ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ನಿವಾಸಿ ಹಾಗೂ ತಾಲ್ಲೂಕು ಲೈಸೆನ್ಸ್ ಸರ್ವೆಯಾಗಿ ಕೆಲಸ ಮಾಡುತ್ತಿದ್ದ ಯುವಕ ಅಭಿ (25) ಮೇ.6 ಬುಧವಾರ ರಾತ್ರಿ ಕೆ ಆರ್ ಪೇಟೆ ಪಟ್ಟಣದಲ್ಲಿ ನಡೆದ ಸಂಬಂಧಿಕರ ಮದುವೆಯ ಆರಕ್ಷತೆ ಮುಗಿಸಿಕೊಂಡು ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹೊಸಹೊಳಲು ಗ್ರಾಮದ ಬಳಿ ಎದುರಿಗೆ ಬಂದ ಟಾಟಾ ಏಸ್ ವಾಹನದ ಚಾಲಕನ ಅತಿ ವೇಗ ಅಜಾಗ್ರತೆಯಿಂದ ಬೈಕ್ ಗುದ್ದಿದ ಪರಿಣಾಮವಾಗಿ ಬೈಕ್ ಸವಾರ ಅಭಿ ಸ್ಥಿತಿ ಸ್ಥಳದಲ್ಲೇ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಸಾವಿಗಿಡಾಗಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಮೃತ ಅಭಿ ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮೃತ ಅಭಿಯ ಶವಾಸಂಸ್ಕಾರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ. ಈ ಸಂಬಂಧ ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಳೆನೀರು ಪಿಕಪ್ ವಾಹನಗಳಿಗೆ ಇನ್ನೆಷ್ಟು ಬೇಕು ಮುಗ್ದ ಜನರ ಬಲಿ
ಕೆ.ಆರ್.ಪೇಟೆ. ಪಟ್ಟಣ ,ಕಿಕ್ಕೇರಿ ಎಪಿಎಂಸಿ ಆವರಣದಲ್ಲಿ ಸೇರಿದಂತೆ ತಾಲೂಕು ವಿವಿಧ ಕಡೆ ನಡೆಯುವ ಎಳನೀರು ಮಾರುಕಟ್ಟೆಗೆ ಜಿಲ್ಲೆಯ ವಿವಿಧ ಕಡೆಯಿಂದ ಎಳನೀರು ತುಂಬಿಕೊಂಡು ಬರುವ ಬಹುತೇಕ ವಾಹನಗಳು ಸರ್ಕಾರಿ ನಿಯಮಗಳಪಾಲಿಸದೆ ಅತಿ ವೇಗ ಆಜಾಗೃಕತೆಯಿಂದ ಅಪಘಾತಗಳು ಸಂಭವಿಸುತ್ತೇವೆ ಎಂದು ಸಾರ್ವಜನಿಕ ಆಕ್ರೋಶ ಹೊರ ಹಾಕುತ್ತಿದ್ದಾರೆ.ಎಳೆನೀರು ತುಂಬಿಕೊಂಡು ಅಮಾಯಕರನ್ನು ಬಲಿಪಡಿಸುತ್ತಿರುವ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ತಾಲೂಕಿನ ವಿವಿಧ ಪರ ಸಂಘಟನೆಗಳು ಆಗ್ರಹಿಸುತ್ತಿದ್ದಾರೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
