ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು UG-CET 2026ಕ್ಕೆ ಸಂಬಂಧಿಸಿದಂತೆ CBSE, ICSE ಹಾಗೂ ಇತರೆ ರಾಜ್ಯ ಮಂಡಳಿಗಳ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಿದೆ. 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಗಳನ್ನು KEA ಪೋರ್ಟಲ್ನಲ್ಲಿ ತಕ್ಷಣ ಅಪ್ಡೇಟ್ ಮಾಡಬೇಕು ಎಂದು ತಿಳಿಸಿದೆ.
ವಿದ್ಯಾರ್ಥಿಗಳು DigiLocker ಮೂಲಕ 12ನೇ ತರಗತಿ ಅಂಕಪಟ್ಟಿಗೆ ಅನುಮತಿ ನೀಡಿದ ಬಳಿಕ, ಅಂಕಗಳನ್ನು ಸ್ವಯಂಚಾಲಿತವಾಗಿ ಪಡೆಯಲಾಗುತ್ತದೆ. ಕೈಯಾರೆ ಅಂಕ ನಮೂದಿಸಲು ಅಥವಾ ಅಂಕಪಟ್ಟಿ ಪ್ರತಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು KEA ಸ್ಪಷ್ಟಪಡಿಸಿದೆ.
ಅಂಕಗಳ ವಿವರವನ್ನು ನಿಗದಿತ ಅವಧಿಯಲ್ಲಿ ಅಪ್ಡೇಟ್ ಮಾಡದಿದ್ದರೆ UG-CET ಫಲಿತಾಂಶ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ವಿದ್ಯಾರ್ಥಿಗಳು
1️⃣ ಮೊದಲು DigiLocker ನಲ್ಲಿ ಲಾಗಿನ್ ಆಗಿ 12ನೇ ತರಗತಿ ಅಂಕಪಟ್ಟಿ ಡೌನ್ಲೋಡ್ ಮಾಡಬೇಕು.
2️⃣ ಬಳಿಕ KEA CET Online ಪೋರ್ಟಲ್ಗೆ ಲಾಗಿನ್ ಆಗಿ ಅಂಕಗಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.
ಹೆಚ್ಚಿನ ಮಾಹಿತಿಗೆ KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

