ಕೆ.ಆರ್.ಪೇಟೆ: ತಾಲ್ಲೂಕಿನ ಹೇಮಗಿರಿ ನಾಟನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 10ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು 6 ಮಂದಿ ಜಯಬೇರಿ ಭಾರಿಸಿದ್ದಾರೆ. ಅದೇ ರೀತಿ ಮನ್ ಮುಲ್ ನಿರ್ದೇಶಕ ಡಾಲು ರವಿ ಬಣದ ನಾಲ್ಕು ಮಂದಿ ಗೆಲುವು ಸಾಧಿಸಿದ್ದಾರೆ.
ಗೆದ್ದವರ ವಿವರ: ಎನ್.ಜಿ.ಹೇಮಂತ್, ಎನ್.ಕೆ.ಮೂರ್ತಿ, ಎನ್.ಎ.ಯೋಗೇಶ್, ಎನ್.ಟಿ.ಹರೀಶ್, ಎನ್.ಕೆ.ಜಯಪ್ರಕಾಶ್, ಎನ್.ಜೆ.ಪಾಂಡು, ಶಂಭುಲಿಂಗಾಚಾರಿ, ಸುನಿಲ್, ಮಂಜುನಾಥನಾಯಕ್ ಎನ್.ಎನ್.ಸಹನಾ, ಹೆಚ್.ಜಿ.ಬಿಂದು ಅವರು ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಶೋಭಾ ಕಾರ್ಯನಿರ್ವಹಿಸಿದರು. ಸಹ ಕಾರ್ಯದರ್ಶಿಯಾಗಿ ಸಂಘದ ಸಿಇಓ ಶಿವಕುಮಾರ್ ಕಾರ್ಯನಿರ್ವಹಿಸಿದರು.

ಸಂಘದ ನೂತನ ಎಲ್ಲಾ ನಿರ್ದೇಶಕರುಗಳನ್ನು ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಗ್ರಾಮದ ಜೆಡಿಎಸ್ ಮುಖಂಡರಾದ ಅಣ್ಣೇಗೌಡ, ಎನ್.ಸಿ.ರಾಮೇಗೌಡ, ಗ್ರಾ.ಪಂ.ಸದಸ್ಯ ಎನ್.ಕೆ.ಶಂಕರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಬಿ.ಅಶ್ವತ್, ಎನ್.ಆರ್.ನಾಗರಾಜು, ಎನ್ಟಿ.ಗೋಪಾಲ್, ಎನ್.ಎಸ್.ಬಸವರಾಜು, ಜೆಡಿಎಸ್ ಯುವ ಮುಖಂಡ ದಿಲೀಪ್, ಎನ್.ಜೆ.ಮಂಜು, ಗ್ರಾಮದ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಬೀರುವಳ್ಳಿ ಸೊಸೈಟಿ ಅಧ್ಯಕ್ಷ ಅನಿಲ್ ಕುಮಾರ್, ಎನ್.ಜೆ.ಮಹೇಶ್, ಎನ್.ಕೆ.ವಿಜಿಕುಮಾರ್ ಮತ್ತಿತರರು ಆಭಿನಂದಿಸಿದ್ದಾರೆ.
– ಶ್ರೀನಿವಾಸ್ ಆರ್.
