ಹಾಸನ : ಪ್ರಸ್ತುತ ಜೀವನದಲ್ಲಿ ಆನಂದ, ಶಾಂತಿ,ಸಹಬಾಳ್ವೆ,ಪ್ರೀತಿ, ಚ್ಯೆತನ್ಯ, ಆತ್ಮ ಜ್ಞಾನ ಸಿಗಬೇಕಾದರೆ ಧ್ಯಾನ ಯೋಗ ಪ್ರಾಣಾಯಾಮಗಳು ಅತ್ಯವಶ್ಯಕವಾಗಿವೆ ಎಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ರಮೇಶ್ ಜಾಲಿಹಾಳ್ ಯವರು ಹೇಳಿದರು.
ಏ. 19 ರಂದು ಹಾಸನದ ಎಸ್. ಬಿ.ಎಂ. ಕಾಲೋನಿಯ ವಿನಾಯಕ ಯೋಗ ಕೇಂದ್ರ ಇಲ್ಲಿ ನಡೆದ *ಆನಂದ ಅನುಭೂತಿ ಶಿಬಿರ* ದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ಅಂತರಂಗದಲ್ಲಿ ಚೈತನ್ಯ, ಆನಂದ ಸ್ವರೂಪವನ್ನು ಜಾಗೃತಗೊಳಿಸಲು, ಮನಸ್ಸಿಗೆ ಶಾಂತಿ ನೀಡಿ ದೇಹಕ್ಕೆ ಶಕ್ತಿ ನೀಡಿ ಬದುಕಿಗೆ ಹೊಸ ದಿಕ್ಕನ್ನು ನೀಡುವಲ್ಲಿ ಈ ಆನಂದ ಅನುಭೂತಿ ಶಿಬಿರವು ಸಹಕಾರಿಯಾಗಿದೆ. ನಾವು ಪ್ರಸ್ತುತ ಕಾಲದಲ್ಲಿ ವರ್ತಮಾನದಲ್ಲಿ ಸಂತೋಷಮಯ
ಆನಂದಮಯ ಜೀವನ ನಡೆಸುವುದರೊಂದಿಗೆ ಸುಂದರ
ಸಮಾಜದೊಂದಿಗೆ ಜೀವನವನ್ನ ಸಾಗಿಸುವುದನ್ನ ಆರ್ಟ್ ಆಫ್ ಲಿವಿಂಗ್ ಪರಮಪೂಜ್ಯ ಶ್ರೀ ರವಿಶಂಕರ್ ಗುರೂಜಿಯವರ ಮಾರ್ಗದಶನ ದಿಂದ ರೂಪಿತವಾಗಿರುವ ಆನಂದ ಶಿಬಿರ ಕಾರ್ಯಕ್ರಮಗಳು ತರಬೇತಿ ಶಿಬಿರಗಳಿಂದ ಕಲಿತು ಅನುಸರಿಸಿಕೊಳ್ಳುವುದರಿಂದ ಪ್ರಯೋಜನಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ವೇದಶ್ರೀ ಜಿ, ಹಾಗೂ ಸುಬ್ರಹ್ಮಣ್ಯ ಜಿ,ರವರು ಮತ್ತು ಹಾಸನ ಜಿಲ್ಲೆಯ ಡಿಡಿಸಿ ಸದಸ್ಯರುಗಳಾದ ಅರಸೀಕೆರೆಯ ಪರಮೇಶ್ವರಪ್ಪ ಹಾಗೂ ಬಿ ಆರ್ ಚನ್ನಬಸಪ್ಪ ಮತ್ತು ಪ್ರಕಾಶ್ ಯಾಜಿ, ಸಿಎನ್ ಚಂದ್ರಶೇಖರ್, ಕಟ್ಟಾಯ ಶಿವಕುಮಾರ್. ಡಾ ರಾಜಗೋಪಲ್, , ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
– ಕಟ್ಟಾಯ ಶಿವಕುಮಾರ್.
