ಮದ್ದೂರು: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಏಪ್ರಿಲ್ 26, 2026ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಎಸ್.ಎಲ್.ಎಂ ಕನ್ವೆನ್ಷನ್ ಹಾಲ್ನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮದ್ದೂರಿನ ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀ ಪ್ರತಾಪಚಂದ್ರ ಯು.ಸಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಧುನಾಯ್ಕ್ ಲಂಬಾಣಿ ವಹಿಸಲಿದ್ದು, ಪ್ರಾಸ್ತಾವಿಕವಾಗಿ ಸಂಘದ ಗೌರವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಯಾದ ಶ್ರೀ ಗೊರೂರು ಅನಂತರಾಜು ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಜಿ. ಪದ್ಮ ನಾಗರಾಜು (ಇಂದು ಸಂಜೆ ಪತ್ರಿಕೆ), ಉಪನ್ಯಾಸಕರಾದ ಜಿ.ಜೆ. ಪ್ರಕಾಶ್, ಜಿ.ಎಸ್. ಹರ್ಷಕುಮಾರ್, ಪ್ರೊ. ಸಮತಾ ಬಿ. ದೇಶಮಾನೆ, ಸಾಕಮ್ಮ ಕೆ.ಸಿ., ಉಮೇಶ್, ಪುಟ್ಟಸ್ವಾಮಿಗೌಡ, ಬೇಕ್ರಿ ರಮೇಶ್, ಶುಭಾ ಕುಸ್ಕೂರು, ವಿಜಯಕುಮಾರ ಸಿ.ಆರ್. ಹಾಗೂ ಪ್ರಶಾಂತ ಕುಲಕರ್ಣಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ರಾಜ್ಯಾದ್ಯಂತ ಆನ್ಲೈನ್ ಮೂಲಕ ಆಯ್ಕೆಗೊಂಡ 44 ಗಾಯಕರು ಮತ್ತು ಗಾಯಕಿಯರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ವೇದಿಕೆ ಮೇಲೆ ಹಾಡುವ ಮೂಲಕ ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀಮತಿ ಶುಭಾ ಕುಸ್ಕೂರು ಹಾಗೂ ಶ್ರೀಮತಿ ಪಿ. ನಾಗರತ್ನಮ್ಮ ಮಳವಳ್ಳಿ ಕಾರ್ಯನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಸ್. ಪುಟ್ಟೇಗೌಡ, ಚಿದಾನಂದ ಕೆ.ಎಂ (ಹಾಸನ), ಎ.ಹೆಚ್. ಗಣೇಶ್ ಅಂಕಪುರ ಹಾಗೂ ಬೇಕ್ರಿ ರಾಜೇಗೌಡ (ಅರಕಲಗೂಡು) ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ.
ಸಂಘದ ರಾಜ್ಯಾಧ್ಯಕ್ಷರಾದ ಮಧುನಾಯ್ಕ್ ಲಂಬಾಣಿ ಅವರು, ಇದು ಸಂಘದ ದ್ವಿತೀಯ ವರ್ಷದ ಕಾರ್ಯಕ್ರಮವಾಗಿದ್ದು, ಪ್ರತಿಭಾವಂತ ಗಾಯಕರನ್ನು ಹೊರತರುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.