ಕೆ.ಆರ್.ಪೇಟೆ. ರಾಜ್ಯದ ಜನರಿಗೆ ಉಪಯೋಗವಾಗುವ ಜನಪರ ಕೆಲಸಗಳನ್ನು ಮಾಡುವುದೇ ಸರ್ಕಾರದ ಉದ್ದೇಶವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಐವತ್ತು ಹಾಸಿಗೆಗಳ ದುಂಡಶೆಟ್ಟಿ ಲಕ್ಷ್ಮಮ್ಮ ತಾಯಿ ಮಕ್ಕಳ ಆಸ್ಪತ್ರೆಯನ್ನು ಶಾಸಕ ಹೆಚ್ ಟಿ.ಮಂಜು ಜೊತೆಗೂಡಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಜನರಿಗೆ ಉಪಯೋಗವಾಗುವ ಜನೊರ ಕೆಲಸಗಳನ್ನು ಮಾಡುವುದೇ ಅದರ ಉದ್ದೇಶವಾಗಿರುತ್ತದೆ. ಹಿಂದಿನ ಸರ್ಕಾರ ತಂದ ಅನುದಾನಗಳನ್ನು ಅನುಷ್ಟಾನ ಮಾಡುವುದು ಅವರವರ ಕಾಲಕ್ಕೆ ಸೇರಿದ್ದು. ಹಾಗಾಗಿ ಅಭಿವೃದ್ದಿ ಕೆಲಸ ನಿಲ್ಲಭಾರದು ಎಂಬ ಉದ್ದೇಶದಿಂದ ಒಂದು ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಮೈಸೂರು ಹಾಸನ ದೂರದ ಜಿಲ್ಲಾ ಕೇಂದ್ರಗಳಿಗೆ ತೆರಳುತ್ತಿದ್ದ ಗರ್ಭಿಣಿಯರಿಗೆ ಈ ಆಸ್ಪತ್ರೆ ಸಹಕಾರಿಯಾಗಲಿದೆ.ಆಸ್ಪತ್ರೆಯಲ್ಲಿ ಉತ್ತಮವಾಗಿ ನಿರ್ವವಹಿಸುವ ವೈದ್ಯರುಗಳಿದ್ದಾರೆ.ತಾಯಿ ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಿದ ಉದ್ದೇಶ ಏನೆಂದರೆ ತಾಯಿ ಹಾಗೂ ಮಕ್ಕಳ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದೇ ಆಗಿದೆ. ಬಿ.ಪಿ.ಎಲ್ ಕಾರ್ಡು ಇರುವ ಮಹಿಳೆಯರಿಗೆ ಇಲ್ಲಿ ಉಚಿತವಾಗಿ ಹೆರಿಗೆ ಸೌಲಭ್ಯ ಮಾಡಲಾಗುತ್ತಿದೆ. ಎಬಿ.ಆರ್. ಕೆ. ಯೋಜನೆಯಡಿ ಬಡವರಿಗೆ ಒಂದುವರೆ ಸಾವಿರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಿಜಿಎಸ್ ಜಯದೇವ ಶ್ರೀ ಆದಿಚುಂಚನಗಿರಿ ಆಸ್ಸ್ಪತ್ರೆಗಳಲ್ಲಿಯೂ ಈ ಸೌಲಭ್ಯ ಪಡೆದುಕೊಳ್ಳಿ. ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು. ಆರೋಗ್ಯ ಎಲ್ಲರಿಗೂ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಕಡೆಗೆ ನೀಡಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇಸಿಜಿ ಸೇರಿದಂತೆ ಹಲವು ಆರೋಗ್ಯ ತಪಾಸಣೆಗಳನ್ನು ಮಾಡಲಾಗುತ್ತಿದೆ. ಜಿಲ್ಲಾಡಳಿತ ಅನೇಕ ಅಭಿವೃದ್ದಿ ಕೆಲಸಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿದೆ. ಆಸ್ಪತ್ರೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್. ಟಿ. ಮಂಜು ಮಾತನಾಡಿ ದುಂಡಶೆಟ್ಟಿ ಲಕ್ಷ್ಮಮ್ಮ ಕುಟುಂಬದವರು ಸುಮಾರು ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಸ್ಥಳವನ್ನು ತಾಲ್ಲೂಕಿನ ಎಲ್ಲ ವರ್ಗದ ಜನರ ಹಿತಕ್ಕಾಗಿ ನೀಡಿದ್ದಕ್ಕೆ ಅವರ ಕುಟುಂಬಕ್ಕೆ ಧನ್ಯವಾದಗಳು. ಯಾವುದೇ ಸರ್ಕಾರ ಬರಲಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಒಬ್ಬರನ್ಮು ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಸಚಿವರನ್ನು ಒತ್ತಾಯಿಸಿದರು.