ತುಮಕೂರು: ವಕೀಲರ ಸಹಕಾರವಿದ್ದರೆ ಕಕ್ಷಿದಾರರ ಕೇಸುಗಳನ್ನು ಬೇಗ ಬೇಗ ಇತ್ಯರ್ಥಪಡಿಸಬಹುದು,ವಕೀಲರು ಮತ್ತು ನ್ಯಾಯಾಧೀಶರು ರಥದ ಎರಡು ಗಾಲಿಗಳಿದ್ದಂತೆ,ತುಮಕೂರು ಜಿಲ್ಲೆಯಲ್ಲಿ ಇಂದು ಸಾವಿರಾರು ಕೇಸುಗಳು ಬಾಕಿ ಇವೆ,ಅವುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ನ್ಯಾಯಾಧೀಶರೊಂದಿಗೆ ವಕೀಲರು ಸಹಕಾರ ನೀಡಿದರೆ ಬೇಗ ಇತ್ಯರ್ಥಪಡಿಸಬಹುದು,ಜಿಲ್ಲಾ ನ್ಯಾಯಾಲಯಕ್ಕೆ ಜಾಗದ ಸಮಸ್ಯೆ ಇದೆ,ಸರ್ಕಾರ ಈಗಾಗಲೇ 10 ಎಕರೆ ಜಾಗವನ್ನು ನೀಡಿದೆ,ಇನ್ನೂ 5ರಿಂದ 10 ಎಕರೆ ಜಾಗ ನೀಡಿದರೆ ಉತ್ತಮವಾದ ನ್ಯಾಯಾಂಗ ಸಂಕೀರ್ಣ ಕಟ್ಟಬಹುದು,ದಿನದಿಂದ ದಿನಕ್ಕೆ ಇಲ್ಲಿ ಕಕ್ಷಿದಾರರು ಮತ್ತು ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ,ಅವುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ, ಇವೆಲ್ಲ ಗಮನದಲ್ಲಿಟ್ಟುಕೊಂಡು ನೂತನ ನ್ಯಾಯಾಂಗ ಸಂಕೀರ್ಣ ಮಾಡಲು ಹೆಜ್ಜೆ ಇಡುತ್ತಿದ್ದೇವೆ ಈ ನಿಟ್ಟಿನಲ್ಲಿ ವಕೀಲರು ನಮಗೆ ಹೆಚ್ಚಿನ ಸಹಕಾರ ನೀಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ರವರು ಮನವಿ ಮಾಡಿದರು.
ಅವರು ಇಂದು ಜಿಲ್ಲಾ ವಕೀಲರ ಸಂಘದಲ್ಲಿ ತುಮಕೂರಿಗೆ ನೂತನವಾಗಿ ವರ್ಗಾವಣೆ ಆಗಿ ಬಂದಿರುವ ನ್ಯಾಯಾಧೀಶರುಗಳಿಗೆ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಜಿಲ್ಲೆಯ ವಕೀಲರು ಒಳ್ಳೆಯವರು,ಸಾಧು ಸ್ವಭಾವದರು,ವಕೀಲರ ಸಹಕಾರ ಎಲ್ಲಾ ನ್ಯಾಯಾಧೀಶರಿಗೆ ಇದ್ದೇ ಇರುತ್ತದೆ,ನ್ಯಾಯಾಧೀಶರುಗಳು ಕಿರಿಯ ವಕೀಲರುಗಳಿಗೆ ಸಹಕಾರ ನೀಡಬೇಕು ಮತ್ತು ಸೂಕ್ತ ಮಾರ್ಗದರ್ಶನ ನೀಡಬೇಕು,ಕೇಸುಗಳನ್ನು ನಡೆಸುವ ರೀತಿ,ವಾದಪತ್ರಗಳ ಸಿದ್ಧಪಡಿಸುವಿಕೆ ಇತ್ಯಾದಿ ಅರ್ಜಿಗಳನ್ನು ಬರೆಯುವುದು,ನ್ಯಾಯಾಲಯಕ್ಕೆ ಹಾಕುವ ರೀತಿಯನ್ನು ಹಿರಿಯ ವಕೀಲರು ಕಿರಿಯ ವಕೀಲರಿಗೆ ತಿಳಿಸಿರುತ್ತಾರೆ ಅದರಂತೆ ನ್ಯಾಯಾಧೀಶರುಗಳು ಸಹ ಕಿರಿಯ ವಕೀಲರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು,ಭಯಭೀತಿ ಬೀಳದೆ ಕಿರಿಯ ವಕೀಲರು ಯಾವುದೇ ನ್ಯಾಯಾಲಯಗಳಿಗೆ ಹೋಗಿ ವಾದ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಲು ನ್ಯಾಯಾಧೀಶರ ಮಾರ್ಗದರ್ಶನ ಸಹ ಮುಖ್ಯ, ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಶ್ರಮ ಅತ್ಯಂತ ದೊಡ್ಡದು ನಾವೆಲ್ಲರೂ ನ್ಯಾಯಾಂಗವನ್ನು ಬಲಪಡಿಸೋಣ,ಕಕ್ಷಿದಾರರ ಹಿತ ಕಾಯೋಣ ಎಂದು ಮನವಿ ಮಾಡುತ್ತಾ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ನ್ಯಾಯಾಧೀಶರುಗಳಿಗೆ ಸ್ವಾಗತ ಕೋರಿದರು.

ವೇದಿಕೆಯಲ್ಲಿ ನೂತನವಾಗಿ ಆಗಮಿಸಿರುವ ನ್ಯಾಯಾಧೀಶರುಗಳಾದ ಮೊಹಮ್ಮದ್ ಅಶ್ರಫ್ ಹ್ಯಾರಿಸ್,ಎಸ್.ಜಿ.ಸುನಿತಾ,ಸಯ್ಯದ್ ಅರಾಫತ್ ಇಬ್ರಾಹಿಂ.ಎಂ, ಸ್ಮಿತಾಮಾಲಾಗೋನ್ವೆ,ಸುಮಲತಾ.ಎಲ್,ಸಂಜಯ್.ಎಂ.ಮಲ್ಲಿಕಾರ್ಜುನಯ್ಯ,ಅರ್ಪಿತ.ಕೆ.ವಿ.ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ನ್ಯಾಯಾಲಯದ ಹಾಲಿ ನ್ಯಾಯಾಧೀಶರುಗಳು,ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ, ಡಿ.ಎ.ಜಗದೀಶ್,ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್.ಸೇವಾಪ್ರಿಯ.ಜೆ.ಎಸ್. ಮತ್ತು ಹಿರಿಯ,ಕಿರಿಯ,ಮಹಿಳಾ ವಕೀಲರುಗಳು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
