ಬೆಂಗಳೂರು: ಸಾಹಿತಿ, ಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಸಂಘಟಕರಾದ ಡಾ. ಸಿಸಿರಾ ಅವರ ಸ್ಮರಣಾರ್ಥವಾಗಿ ಡಾ. ಸಿಸಿರಾ ಸ್ನೇಹ ಬಳಗದಿಂದ ನೀಡಲಾಗುವ 2025ನೇ ಸಾಲಿನ ಡಾ. ಸಿಸಿರಾ ಯುವ ಸಾಹಿತಿ ಹಾಗೂ ಯುವ ಸಂಘಟಕ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಯನ್ನು ಪ್ರತಿ ವಿಭಾಗದಲ್ಲಿ ತಲಾ ಒಬ್ಬ ನಿಜವಾದ ಸಾಧಕರಿಗೆ ನೀಡಲಾಗುತ್ತದೆ. ಇದುವರೆಗೆ ಯಾವುದೇ ಪ್ರಮುಖ ಪ್ರಶಸ್ತಿಗೆ ಆಯ್ಕೆಯಾಗದ 45 ವರ್ಷ ವಯೋಮಾನದೊಳಗಿನ ಯುವ ಸಾಹಿತಿಗಳು ಹಾಗೂ ಸಾಂಸ್ಕೃತಿಕ ಸಂಘಟಕರು ಈ ಪ್ರಶಸ್ತಿಗೆ ಶಿಫಾರಸು ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ಅಥವಾ ಶಿಫಾರಸು ಮಾಡುವವರು ಸಾಧಕರ ಕಿರು ಪರಿಚಯ, ಫೋಟೋ ಹಾಗೂ ವಿವರಗಳನ್ನು ಮಾರ್ಚ್ 15ರೊಳಗೆ ಕೆಳಗಿನ ಮೊಬೈಲ್ ಸಂಖ್ಯೆಗಳಲ್ಲೊಂದಕ್ಕೆ ಕಳುಹಿಸಬಹುದು. ಆಯ್ಕೆಯಾದವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗುವುದು.
ಪ್ರಶಸ್ತಿಯಲ್ಲಿ ನಗದು ಬಹುಮಾನ, ಶಾಲು, ಹಾರ, ಫಲ ಹಾಗೂ ಸ್ಮರಣಿಕೆಗಳನ್ನು ನೀಡಲಾಗುತ್ತದೆ. ಏಪ್ರಿಲ್ 19ರಂದು ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಕುರಿತು ಡಾ. ಸಿಸಿರಾ ಸ್ನೇಹ ಬಳಗದ ಸಂಚಾಲಕರಾದ ಡಾ. ಕೃಷ್ಣ ಹಾನ್ ಬಾಳ್ ಹಾಗೂ ಎ.ವಿ. ಗುರುತೇಜಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಕ್ಕೆ:
9535187323
9449115371
9448880985
