ತುಮಕೂರು:ವಿದ್ಯೋದಯ ಕಾನೂನು ಕಾಲೇಜು, ಯೂತ್ ರೆಡ್ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಕಾಲೇಜಿನಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸಿದ್ದಾರ್ಥ ಕಾಲೇಜಿನ ಪ್ರೊ.ಡಾ.ರಾಜೇಂದ್ರ ಪ್ರಸಾದ್ ಪ್ರಭಾರ ಅಧಿಕಾರಿಗಳು ರಕ್ತನಿಧಿ ಕೇಂದ್ರ ಎಸ್.ಎಸ್.ಎಂ.ಸಿ. ತುಮಕೂರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಹಾಗೂ ತಾವು ತೆಗೆದುಕೊಂಡು ಹೋದ ರಕ್ತವನ್ನು ಯಾವ ರೀತಿ ಸಂರಕ್ಷಿಸಿಡುವ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಹಾಗೂ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲವಾಗಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಹೆಚ್ಚು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ವಿದ್ಯೋದಯ ಫೌಂಡೇಷನ್ (ರಿ) ಟ್ರಸ್ಟ್, ನ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಟ್ರಸ್ಠಿಗಳು ಮತ್ತು ಹಿರಿಯ ವಕೀಲರಾದ ಹೆಚ್.ಎಸ್.ರಾಜುರವರು ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು ಹಾಗೂ ಪ್ರತಿ ದಿನ ನಮ್ಮ ಕಾನೂನು ವಿದ್ಯಾರ್ಥಿಗಳು ತುರ್ತು ಸಂಧರ್ಭದಲ್ಲಿ ಅವಶ್ಯಕವಿರುವ ರಕ್ತವನ್ನು ನೀಡುವ ಮೂಲಕ ಅವಶ್ಯಕತೆ ಇರುವವರಿಗೆ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಾರ್ಥ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಪ್ರೊ.ಕೆ.ಚಂದ್ರಣ್ಣ ಸಿ.ಇ.ಒ.ರವರು., ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಶಮಾಸೈಯದಿರವರು, ಯೂತ್ರೆಡ್ಕ್ರಾಸ್ ಸಂಚಾಲಕರಾದ ಶ್ರೀಮತಿ ಪುಷ್ಪ ಕೆ.ಎಸ್., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾದ ಡಾ.ಕಿಶೋರ್ ವಿ.ರವರು., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
-ಚಂದ್ರಚೂಡ ಐ ಕೆ
