ರಾಮನಾಥಪುರ- ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ ಏಪ್ರಿಲ್ 20 ರಂದು ಸೋಮವಾರ ರಥೋತ್ಸವ ನಡೆಯುವುದರಿಂದ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡುವಂತೆ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಅವರು ಸೂಚಿಸಿದರು. 
ರಾಮನಾಥಪುರ ಶ್ರೀ ರಾಮೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ದೇವಾಲಯದ ಸಮಿತಿಯವರು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ನಾಡಕಚೇರಿಯವರಿಗೆ ಕುಡಿಯುವ ನೀರು, ಪ್ರಸಾದದ ವ್ಯವಸ್ಥೆ, ದೇವಾಲಯಕ್ಕೆ ಹುವಿನ ಅಲಂಕಾರ ವಿದ್ಯುತ್ ದೀಪಾಲಂಕಾರ ಮುಂತಾದ ಮೂಲಭೂತ ಸೌಕರ್ಯಗಳನ್ನು ಮಾಡುವಂತೆ ಸೂಚಿಸಿ, ರಥೋತ್ಸವಕ್ಕೆ ನಾನು ಬರುವುದಾಗಿ ತಿಳಿಸಿದ ಅವರು ಗ್ರಾಮೀಣ ಪ್ರದೇಶಗಳಿಂದ ಜನರು ಬರುವುದರಿಂದ ಈವಾಗ ಬಿಸಿಲು ಜಾಸ್ತಿ ಇರುವುದರಿಂದ ರಥದ ಬೀದಿಗೆ ನೀರಿನ ಟ್ಯಾಂಕರ್ ಮುಖಾಂತರ ರಸ್ತೆಗೆ ನೀರು ಹಾಕಿಸುವಂತೆ ಸುಚಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಶ್ರೀನಿವಾಸ್, ನಾಡ ಕಚೇರಿ ಉಪತಹಸಿಲ್ದಾರ್ ಶ್ರೀ ರಜಿನಿಕಾಂತ್, ಗುತ್ತಿಗೆದಾರ ನಾರಾಯಣಸ್ವಾಮಿ, ಅಭಿವೃದ್ದಿ ಅದಿಕಾರಿ ಕುಮಾರಸ್ವಾಮಿ, ಕಾರ್ಯದರ್ಶಿ ರೇವಣ್ಣ,
ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಖಜಾಂಚಿ ರಘು, ಕಾರ್ಯದರ್ಶಿ ಕಾಳಬೋಯಿ, ತಾಲ್ಲೂಕು ಅಧ್ಯಕ್ಷರು ಸಿದ್ದರಾಜು, ಖಜಾಂಚಿ ಕೇಶವ ಮುಂತಾದವರು
