ತುಮಕೂರು:ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಮಾರಿಯಮ್ಮ ನಗರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಗಂಗಾ ಘಟಕವನ್ನು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಉದ್ಘಾಟಿಸಿ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ಈವರೆವಿಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 105 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಇಂದು 106ನೇ ಘಟಕವನ್ನು ಉದ್ಘಾಟಿಸಿದ್ದು ನಮಗೆ ಸಂತೋಷವಾಗುತ್ತಿದೆ,ಸಾರ್ವಜನಿಕರಿಗೆ 3ರೂಗೆ 20 ಲೀಟರ್ ಶುದ್ಧ ನೀರನ್ನು ಕೊಡುತ್ತಿದ್ದು,ನಾಗರೀಕರ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ನೀರು ಮುಖ್ಯ,ತುಮಕೂರು ಜಿಲ್ಲೆಯಲ್ಲಿ 5,88,000 ಲೀಟರ್ ನೀರು ಕೊಡುತ್ತಿದ್ದು,ರಾಜ್ಯದಲ್ಲಿ 556 ಶುದ್ಧಗಂಗಾ ಘಟಕಗಳು ಕಾರ್ಯನಿರ್ವಹಿಸುತ್ತಿದೆ,ತುಮಕೂರು ನಗರದಲ್ಲಿ 15 ಘಟಕಗಳು ಕಾರ್ಯನಿರ್ವಹಿಸುತ್ತಿದೆ,ಸ್ಥಳೀಯ ಶಾಸಕರ ಅನುದಾನದಲ್ಲಿ ಇಂದು 6ನೇ ಘಟಕವನ್ನು ಉದ್ಘಾಟಿಸಲಾಗಿದೆ,ಮಹಿಳೆಯರು,ವೃದ್ಧರು,ಚಿಕ್ಕಮಕ್ಕಳು ಉತ್ತಮ ಮತ್ತು ಶುದ್ಧ ನೀರನ್ನು ಸೇವಿಸಬೇಕು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ಡಾ||ಡಿ.ವೀರೇಂದ್ರಹೆಗ್ಗಡೆರವರು ಸಾರ್ವಜನಿಕರ ಆರೋಗ್ಯಕ್ಕಾಗಿ ಶುದ್ಧ ನೀರನ್ನು ನೀಡುತ್ತಿದ್ದಾರೆ ಅವರ ನಿಸ್ವಾರ್ಥಸೇವೆಗೆ ಧನ್ಯವಾದಗಳು,ಧರ್ಮಸ್ಥಳ ಕ್ಷೇತ್ರದಿಂದ ಹಲವಾರು ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿದೆ,ಸ್ವಸಹಾಯ ಸಂಘದ ಮೂಲಕ ಬ್ಯಾಂಕ್ ಗಳ ಮೂಲಕ ಸಾಲ ನೀಡುವುದು,ಕೆರೆ ಊಳೆತ್ತುವುದು,ಕೆರೆ ಅಭಿವೃದ್ಧಿ,ದೇವಸ್ಥಾನಗಳ ಪುನರುಜ್ಜೀವನ,ಹೀಗೆ ನೂರಾರು ಕೆಲಸಗಳನ್ನು ಮಾಡುತ್ತಿದೆ,ಮಾರಿಯಮ್ಮ ನಗರದ ಎಲ್ಲ ಸಾರ್ವಜನಿಕರು ಶುದ್ಧ ನೀರನ್ನು ಪಡೆಯಬೇಕು,ಇದರ ಪೂರ್ಣ ಪ್ರಯೋಜನವನ್ನು ಪಡೆಯಬೇಕು,ಈ ಘಟಕದ ಸುತ್ತಮುತ್ತ ಸ್ವಚ್ಛತೆಯನ್ನು ಸಹ ಕಾಪಾಡಬೇಕೆಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ,ತಾಲ್ಲೋಕು ಯೋಜನಾಧಿಕಾರಿ ಪ್ರಭಾಕರ್,ಮಾಜಿ ಸಿಂಡಿಕೇಟ್ ಸದಸ್ಯರಾದ ವಿನಯ್,ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್.ಸಂದೀಪ್,ಶುದ್ಧಗಂಗಾ ಘಟಕದ ಮೇಲ್ವಿಚಾರಕರು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು,ಮಾರಿಯಮ್ಮ ನಗರದ ಯುವಕ ಸಂಘದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
