ತುಮಕೂರು: ದಕ್ಷಿಣ ಕನ್ನಡ ಮಿತ್ರ ವೃಂದದ ಕಾರ್ಯಕಾರಿ ಮಂಡಳಿಯ ಸಭೆ ಇತ್ತೀಚೆಗೆ ತುಮಕೂರು ನಗರದ ಹ್ಯಾಶ್ ಟ್ಯಾಗ್ ಕೆಫೆ ಸಭಾಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ 2026-2028 ರಹೊಸ ಕಾರ್ಯಕಾರಿ ಮಂಡಳಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಮರನಾಥ ಶೆಟ್ಟಿ ಕೆಂಜೂರುಮನೆ,ಉಪಾಧ್ಯಕ್ಷರಾಗಿ ಎನ್.ಎಸ್.ರವಿಆಚಾರ್,ಕಾರ್ಯದರ್ಶಿಯಾಗಿ ವೆಂಕಟೇಶ್.ಎಂ.ಎಸ್.ಕಾರಂತ್, ಖಜಾಂಚಿಯಾಗಿ ನರಸಿಂಹ ನಾಯಕ್, ಜಂಟಿ ಕಾರ್ಯದರ್ಶಿಯಾಗಿ ಸುಶೀಲಾರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ್ ರವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿ ಎಂಬ ವಿಶೇಷ ಉಪ ಸಮಿತಿಯನ್ನು ರಚಿಸಲಾಯಿತು.ಕ್ರೀಡಾ ಸಮಿತಿಯಲ್ಲಿ ಬಾಲಕೃಷ್ಣ ಶೆಟ್ಟಿ,ಸುಧೀರ್ ಹೆಗ್ಡೆ, ರವೀಂದ್ರ ಶೆಟ್ಟಿ, ಶ್ಯಾಮ ಸುಂದರ ಉರಾಳ್, ಹೇಮಾ ರಮೇಶ್ ಶೆಟ್ಟಿ,ಮಂಗಳ ಗೌರಿ,ಸಾಂಸ್ಕೃತಿಕ ಸಮಿತಿಯಲ್ಲಿ ಗುರುರಾಜ ನೇರಂಬಳ್ಳಿ,ಗುರುಮೂರ್ತಿ ಅಡಿಗ, ಮಾಂತು ಮಸ್ಕರೇನಾಸ್,ವಿದ್ಯಾ ಗುರುಪ್ರಕಾಶ್ ಬಳ್ಳಕ್ಕುರಾಯ,ಪೂಜಾ ವಾದಿರಾಜ್,ವಿಜಯಲಕ್ಷ್ಮಿ ಭಾಸ್ಕರ್ ಪ್ರಭು ಸೇರಿದಂತೆ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.ಎಲ್ಲರನ್ನು ನೂತನ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಕೆಂಜೂರುಮನೆರವರು ಸ್ವಾಗತಿಸಿ ಅಭಿನಂದಿಸಿದರು.
– ಚಂದ್ರಚೂಡ ಕೆ.ಬಿ.
