Oplus_16908288
ಚನ್ನರಾಯಪಟ್ಟಣ : ಹಾಸನ ಮತ್ತು ಮಂಡ್ಯ ಜಿಲ್ಲೆಯ ಗಡಿ ಗ್ರಾಮದ ತೊಳಸಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ರವರಿಗೆ ಜೆಡಿಎಸ್ ಪಕ್ಷದ ಮುಖಂಡರಾದ ಡೈರಿ ಲೋಕೇಶ್ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಹೂವಿನ ಸುರಿಮಳೆ ಸುರಿಸಿ ಅದ್ದೂರಿ ಸ್ವಾಗತ ಕೋರಿದರು.
ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿರವರು ನಿಮ್ಮ ಕ್ಷೇತ್ರದ ಶಾಸಕರನ್ನು ಗಟ್ಟಿಯಾಗಿ ಇಡ್ಕೊಳಿ, ಯಾವುದೇ ಕಾರಣಕ್ಕೂ ಎಚ್ ಟಿ ಮಂಜಣ್ಣನ ಕೈ ಬಿಡಬೇಡಿ ಎಂದರು. 2028ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಟಿ.ಮಂಜು ರವರೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪರೋಕ್ಷ ಹೇಳಿಕೆ ಕೊಟ್ಟರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಅಂಗಡಿ ಸ್ವಾಮಿಣ್ಣ, ಅಂಗಡಿ ನಿಂಗರಾಜೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಟಿ ಎನ್ ರಮೇಶ್, ಶ್ರೀಮತಿ ನೇತ್ರಾವತಿಚಂದ್ರೇಗೌಡ, ಚಿಕ್ಕತರಹಳ್ಳಿ ಮರಿಯಪ್ಪ, ಈರೇಗೌಡ, ಕುಂಟಪ್ಪನ ನಿಂಗರಾಜ್ , ರಮೇಶ್, ಆಕಾಶ್, ಅವಿನಾಶ್ ಅಭಿಲಾಶ್, ಜೀವನ್, ಎಚ್ ಟಿ ಮಂಜಣ್ಣ ಅಭಿಮಾನಿಗಳು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
