ಕೆ.ಆರ್.ಪೇಟೆ.ವಿಶ್ವ ತಂಬಾಕು ವಿರೊಧಿ ದಿನವನ್ನು ಆಚರಿಸುತ್ತಿರುವುದು ಸದೃಢ ಸಮಾಜಕ್ಕಾಗಿ ಹಾಗೂ ಸಾಮಾಜಿಕ ಪರಿವರ್ತನೆಗೆ ಪೂರಕವಾಗಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.
ಪಟ್ಟಣದ ಕ್ರೈಸ್ತ ಕಿಂಗ್ ಪಿ.ಯು ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಜನರು ಮಾದಕ ತಂಬಾಕು ಹಾಗೂ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ಪೋಷಕರು ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸದಿರುವುದು.ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ನೀಡುತ್ತಿರುವುದು ದುಶ್ಚಟಕ್ಕೆ ಪ್ರೇರೇಪಿಸುತ್ತಿವೆ ಈ ಬಗ್ಗೆ ಯುವ ಜನತೆ ಎಚ್ಚರಿಕೆ ವಹಿಸಬೇಕು,ವಿದ್ಯಾರ್ಥಿಗಳಿಗೆ ಕಾಲಕ್ಕೆ ತಕ್ಕ ಮಾರ್ಗದರ್ಶನ ನೀಡಬೇಕು ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.ವಿದ್ಯಾರ್ಥಿಗಳಲ್ಲಿ ಮದ್ಯಪಾನ ಒಂದು ಶೋಕಿಗೆ ಆರಂಭವಾಗಿ ಕೊನೆಗೆ ಬದುಕನ್ನೆ ಕೊನೆ ಗೊಳಿಸುವವರೆಗೆ ತಲುಪುತ್ತಿದೆ.ಗ್ರಾಮೀಣ ಪ್ರದೇಶ ಕ್ಕಿಂತ ನಗರ ಪ್ರದೇಶಗಳಲ್ಲಿ ಮದ್ಯಪಾನದ ಮತ್ತಿ ನಲ್ಲಿ ಅನೇಕ ಅಪರಾಧಗಳು ಘಟಿಸುತ್ತಿದ್ದು, ಸಮಾಜದ ಸ್ವಾಸ್ಥ್ಯಕ್ಕೆಧಕ್ಕೆ ತರುತ್ತಿದೆ.ಆದುದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣದ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಬೇಕು ಎಂಬ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸುದೃಢ ಸಮಾಜಕ್ಕಾಗಿ ತಂಬಾಕು ವಿರೋಧಿ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ ಕೇಸಮೂರ್ತಿ ಶ್ರೀ ಧರ್ಮಸ್ಥಳ ಯೋಜನೆ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಪೂರಕವಾಗಿವೆ.ಸಾರ್ವಜನಿಕರು ತಂಬಾಕು ಹಾಗೂ ಇನ್ನಿತರೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಬೇಕು ಪೊಲೀಸ್ ಇಲಾಖೆ ಸಮುದಾಯ ಮತ್ತು ಕುಟುಂಬಗಳ ರಕ್ಷಣೆಗೆ ಸದಾ ಸಿದ್ಧವಿದೆ.ಇಲಾಖೆಯ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕ್ರೈಸ್ತ ಕಿಂಗ್ ಪಿ.ಯು ಕಾಲೇಜಿನ ಪ್ರಾಂಶುಪಾಲ ಶಿವರಾಜು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅತಿಯಾದ ತಂಬಾಕು ಸೇವನೆಯಿಂದ ಯುವಕರು ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿಶ್ವ ತಂಬಾಕು ವಿರೋಧಿ ದಿನವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿ ಮಹೇಶ್ ಗಂಜಿಗೆರೆ ಭಾರತದಂತಹ ಸಾಂಸ್ಕೃತಿಕ ಪ್ರಧಾನ ದೇಶದಲ್ಲಿ ಯುವಕರೊಂದಿಗೆ ಯುವತಿಯರು ಮಹಿಳೆಯರು ದುಶ್ಚಟಗಳಿಗೆ ಬಲಿಯಾಗು ತ್ತಿರುವುದು ವಿಷಾದನೀಯ. ದುಶ್ಚಟಗಳ ಪರಿಣಾಮಗಳ ಬಗ್ಗೆ ಯುವಜನತೆಯಲ್ಲಿ ಅರಿವು ಮುಖ್ಯ.ಇದು ಭೀಕರ ಪರಿಣಾಮಗಳನ್ನು ಜೀವನದಲ್ಲಿ ಎದುರಿಸುವ ಬದಲು ಇವುಗಳಿಂದ ದೂರವಿರಬೇಕು ಮತ್ತು ನೆರೆಹೊರೆಯವರು ದುಶ್ಚಟಗಳಿಗೆ ಬಲಿಯಾಗಿ ರುವವರನ್ನು ಎಚ್ಚರಿಸಿ ಅದರಿಂದ ವಿಮುಕ್ತ ರಾಗುವಂತೆ ಮಾಡಬೇಕು.ತಂತ್ರಜ್ಞಾನ ಮುಂದುವರಿದಂತೆ ಯುವಜನತೆ ಸಂಸ್ಕೃತಿಯನ್ನು ಮರೆಯುತ್ತಿರು ವುದೇ ದುಶ್ಚಟಗಳು ಹೆಚ್ಚಾಗಲು ಕಾರಣವಾಗಿದೆ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲ ತಾಣ ಗಳು ಮಾಹಿತಿ ಬಳಕೆಗಿಂತ ಚಟಗಳಾಗಿ ಪರಿವರ್ತನೆ ಯಾಗುತ್ತಿದ್ದು ಮಾನಸಿಕ ರೋಗಿ ಗಳನ್ನಾಗಿಸುತ್ತಿದೆ. ಇವುಗಳ ಬಳಕೆಯ ಬಗ್ಗೆ ಯುವಜನರು ಜಾಗೃತಿ ವಹಿಸಬೇಕು ಎಂದರು.
ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಹರಿಚರಣ್ ತಿಲಕ್, ಅಂಥೋನಿಸ್ವಾಮಿ, ಎ.ಎಸ್.ಐ ಕೇಶವ್ ಮೂರ್ತಿ, ಶ್ರೀ ಧರ್ಮಸ್ಥಳ ಸಂಸ್ಥೆಯ ಕೆ.ಆರ್.ಪೇಟೆ ಯೋಜನಾ ಅಧಿಕಾರಿ ತಿಲಕ್ ರಾಜ್, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಶ್ರೀ ಧರ್ಮಸ್ಥಳ ಸಂಸ್ಥೆಯ ಸೇವಾ ಪ್ರತಿನಿಧಿಗಳಾದ ಲಕ್ಷ್ಮೀ, ಪ್ರಾಂಶುಪಾಲ ಶಿವರಾಜ್ ಸೇರಿದಂತೆ ಉಪನ್ಯಾಸಕ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
