ಕೆ.ಆರ್.ಪೇಟೆ: ಮೇ 20.ರಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ,ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ,ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ,ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಖ್ಯಾತ ಹಾಸ್ಯ ಕಲಾವಿದರಿಂದ ನಗೆ ಹಬ್ಬ,ಮುಂತಾದ ಕಾರ್ಯಕ್ರಮಗಳು ನಡೆಯುವ ವೇದಿಕೆ ನಿರ್ಮಾಣ ಕಾರ್ಯಕ್ಕೆ ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮಿ ಹಾಗೂ ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಭೂಮಿ ಪೂಜೆಯನ್ನು ವೇದ ಮಂತ್ರಗಳಿಂದ ಅರ್ಥಪೂರ್ಣವಾಗಿ ನೆರವೇರಿತು.

*ಭೂಮಿ ಪೂಜೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ತೆಂಡೆಕೆರೆ ಬಾಳೆಹೊನ್ನೂರು ಶಾಖಾಮಠದ ಪೀಠಾಧ್ಯಕ್ಷ ಶ್ರೀ ಗಂಗಾಧರ ಶಿವಾಚಾರ್ಯ* ಆಧುನಿಕ ಜಗತ್ತಿನಲ್ಲಿ ಹುಟ್ಟು ಹಬ್ಬದ ನೆಪೋಡ್ಡಿ ಮೋಜು ಮಸ್ತಿ ಮಾಡುವ ಕೆಲ ಜನರ ಮಧ್ಯೆ, ತಾನು ಹುಟ್ಟಿರುವುದೇ ಸಮಾಜ ಸೇವೆಗಾಗಿ ಎಂಬ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ನಿರಂತರ ಸಮಾಜ ಸೇವೆ ಸಲ್ಲಿಸುವುದರ ಜೊತೆಗೆ ತನ್ನ ಹುಟ್ಟಿದ ದಿನವೂ ಕೂಡ ಪ್ರತಿಭಾವಂತರಿಗೆ,ಸಾಧಕರಿಗೆ, ದೀನದಲಿತರಿಗೆ, ರೋಗಿಗಳಿಗೆ ಸೇರಿದಂತೆ ಅನೇಕ ಬಡ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮೇ 20.ರಂದು ತನ್ನ ಹುಟ್ಟುಹಬ್ಬವನ್ನ ಸಮರ್ಪಣೆ ಮಾಡುತ್ತಿರುವ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೀಯವಾದಂತದ್ದು,ಇವರ ದೂರದೃಷ್ಟಿಯ ಆಲೋಚನೆಯ ಕಾರ್ಯಕ್ರಮ ಯಾವುದೇ ಲೋಪ ಆಗದಂತೆ ಶ್ರದ್ಧಾ ಭಕ್ತಿಯಿಂದ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿಯ ಎದುರು ವೇದಿಕೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಗಿದೆ.ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಮಸ್ತ ಕೆ.ಆರ್ ಪೇಟೆ ತಾಲೂಕಿನ ಜನತೆ ಆಗಮಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್,ಹಿರಿಯ ಮುಖಂಡ ಸೂರ್ಯ ಪ್ರಕಾಶ್, ಕ್ರೈಸ್ತ ಕಿಂಗ್ ಕಾಲೇಜಿನ ಪ್ರಾಂಶುಪಾಲ ಶಿವರಾಜು,ಶಿಕ್ಷಣ ಇಲಾಖೆ ಅಧಿಕಾರಿ ಮಹೇಶ್,ಶಿಕ್ಷಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿಕ್ಷಕ ಅಲಂಬಾಡಿ ಕಾವಲು ದೇವರಾಜು,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಹಾಗೂ ಪತ್ನಿ ರಂಜು ಮಹೇಶ್,ಕಟ್ಟಹಳ್ಳಿ ಸುರೇಶ,ಮಾಡುವಿನಕೋಡಿ ಉಮೇಶ್,ಹೊಸಹೊಳಲು ವಿಜಯ್ ಕುಮಾರ್, ಮಾರ್ಗೋನಹಳ್ಳಿ ಯೋಗೇಶ್, ಪ್ರದೀಪ್, ಹಿರೀಕಳಲೆ ಮಧು,ಲಿಂಗಾಪುರ ಯಶವಂತ,ಮಂಜುನಾಥ್,ಸೇರಿದಂತೆ ಉಪಸ್ಥಿತರಿದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
