ಚನ್ನರಾಯಪಟ್ಟಣ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವತಿಯಿಂದ ಏಪ್ರಿಲ್ 30 ರಿಂದ ಮೇ 2 ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಚ.ನಂ.ಅಶೋಕ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ್ಯಂತ 300ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಭಾಗವಹಿಸುವರು ಎಂದರು. ಚನ್ನರಾಯಪಟ್ಟಣದಿಂದ ಏಪ್ರಿಲ್ 29ರ ಮಧ್ಯಾಹ 3 ಗಂಟೆಗೆ ಶಾಲಿನಿ ವಿದ್ಯಾ ಸಂಸ್ಥೆಯ ಆವರಣದಿಂದ ಸಿದ್ಧರಬೆಟ್ಟ ಶಿಬಿರಕ್ಕೆ ಹೊರಡುವ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.
ಕಳೆದ 13 ವರ್ಷಗಳಿಂದ ಹಲವಾರು ಶಿಬಿರಗಳು, ಕಮ್ಮಟಗಳು, ಸಮ್ಮೇಳನಗಳು, ಪ್ರವಾಸಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕಲೆ,ಸಾಹಿತ್ಯ,ಸಂಸ್ಕೃತಿ, ಪರಿಸರದ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಿ ಎನ್ ಅಶೋಕ್, ಮಹದೇವದಾಸ್, ಸಿದ್ದೇಶ್, ಅಬ್ದುಲ್ ಆಝೀಮ್, ಗಜಾನನ ಮನೋಹರ್,ಅಜ್ಜು,ಅಭಿ, ಸೇರಿದಂತೆ ಇತರರು ಹಾಜರಿದ್ದರು.
