ಚನ್ನರಾಯಪಟ್ಟಣ: ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮಾದರಿ ಕೃಷಿಕ ಹಾಗೂ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕಾಳೇನಹಳ್ಳಿ ಆನಂದ ಕುಮಾರ್ ಅವರಿಗೆ ಈ ವರ್ಷದ “ವರ್ಷದ ಕನ್ನಡಿಗ” ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸುದ್ದಿಕಿರಣ ಟಿವಿ ಮಾಧ್ಯಮದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ಅವರ ಕನ್ನಡಪರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಉತ್ತೇನಹಳ್ಳಿ ಚಂದ್ರು, ಅಭಿಷೇಕ್, ಅನಿಲ್ ರಾಜ್, ಚನ್ನಹಳ್ಳಿ ಆನಂದ್ ಸೇರಿದಂತೆ ಹಲವರಿಗೆ “ವರ್ಷದ ಕನ್ನಡಿಗ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುದ್ದಿ ಕಿರಣ ಟಿವಿಯ ಸಂಪಾದಕರಾದ ಮಲ್ಲಿಕಾರ್ಜುನ್ ರೆಡ್ಡಿ ಉಪಸ್ಥಿತರಿದ್ದರು.
ಈ ಪ್ರಶಸ್ತಿ ಕಾಳೇನಹಳ್ಳಿ ಆನಂದ ಕುಮಾರ್ ಅವರ ಕೃಷಿ ಮತ್ತು ಕನ್ನಡಪರ ಸೇವೆಗೆ ಮತ್ತೊಂದು ಮೆಚ್ಚುಗೆ ಎಂಬುದಾಗಿ ಪರಿಗಣಿಸಲಾಗಿದೆ.
– ಮಂಜುನಾಥ್ ಐ.ಕೆ
