ಕೆ.ಆರ್.ಪೇಟೆ.ಮೇ 20ರಂದು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬ ಅಂಗವಾಗಿ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರವು ಪೂಜ್ಯ ಶ್ರೀಗಳು ಮತ್ತು ಗುರು ಹಿರಿಯರ ಆಶೀರ್ವಾದದಿಂದ ಮತ್ತು ಆತ್ಮೀಯರ ಸಹಕಾರದಿಂದ ಯಶಸ್ವಿಯಾಗಿ ನಡೆದಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತಾಲ್ಲೂಕಿನ ಜನತೆಗೆ ಹೃದಯ ಪೂರ್ವಕ ಧನ್ಯವಾದ ಎಂದು ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಗಂಜಿಗೆರೆ ಮಹೇಶ್ ತಿಳಿಸಿದರು.
ಪಟ್ಟಣದ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಮೇ 20.ರಂದು ಮಂಗಳವಾರ ಆರ್ಟಿಓ ಮಲ್ಲಿಕಾರ್ಜುನ್ ರವರ ಹುಟ್ಟು ಹಬ್ಬದ ಪ್ರಯುಕ್ತ ನಮ್ಮ ಟ್ರಸ್ಟ್ ಕಚೇರಿ ಸಮೀಪದ ಆವರಣಲ್ಲಿ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಹಾಗೂ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ 90% ಅಂಕಗಳನ್ನು ಪಡೆದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಾದ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆದ ಸೀಸನ್ 12.ರ ಬಿಗ್ ಬಾಸ್ ವಿನ್ನರ್ ಗಿಲ್ಲಿನಟ, ರನ್ನರ್ ಕಾವ್ಯಶೈವ, ಯುಪಿಎಸ್ಸಿ 2025 ಪರೀಕ್ಷೆಯಲ್ಲಿ ಐ.ಆರ್.ಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ಡಾ. ಎ.ಎಸ್.ಮುತ್ತೇಶ್ಗೌಡ, ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ವಿಜಯಕುಮಾರಿ, 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಮೊದಲ ಸ್ಥಾನ ಪಡೆ ಎಲ್.ವೈ.ಲಾವಣ್ಯ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಹೆಚ್.ಎಸ್.ಹಂಶಿಕ ಹಾಗೂ ಬಿ.ವಿ.ವಿಕಾಸ್ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯತು.

ಸುಮಾರು 3 ಸಾವಿರ ನಾಗರೀಕರು ಬೃಹತ್ ಆರೋಗ್ಯ ಮೇಳದಲ್ಲಿ ಭಾಗವಹಿಸಿದ್ದರು.250 ಕ್ಕೂ ಹೆಚ್ಚು ಜನರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಸಮಾರಂಭದ ಹಿಂದಿನ ದಿನ ಗ್ರಾಮೀಣ ಭಾಗದ ಕಲೆಗೆ ಉತ್ತೇಜನ ಕೊಡುವ ಉದ್ದೇಶದಿಂದ ರಾಜ್ಯಮಟ್ಟದ ರಂಗಕುಣಿತ ಸ್ಪರ್ಧೆಯನ್ನು ಆಯೋಜಿಸಿದ್ದು, ರಂಗ ಪ್ರೇಮಿಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.ಸಮಾರಂಭಕ್ಕೆ ಪೂರ್ಣಕುಂಭದೊಂದಿಗೆ ಆಗಮಿಸಿದ ಪರಮ ಪೂಜ್ಯ ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು,ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿಗಳು, ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು,ಶ್ರೀ ಶಿವಬಸವಸ್ವಾಮೀಜಿಗಳು, ಶ್ರೀ ಮ.ನಿ.ಪ್ರ.ಸ್ವ. ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳು, ಶ್ರೀ ಡಾ.ಜೆ.ಎನ್.ರಾಮಕೃಷ್ಣಗೌಡ, ರಾಜಯೋಗಿನಿ ಬ್ರಹ್ಮಾಕುಮಾರಿ ಸವಿತಾ, ಶ್ರೀ ಸಿದ್ಧಯೋಗಿ ಶ್ರೀ ನಿಜಗುಣ ಸಿದ್ಧಲಿಂಗಯ್ಯ ಒಡೆಯರ್ ಸ್ವಾಮೀಜಿಗಳು, ರೆವರೆಂಡ್ ಫಾದರ್ ಪೌಲುಸ್ ಥೋಮಸ್ ಭಾಗವಹಿಸಿದರು.
ಈ ಐತಿಹಾಸಿಕ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಟ್ಟಂತಹ ಹರ ಚರ ಗುರುಮೂರ್ತಿಗಳಿಗೂ, ಗಣ್ಯರಿಗೂ,ಆರೋಗ್ಯ ಶಿಬಿರ ಆಯೋಜನೆ ಮಾಡಿಕೊಟ್ಟಂತಹ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರಿಗೂ ಸಾಧಕರಿಗೂ,ವಿದ್ಯಾರ್ಥಿಗಳಿಗೂ, ಪೋಷಕರಿಗೂ,ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕ ಬಂಧುಗಳಿಗೂ, ಸಮಾರಂಭದ ಯಶಸ್ವಿಗೆ ಹಗಲಿರುಳು ದುಡಿದಂತಹ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳಿಗೂ,ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರಿ ನೀಡಿದ ಸರ್ವರಿಗೂ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಸೋಮಶೇಖರ್.ನಿವೃತ್ತ ಪ್ರಾಂಶುಪಾಲ ಕೆ ಕಾಳೇಗೌಡ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾಧ್ಯಕ್ಷ ಸುಜೇಂದ್ರ ಕುಮಾರ್, ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಟಿ.ವೈ ಆನಂದ್,ನಿಕಟ ಪೂರ್ವ ಅಧ್ಯಕ್ಷ ವಕೀಲ ಅಪ್ಪನಹಳ್ಳಿ ಅರುಣ್ ಕುಮಾರ್, ಕ್ರೈಸ್ತ ಕಿಂಗ್ ಪಿ.ಯು ಕಾಲೇಜು ಪ್ರಾಂಶುಪಾಲ ಶಿವರಾಜು,ಹಿರಿಯ ಪತ್ರಕರ್ತ ಕಿಕ್ಕೇರಿ ಬಲರಾಮು,ಪ್ರಸನ್ನ ಕುಮಾರ್,ಯುವ ಮುಖಂಡ ಮಾಕವಳ್ಳಿ ಸಾಯಿ ಸುಮಿತ್, ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