ಮಾಜಿ ಸಚಿವ ನಾರಾಯಣಗೌಡರ ಕಾಲದಲ್ಲಿ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗಿತ್ತು ನಂತರದ ದಿನಗಳಲ್ಲಿ ಅನುದಾನ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಿದ್ದೇನೆ. ಇಲ್ಲಿಗೆ ನೀಡಲಾಗಿದ್ದ ಸಾಮಗ್ರಿಗಳನ್ನು ಕೆ.ಆರ್. ನಗರಕ್ಕೆ ವರ್ಗಾವಣೆ ಮಾಡಿದ್ದು ಸರಿಯಷ್ಟೆ ಈ ಬಗ್ಗೆ ಆರೊಗ್ಯ ಸಚಿವರಿಗೆ ಆಯುಕ್ತರಿಗೆ ಪತ್ರಬರೆದು ತಿಳಿಸಿದ್ದೇನೆ. ಅವರು ಅಗತ್ಯ ಸಾಮಗ್ರಿಗಳನ್ನು ನೀಡುವ ಭರವಸೆ ನೀಡಿದ್ದಾರೆ.

ಆಸ್ಪತ್ರೆಗೆ ಸಿಬ್ಬಂದಿಯ ಕೊರತೆಯಿದ್ದು ಅದನ್ನು ತುಂಬುವ ಕೆಲಸಕ್ಕೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ. ಶಸ್ತ್ರಚಿಕಿತ್ಸೆ ಕೊಠಡಿ ರಿಪೇರಿಗಾಗಿ ಎಂಭತ್ತು ಲಕ್ಷ ರೂಪಾಯಿ ಒದಗಿಸಲಾಗಿದೆ.ನಮ್ಮ ತಾಲ್ಲೂಕು ಆಸ್ಪತ್ರೆ ಉತ್ಯಮವಾಗಿ ನಡೆಯುತ್ತಿದೆ. ಪ್ರತಿನಿತ್ಯ ಮುನ್ನೂರು ಜನ ಹೊರರೋಗಿಗಳಾಗಿ ದಾಖಲಾಗುತ್ತಿದ್ದಾರೆ.ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ಅದನ್ಮು ನಿರ್ವಹಿಸುವ ತಜ್ಞರು ಇಲ್ಲ ಅದನ್ನು ಸರ್ಕಾರ ಜೊತೆಗೆ ಸಚಿವರು ಒದಗಿಸಬೇಕು ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುಳ ಪ್ರಾಸ್ಥಾವಿಕವಾಗಿ ಮಾತನಾಡಿದರು. ತಾಯಿ ಮಗು ಆಸ್ಪತ್ರೆ ನಿರ್ಮಾಣಕ್ಕೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಸ್ಥಳವನ್ನು ದಾನ ನೀಡಿದ ದುಂಡಶೆಟ್ಟಿ ಲಕ್ಷ್ಮಮ್ಮ ಕುಟುಂಬದ ವೆಂಕಟಶೆಟ್ಟರನ್ನ ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್,ಡಿಹೆಚ್ ಓ ಮೋಹನ್,ಕೈ ಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್, ಉಪವಿಭಾಗಾಧಿಕಾರಿ ಕೆ. ಶ್ರೀನಿವಾಸ್,ಜಿ.ಪಂ ಮಾಜಿ ಸದಸ್ಯ ಬಿ.ಎಲ್ ದೇವರಾಜು,ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ,ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಕೆ ಪಿ ಸಿ ಸಿ ಸದಸ್ಯ ಕಿಕ್ಕೇರಿ ಸುರೇಶ,ಗ್ಯಾರಂಟಿ ಅನುಷ್ಠಾನ ನಮಿತಿ ಅಧ್ಯಕ್ಷ ಕುಮಾರ್,ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮೋಹನ್, ತಹಶೀಲ್ದಾರ್ ಡಾ ಅಶೋಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಜಿತ್,ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ಪ್ರವೀಣ್, ರವೀಂದ್ರ ಬಾಬು, ಕೆ.ಬಿ ಮಹೇಶ್,ಉದ್ಯಮಿ ನಂಜುಂಡ ಸ್ವಾಮಿ,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
