ಚನ್ನರಾಯಪಟ್ಟಣ : ತಾಲೂಕಿನ ಗಡಿ ಗ್ರಾಮವಾದ ತೂಳಸಿ ಗ್ರಾಮದ ಶ್ರೀ ತೊಳನೇಶ್ವರ, ಬಸವೇಶ್ವರ, ಮಹಾಗಣಪತಿ, ಸುಬ್ರಮಣ್ಯ ದೇವರುಗಳ ವಿಮಾನ ಕಳಸ ಮಹಾ ಕುಂಭಾಭಿಷೇಕ ಪ್ರತಿಷ್ಠಾಪನ ಮಹೋತ್ಸವ ಜರುಗಲಿದೆ ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ಎನ್ ರಮೇಶ ಅವರು ತಿಳಿಸಿದರು.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ತೂಳಸಿ ಗ್ರಾಮದಲ್ಲಿ ದಿನಾಂಕ 18.4. 2026ನೇ ಶನಿವಾರ ಮತ್ತು 19.4.2026ನೇ ಭಾನುವಾರ ಹಾಗೂ 24.04.2026ನೇ ಸೋಮವಾರ , ಬ್ರಾಹ್ಮಿ ಮುಹೂರ್ತದಲ್ಲಿ ಪೀಠಪೂಜೆ, ಯಂತ್ರ ಮತ್ತು ರತ್ನ ವ್ಯಾಸಗಳು ಶ್ರೀಯವರಿಗೆ ಅಷ್ಟ ಬಂಧನ, ಆವಾಹನೆ, ವಿಮಾನ ಕಳಸ ಸ್ಥಾಪನೆ, ಶ್ರೀಯವರಿಗೆ ರುದ್ರಭಿಷೇಕ, ನೇತ್ರೋನಿಮಿಲನ, ಪೂರ್ಣಾವತಿ, ಕದಲೀಚೇತನ ನಿರೀಕ್ಷಣೆ, ರಾಷ್ಟ್ರಶೀರ್ವಾದ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಠದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಕಾಗಿನೆಲೆ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು, ಶ್ರೀ ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಪರಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಧರ್ಮಸ್ಥಳದ ಧರ್ಮದರ್ಶಿಗಳಾದ ಪರಮಪೂಜ್ಯ ಡಾಕ್ಟರ್ ವೀರೇಂದ್ರ ಹೆಗಡೆ ಅವರು ವಹಿಸಿಕೊಳ್ಳಲಿದ್ದಾರೆ. ಗಣ ಉಪಸ್ಥಿತಿಯನ್ನು ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಆಗಮಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ಟಿ ಮಂಜು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎನ್ ಚೆಲುವರಾಯಸ್ವಾಮಿ, ಎಂಎಲ್ಸಿ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಚನ್ನರಾಯಪಟ್ಟಣ ತಾಲೂಕಿನ ಶಾಸಕರಾದ ಸಿ ಎನ್ ಬಾಲಕೃಷ್ಣ, ಸ್ವರೂಪ್ರಕಾಶ್, ಸೂರಜ್ ರೇವಣ್ಣ, ಜಿ ಟಿ ಹರೀಶ್ ಗೌಡ, ಮಾಜಿ ಮಂತ್ರಿಗಳಾದ ಕೆ ಸಿ ನಾರಾಯಣಗೌಡ, ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಬಿ ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಬಿ ಎಲ್ ದೇವರಾಜ್, ಟಿ ಎ ಪಿ ಸಿ ಎಮ್ ಎಸ್ ನಿರ್ದೇಶಕರಾದ ಎಚ್ ಟಿ ಲೋಕೇಶ್, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಮಮುಲ್ ನಿರ್ದೇಶಕರಾದ ಡಾಲ್ ರವಿ, ಎಂ ಬಿ ಹರೀಶ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೆ ಎಸ್ ಪ್ರಭಾಕರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಮಿತ್ರ ಫೌಂಡೇಶನ್ ಅಧ್ಯಕ್ಷರಾದ ವಿಜಯ ರಾಮೇಗೌಡ, ಆರ್ ಟಿ ಓ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎಮ್ ಕಿರಣ್, ಕಿಕ್ಕೇರಿ ಕೆಪಿಎಸ್ ಶಾಲೆಯ ಅಧ್ಯಕ್ಷರಾದ ಎನ್ ಕೃಷ್ಣೇಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಧನಂಜಯ್, ಸೇರಿದಂತೆ ಇತರೇ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವರದಿ ಐ ಕೆ ಮಂಜುನಾಥ್
