ಕೊರಟಗೆರೆ ತಾಲೋಕ್ ಹೊಳವನಹಳ್ಳಿ ಗ್ರಾಮದ ಇಂದಿರಾ ಕಾಲೋನಿಯ ಸಾವಿತ್ರಮ್ಮ ನಾರಾಯಣಪ್ಪ ನಿವೇಶನವನ್ನು ಅಕ್ರಮವಾಗಿ ಬೇರೊಬ್ಬರಿಗೆ ಖಾತೆ ಮಾಡಿಕೊಟ್ಟು ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ವಿಚಾರವಾಗಿ ಪ್ರಶ್ನಿಸಿದರೆ ನಾವು ಯಾರಿಗೂ ಖಾತೆ ಮಾಡಿ ಕೊಟ್ಟಿಲ್ಲ ಎಂದು ಜವಬು ಕೊಡುತ್ತಿದ್ದಾರೆ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
1977 -78ನೇ ವರ್ಷದ ಹೊಳವನಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸಾವಿತ್ರಮ್ಮ ಎಂಬವರಿಗೆ 303,304,305/1,307/1ರ ಜಮೀನಿನಲ್ಲಿ ನಿವೇಶನ ಸಂಖ್ಯೆ 47ರ 40X40 ಅಳತೆಯ ನಿವೇಶನ ನೀಡಿರುವುದು ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ 1977 78 ರಂದು ವಿತರಿಸಿರುವ ಪುಸ್ತಕ ಪುಟ ಸಂಖ್ಯೆ 126ರ 167 ದಾಖಲಾಗಿರುತ್ತದೆ.
ಆದರೆ ಇಲ್ಲಿನ ಪಂಚಾಯ್ತಿ ಅಧಿಕಾರಿಗಳು ಈ ಖಾತೆ ನಂಬರಿನಲ್ಲಿ ನಿಮ್ಮ ಹೆಸರೇ ಇರುವುದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇಂದಿನ ವರ್ಷ ಕಂದಾಯ ಕಟ್ಟಿಸಿಕೊಳ್ಳಲು ಖಾತೆ ನಂಬರ್ ಇದ್ದು ಅದರ ಸಲುವಾಗಿ ಖಾತೆಯ ಮೊತ್ತವನ್ನು ಪಾವತಿ ಸಿಕೊಂಡಿದ್ದಾರೆ ಆದರೆ ಈಗ ನಿವೇಶನವೂ ಇಲ್ಲ ಮನೆಯೂ ಇಲ್ಲ ಎಂಬುದು ತಿಳಿದು ಬರುತ್ತಿದೆ
