ಕಣ್ಣುಗಳು ಮರಭೂಮಿಯಾಗಿವೆ
ಅವುಗಳ ಪೋಷಣೆಗೆ ನೀರು ಬೇಕು
ನೀವು ಯಾವಾಗ ಅಳುವಿರೋ
ಕಣ್ಣಿರೇ ಕಣ್ಣಿಗೆ ಆಹಾರ..
ಕಣ್ಣಿರೇ ಕಣ್ಣಿನ ಆರೋಗ್ಯ…
ಈ ಜಗದಲ್ಲಿ ಕಣ್ಣೀರಷ್ಟು ಪವಿತ್ರವಾದ
ಯಾವ ನದಿ ಜಲವೂ ಇಲ್ಲಾ…
tears are organic
they are the true fragrance of love
ನಿನ್ನ ಮನಸ್ಸು ಮೋಸ ಮಾಡುವುದು
ನೂರು ಕಥೆ ಕಟ್ಟ ಬಹುದು
ಸತ್ಯ ಹೇಳುವುದಿಲ್ಲ.
ಕಣ್ಣು ಮೋಸ ಮಾಡುವುದಿಲ್ಲ
ನಿನ್ನ ಕಂಗಳ ಬಿಸಿ ಹನಿಗಳು
ನೂರು ಸತ್ಯ ಕಥೆಗಳನ್ನು ಹೇಳತ್ತವೆ…
ಕಣ್ಣೀರು ಭಾವದ ಭಾಷೆ
“ದೇವರು” ನಿಮ್ಮ ಭಾಷೆಯೊಂದಿಗೆ
ಅಲ್ಲಾ…
ನಿಮ್ಮ ಭಾವದೊಂದಿಗೆ ಸಂಭಾಷಿಸುತ್ತಾನೆ..!
ನಿಮ್ಮ ಅಂತಃಕರಣ ˌ ಪ್ರೇಮದೊಳಗೆ
ವಿಶ್ವದ ಅನಂತ ಶಕ್ತಿ ರಹಸ್ಯ ಅಡಗಿದೆ
ನೀವು ದೇವರಿಗಾಗಿ ಪ್ರಾರ್ಥಿಸುವುದು ಕೇಳಿಸುವುದಿಲ್ಲಾ
ನೀವು ಅವನಿಗಾಗಿ ಎಷ್ಟು ಪ್ರಾಮಾಣಿಕವಾಗಿ ಹಂಬಲಿಸಿ ಅಳುವಿರಿ…
ತಾಯಿ ಕಳೆದುಕೊಂಡು
ಗೋವೊಂದು “ಅಂಬೋ” ಎಂಬಂಥೆ
ಕೂಗಿದಾಗ
ದೂರದಲ್ಲಿರುವ ತಾಯಿ ಕೂಡಾ ಅದೇ ರೀತಿಯಲ್ಲಿ ” ಅಂಬೋ” ಎನ್ನುವುದು
ಇದೂ ಯುನಿವರ್ಸ energy – viberation – frequeny
ನೀನು ಜೋರಾಗಿ ಯಾವುದನ್ನು ಕೂಗುವೇ ಅದೇ ನಿನಗೆ ಪ್ರತಿಧ್ವನಿಯಾಗಿ ಮರಳಿಬರುವುದು…
ನೀವು ರಕ್ತ ಕೊಳ್ಳಬಹುದುˌ ಮಾರಬಹುದು
ಆದರೆˌ ನಿಮಗಾಗಿ ಕಣ್ಣೀರು ಸುರಿಸುವವರನ್ನು
ನೀವು ಪ್ರೀತಿಯಿಂದಲೇ ಗಳಿಸಬೇಕು..
ನಿಮಗಾಗಿ ಯಾರಾದ್ರೂ ಪ್ರಾಮಾಣಿಕವಾಗಿ ಅತ್ತರೆ
ಅವರ ಬಿಡಬೇಡಿ
ಶರಣಾಗಿ…
ಈ ಜಗಕ್ಕಿಗ ರಕ್ತ ಹರಿಸುವವರಗಿಂತ
ಕಣ್ಣೀರು ಸುರಿಸುವವರು ಬೇಕು..
