ಕೊರಟಗೆರೆ :- ಕೊರಟಗೆರೆ ತಾಲ್ಲೂಕಿನ ಸಿ.ಎನ್. ದುರ್ಗ ಹೋಬಳಿ ಕಬ್ಬಿಗೆರೆಯಲ್ಲಿ ಪುರಾಣ ಪ್ರಾತಿನಿಧಿಕ ಸಂಪೂರ್ಣ ರಾಮಾಯಣದ ನಾಟಕಗಳ ದರ್ಶನವನ್ನು ಹವ್ಯಾಸಿ ರಂಗ ಪರಂಪರೆ ನಿರಂತರ ಸಾಂಸ್ಕೃತಿಕ ಉತ್ಸವ ಯಶಸ್ವಿ ಸಂಗೀತ ಪ್ರಿಯ ರಂಗಭೂಮಿ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ನಾಗಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಬಹುಸಂಖ್ಯೆಯಲ್ಲಿ ಪ್ರದರ್ಶನಗೊಂಡು ಹಳ್ಳಿಹಳ್ಳಿಗಳಲ್ಲಿ ಸಾಂಸ್ಕೃತಿಕ ಮನಸ್ಸುಗಳು ಕಲಾ ಪ್ರೋತ್ಸಾಹದಾಯಕವಾದ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಅನೇಕ ಸಾಂಸ್ಕೃತಿಕ ಉತ್ಸವಗಳನ್ನು ರೂಪಿಸುತ್ತಿರುವುದು ಸಂತೋಷಕರವಾದ ಸಂಗತಿ ಎಂದು ಅವರು ಹೇಳಿದರು.
ರಂಗ ಸಂಘಟಕ ಬಿ.ವಿ. ನಾಗಭೂಷಣ ಮಾತನಾಡಿ, ಜಿಲ್ಲೆಯಲ್ಲಿ ಹವ್ಯಾಸ ರಂಗಭೂಮಿ ಬಹಳ ಸಂಖ್ಯೆಯಲ್ಲಿ ಹಲವರ ಬದುಕಿನಲ್ಲಿ ದಾರಿದೀಪವಾಗಿದ್ದು, ಮತ್ತಷ್ಟು ಬೆಳೆಸಲು ಸರ್ಕಾರ ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಧುಸೂಧನ, ಶಿವಣ್ಣ, ಖ್ಯಾತ ರಂಗ ನಿರ್ದೇಶಕ ಗಂಗಾಧರ್ ಯಾದವ್ ಕೃಷ್ಣ, ಶ್ರೀರಂಗಯ್ಯ ಪಾಲ್ಗೊಂಡಿದ್ದರು.
– ಶ್ರೀನಿವಾಸ್ ಕೊರಟಗೆರೆ.
