ಸ್ತ್ರೀ ಸಮಾನತೆಯೆಂದರೇˌ ಪುರುಷನ ಅನುಕರಿಸುವುದು ಮತ್ತು ಪುರುಷನಂಥೆ ತೋರಿಕೊಳ್ಳುವುದು ಸ್ತ್ರೀ ಸಮಾನತೆಯಲ್ಲ. ಪುರುಷನೊಂದಿಗೆ ಬಾಹ್ಯವಾಗಿ ಸೆಣಸಾಡುವುದರಿಂದ ಅವನ ಶ್ರೇಷ್ಟತೆಯನ್ನು ಸ್ತ್ರೀ ಅಪರೋಕ್ಷವಾಗಿ ಒಪ್ಪಿಕೊಂಡತ್ತೆಯಲ್ಲವೆ? ಸ್ತ್ರೀ ತನ್ನ ಮೃದ್ವುತ್ವ ˌ ನಾಚಿಕೆˌ ಕೋಮಲತೆˌ ಅಕ್ಕರೆˌ ಪ್ರೀತಿ…ಅವಳ ಹುಟ್ಟು ಗುಣ. ಅವೇ ಅವಳಿಗೆ ಭೂಷಣ. ಸ್ತ್ರೀ ತನ್ನ ಅನನ್ಯತೆಯನ್ನು ಉಳಿಸಿಕೊಂಡೆ ಅಸಮಾನತೆಯ ವಿರುದ್ಧ ಹೋರಾಡಬೇಕು. ಪುರುಷನ ಗುಣ ಒರಟುತನˌ ಕಾದಾಟˌ ಹುಂಬತನˌ ಕಠಿಣ…ಅವನ ಗುಣಗಳು. ಆದರೆˌ ಪುರುಷ ಎಂದು ಸ್ತ್ರೀಯಾಗಲಾರ. ಆಕಸ್ಮಿಕವಾಗಿ ಅವನು ಸ್ತ್ರೀಯಂತೆ ವರ್ತಿಸ ತೊಡಗಿದ್ದರೆ ಅವನನ್ನು ಚೆಕ್ಕಾˌ ಖೋಜಾˌ ತೃತಿಯ ಲಿಂಗಿ ಎನ್ನುತ್ತಾರೆ. ಸ್ತ್ರೀ ಪುರುಷ ಇಬ್ಬರು ಒಬ್ಬರನ್ನೊಬ್ಬರು ಅನುಸರಿಸದೆ ವಿಭಿನ್ನವಾಗಿರಬೇಕು.
ಈಗ ಹುಟ್ಟಿಕೊಂಡಿರುವ ಈ ಸ್ತ್ರೀ ಸಮಾನತೆಯ ಪರಿಕಲ್ಪನೆ ಜಾಗತೀಕರಣದ ಕೂಸು. ಇದು ಕಾರ್ಪೋರೇಟ್ ಶೈಲಿಯ ಸ್ತ್ರೀ ಸಮಾನತೆ ಮಹಿಳೆಯ ಅಂತರಂಗದ ಶುದ್ದತೆಯನ್ನೆ ಕೊಂದು ಹಾಕಿˌ ಅವಳೊಂದು ಜಾಹಿರಾತು ವಸ್ತು ಮತ್ತು ಕಾಸ್ಮೆಟಿಕ ಜಗತ್ತಿನ ಗ್ರಾಹಕನ್ನಾಗಿಸಿದೆ..
ಸ್ತ್ರೀ ಸಮಾನಳಾಗಬೇಕೆಂದು ಎಲ್ಲರ ಆಶೆಯ. ಆದರೇ ˌ ಅವಳು ತನ್ನ ನಿಸರ್ಗದತ್ತವಾದ ಹೆಣ್ತತನವನ್ನು ಬಲಿಕೊಟ್ಟು ಸಮಾನತೆ ಸಾಧಿಸಿದೆನೆಂಬುವುದು ಬರಿ ಭ್ರಮೆಯಷ್ಟೆ. ಸ್ತ್ರೀ ಮತ್ತು ಪುರಷ ನೈಸರ್ಗಿಕವಾಗಿ ಇಬ್ಬರು ಸಮಾನರಲ್ಲ ಇಬ್ಬರು ವಿಭಿನ್ನರು. ಹಾಗೇ ನೋಡಿದ್ರೆˌ ಸ್ತ್ರೀ ಪುರುಷಗಿಂತ ಹೆಚ್ಚು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿ.. ಮೇಲು ಕೀಳು ನಮ್ಮ ಸೃಷ್ಟಿಯಷ್ಟೆ.
ಇವತ್ತಿನ ಅಧುನಿಕ ಸ್ರೀ ಸಮಾನತೆ ಕೇವಲ ಷುರುಷನ ವೇಷ- ಭೂಷಣˌ ಕುಡಿತˌ ಲೈಂಗಿಕ ಮುಕ್ತತತೆ ಸಾಧಿಸಲು ಹೋಗಿ ತನ್ನ ಸಹಜವಾದ ಸ್ತ್ರೀತನದ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ. ಪುರುಷನ ಸಮಾನ ಮೋಜು-ಮಸ್ತಿ ಮಾಡುವುದೇ ಕೇವಲ ಸ್ತ್ರೀ ಸಮಾನತೆಯಲ್ಲ… ಮಹಿಳೆಗೆ ಬೇಕಾಗಿರುವುದು ಗೌರವಯುತವಾದ ಬದುಕುˌ ಸಮಾನ ಅವಕಾಶˌ ಪ್ರಾಧ್ಯನತೆ.
ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯ ಪುರುಷನೊಟ್ಟಿಗೆ ಜವಾಬ್ದಾರಿಯುತವಾಗಿ ಆರ್ಥಿಕˌ ಸಮಾಜಿಕˌ ರಾಜಕೀಯವಾಗಿ ಸಮಾನವಾಗಿ ಹೆಜ್ಜೆ ಹಾಕಿದಾಗ…
ಈಗಿನ ಸ್ತ್ರೀ ಸಮಾನತೆ ತಪ್ಪಾಗಿ ಬಿಂಬಿತವಾಗ ತೊಡಗಿದೆ. ಅದು ಕೇವಲ ಪುರುಷನ ಅನುಕರಣೆಯಾಗಿದೆ. ಇದು ಕೊನೆಗೂˌ ಪುರುಷ ಪ್ರಾಧ್ಯನತೆಯನ್ನು ಅಪರೋಕ್ಷವಾಗಿ ಒಪ್ಪಿಕೊಂಡು ಸ್ತ್ರೀ ಮತ್ತೆ ಅವನ ಗುಲಾಮವಾಗುತ್ತಿದ್ದಾಳೆ.
ಸ್ತ್ರೀ ಸಮಾನತೆ ಕೇವಲ ದೈಹಿಕ ಬಾಹ್ಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ ಹೊರತುˌ ಅಂತರಂಗದಲ್ಲಿ ಪುರುಷ ಸ್ತ್ರೀ ತನ್ನ ಗುಲಾಮಳು ಎಂಬ ಮನಸ್ಥಿತಿಯಿಂದ ಹೋರಬಂದಿಲ್ಲ. ಹಾಗೇ ಸ್ತ್ರೀಯ ಮನಸ್ಥಿತಿಯು ಇಂದು ಪುರುಷ ಪ್ರಾಧ್ಯನತೆಯಿಂದ ಹೋರಬಂದಿಲ್ಲ. ಬದಲಾವಣೆˌ ಸಮಾನತೆˌ ಸ್ವಾತಂತ್ರ್ಯ ಬಹಿರಂಗವಾಗಿ ಗೋಚರಿಸುತ್ತಿವೆಯಷ್ಟೆ..
ಸ್ತ್ರೀ ತನ್ನ ಪ್ರಕೃತಿ ಸಹಜವಾದ ಅನನ್ಯತೆ ಉಳಿಸಿಕೊಂಡುˌ ಆರ್ಥಿಕˌ ಸಮಾಜಿಕˌ ರಾಜಕೀಯವಾಗಿ ಮುಂದೆ ಬರುವ ಹೊಸ ಸವಾಲು ಅವಳ ಮುಂದೆ ಇದೆ. ಶೇ. 50 ರಷ್ಟು ಇರುವ ಮಹಿಳೆಯರು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯ ಶಾಸಕಾಂಗದಲ್ಲಿ ಶೇ. 2 ರಷ್ಟು ಅವಕಾಶಗಳಿಲ್ಲವೆಂಬುವದು ವಿಷಾಧನಿಯ. ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳಲ್ಲಿ ಎಷ್ಟು ಜನ ಮಹಿಳೆ ಪ್ರತಿನಿಧಿಗಳಿದ್ದಾರೆ? ಇದರ ಬಗ್ಗೆ ಮಹಿಳೆಯರು ಮತ್ತು ಸಮ ಸಮಾಜದ ಹೋರಾಟಗಾರರು ಧ್ವನಿ ಎತ್ತಬೇಕು. ಸ್ತ್ರೀ ಸಮಾನತೆ ಎಂಬುವದು ನಗರ ಕೇಂದ್ರಿತವಾಗಿದೆಯಷ್ಟೆ. ಗ್ರಾಮ ಮಟ್ಟದಲ್ಲಿ ಮತ್ತು ತಳ ಮಟ್ಟದಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳಿಗೆ ಸಮಾನತೆ ಕನಸು. ಅವರನ್ನು ಸಬಲಗೊಳ್ಳಿಸಿದಿದ್ದರೇ ಈಡೀ ದೇಶವೇ ದಾರಿದ್ರ್ಯದಲ್ಲಿ ಮುಳುಗಿ ಹೋಗುತ್ತಿದೆ.
ಈ ದಿನಗಳಲ್ಲಿಯ ಕಾರ್ಪೋರೇಟ್ ಶೈಲಿಯಲ್ಲಿ ಮತ್ತು ಮೇಟ್ರೋ ಪಾಲಿಟನ್ ಆಧಾರಿತ ಅಧುನಿಕ ಈ ಸ್ತ್ರೀ ಸಮಾನತೆಯ ಪರಿಕಲ್ಪನೆ ಸ್ತ್ರೀಯಲ್ಲಿ ಭಿತ್ತಲಾಗುತ್ತಿದೆ. ಇದರಿಂದಾಗಿ ದೈವಿಕವಾದ ಅವಳ ಹೆಣ್ತುತನವನ್ನೆ ಕೊಂದು ಹಾಕುತ್ತಿದೆ…
✍️*ಜಯದೇವ ಪೂಜಾರ*
7676870233