ಅದೇ ನಿಜವಾದ ಪ್ರೇಮ
ಇಂದಿನ ಯುಗದಲ್ಲಿ ಎಲ್ಲವೂ ಮಾರಲ್ಪಡುತ್ತವೆ
ಆದರೆˌ ಕಣ್ಣೀರು..!
————–
ದುಃಖದಲ್ಲಿ ಪೂರ್ಣವಾಗಿ ಅಳಿ…
ಸಂತೋಷದಲ್ಲಿ ಅಳಿ…
ಅಳುವುದಕ್ಕೆ ಅನುಮತಿಸಿ…
ಅಳಲು ನಾಚಿಕೆ ಬೇಡ / ಭೇದ ಬೇಡ
ಅಳುವು ಬಂದಾಗ
ಪೂರ್ಣವಾಗಿ ಅತ್ತು ಬಿಡಿ..
ಅಳುವುದು ಹೇಡಿತನವಲ್ಲ…
ಅಳುವುವವರು ಶೂರರು..
ಸ್ತ್ರೀ ಅಳುತ್ತಾಳೆ
ಹೀಗಾಯೇˌ ಅವಳು
ಪುರಷಗಿಂತ ಗಟ್ಟಿಗಿತ್ತಿ…
ಪುರುಷ ಅಳುವನ್ನು ದಮನಿಸುತ್ತಾನೆ
ಹೀಗಾಗಿ ಅವನು
ಹಿಂಸಾತ್ಮಾಕವಾಗಿದ್ದಾನೆ
ಅತ್ತವರ ಕಣ್ಣುಗಳು ನಿರಂತರವಾಗಿ
ಹೊಳೆಯುತ್ತವೆ..
ಕಣ್ಣಿರು ಕೇಡು ಯಾವತ್ತೂ
ಮಾಡಿಲ್ಲಾ….
ಕೇಡುಗಳನ್ನು ಕಡಿಮೆ ಮಾಡಿವೆ…
ದಯೆ ಕಣ್ಣೀರಿನ ಕರುಣೆ
ನೀವು ಕಣ್ಣು ನೋಡಿ…!
ಈಗ ಎಲ್ಲೇಡೆ ರಕ್ಕಸ ˌ ಭಕ್ಷಕˌ ಕಣ್ಣುಗಳು
ಒಣಗಿದ ˌ ಹಸಿದ ಕಣ್ಣುಗಳು
ಕಣ್ಣಲ್ಲಿ ಕಣ್ಣಿರೇ ಭತ್ತಿ ಹೋಗಿವೆ
ಹೀಗಾಗಿ ಜಗದಲ್ಲಿ ಯುದ್ಧಗಳು
ಕದನಗಳುˌ ಕೊಲೆಗಳುˌ ಹಿಂಸೆಗಳು…ಇವೆ
ಕಣ್ಣು ಮರಭೂಮಿಯಾಗಿದೆ…
ಆ ಮರುಭೂಮಿಯಲ್ಲಿ ಓಯಸಿಸ್
ಎಂದರೇ ಕಣ್ಣಿರುˌ ಕಣ್ಣಿರೂ…
ನೀವು ಅತ್ತಾಗ ಆಗುವಷ್ಟು
ಸಮಾಧಾನˌ ಸಾಂತ್ವನˌ ಆನಂದ…
ಯಾವುದರಲ್ಲಿ ಸಿಗದು…
ಅತ್ತಾಗ ನೀವು ಹಗುರವಾಗುವಿರಿ
ಮೃದುವಾಗುವಿರಿ ˌ ಮಗುವಾಗುವಿರಿ
ಪ್ರೇಮವಾಗುವಿರಿ…
*ಕಣ್ಣೀರು -*
*ನಿಮ್ಮೊಳಗಿನ ಪ್ರೇಮದ ನದಿಯ ಹರಿವು.*
*ಜಯದೇವ ಪೂಜಾರ*
7676870233
