಎಂ.
