ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ತುಮಕೂರು ತಾಲೂಕಿನ ಹೊನಸ್ಸಿಗೆರೆ ಗ್ರಾಮದ ಶ್ರೀ ಆದಿಶಕ್ತಿ ಮುಳ್ಕಟ್ಟಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಗೆ 2,00,000/-(ಎರಡು ಲಕ್ಷ) ಅನುದಾನ ಮಂಜೂರಾಗಿದ್ದು ತುಮಕೂರು 1 ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಪ್ರಭಾಕರ್ ರವರು ಆಡಳಿತ ಮಂಡಳಿಗೆ ಡಿಡಿ ವಿತರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷರಾದ ಪುಟ್ಟರಾಜು , ಉಪಾಧ್ಯಕ್ಷರಾದ ಚಂದ್ರಶೇಖರ್ , ಕಾರ್ಯದರ್ಶಿ ಕನಕರಾಜ್ ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ರುದ್ರೇಶ್,ಮುಖಂಡರಾದ ಶ್ರೀ ಕಂಠಯ್ಯ ,ವಲಯ ಮೇಲ್ವಿಚಾರಕರಾದ ಮಹಾಂತೇಶ್.ಬಿ, ಸೇವಾ ಪ್ರತಿನಿಧಿಯಾದ ಲಕ್ಷ್ಮೀದೇವಿ, ಸ್ವ ಸಹಾಯ ಸಂಘದ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆ.ಬಿ.ಚಂದ್ರಚೂಡ
