ಅರಕಲಗೂಡು: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹಾಗೂ ಶ್ರೀ ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ, ವಿಶ್ರಾಂತ ಕುಲಪತಿ ಪ್ರೊ. ಎಚ್.ಜೆ. ಲಕ್ಕಪ್ಪಗೌಡರ ಸ್ಮರಣಾರ್ಥ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಮತ್ತು ರಂಗಗೀತೆ ಕಾರ್ಯಕ್ರಮವನ್ನು ಮೇ 8, 2026ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಎ. ಮಂಜು ಉದ್ಘಾಟಿಸಲಿದ್ದು, ಕಸಾಪ ಮಾಜಿ ಅಧ್ಯಕ್ಷ ವಿಷ್ಣು ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಪ್ರಾಸ್ತಾವಿಕ ನುಡಿ ನೀಡಲಿದ್ದಾರೆ. ಇದೇ ವೇಳೆ ಪ್ರೊ. ಲಕ್ಕಪ್ಪಗೌಡರ ಭಾವಚಿತ್ರಕ್ಕೆ ಯೋಗಣ್ಣ ಕಾರ್ಗಿಲ್ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಸಕಲೇಶಪುರದ ಕವಯತ್ರಿ ಲಲಿತ ಎಸ್. ಅವರ ‘ಅಂಕುಜ’ ಕೃತಿಯನ್ನು ವಿ.ಎ. ನಂಜುಂಡಸ್ವಾಮಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಪರಿಚಯವನ್ನು ಸಾಹಿತಿ ಎಂ.ಜಿ. ಪರಮೇಶ್ ಮಡಬಲು ಮಾಡಲಿದ್ದು, ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರು ಪ್ರೊ. ಲಕ್ಕಪ್ಪಗೌಡರ ಬದುಕು-ಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜೇಗೌಡರು ಶುಭ ನುಡಿ ನೀಡಲಿದ್ದು, ದಿವಾಕರ್, ಸತೀಶ್ ಗೌಡ, ಎನ್.ಎಲ್. ಚನ್ನೇಗೌಡ, ಡಾ. ಬರಾಳು ಶಿವರಾಮ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಶಿವಶಕ್ತಿ ಭಜನ ತಂಡದಿಂದ ರಂಗಗೀತೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಭಾಗವಹಿಸಿದ ಕಲಾವಿದರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಅಶ್ವಿನಿ ಹರೀಶ್ ಪ್ರಾರ್ಥನೆ ಸಲ್ಲಿಸಲಿದ್ದು, ಯಶಸ್ವಿನಿ ಮಾದಿಹಳ್ಳಿ ನಿರೂಪಣೆ ಮಾಡಲಿದ್ದಾರೆ. ಕೇಶವಗೌಡ ಸ್ವಾಗತ ಹಾಗೂ ಪ್ರವೀಣ ವಂದನಾರ್ಪಣೆ ನೆರವೇರಿಸಲಿದ್ದಾರೆ.
