ಹಾಸನ : ಸುಕ್ಷೇತ್ರ ತುಮಕೂರಿನ ತಪೋವನ,ಹಿರೇಮಠದಲ್ಲಿ ಜೂನ್ 15ರ ಸೋಮವಾರದಂದು ನಡೆಯುವ ಗುರುಕೃಪೆಯಲ್ಲಿ ವಚನ ಬೆಳಗು ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲಾಗಿದೆ ಎಂದು ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ ವಿರಚಿತ ವಚನಾನಿರ್ವಚನ ಕೃತಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ದಿವ್ಯ ಸಾನಿದ್ಯ ಹಾಗೂ ಆಶೀರ್ವಚನವನ್ನು ಸುಕ್ಷೇತ್ರ ಹಿರೇಮಠ ತಪೋವನ ತುಮಕೂರಿನ ಮಾಠಾಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿಯವರು ನೀಡಲಿದ್ದಾರೆ. ಉದ್ಘಾಟನೆಯನ್ನು ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಚುಟುಕು ಯುಗಾಚಾರ್ಯ ಡಾ. ಎಂ ಜಿ ಆರ್ ಅರಸ್ ನೆರವೇರಿಸಲಿದ್ದಾರೆ. ಪ್ರಾಸ್ಥಾವಿಕ ನುಡಿಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ ನುಡಿಯಲಿದ್ದು ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಎ ನಾಡಿಗ್ ವಹಿಸಲಿದ್ದಾರೆ.
ಪುಸ್ತಕ ತಾoಬೂಲವನ್ನು ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಚುಟುಕು ಸಿರಿ ಡಾ. ರತ್ನ ಹಾಲಪ್ಪಗೌಡ ನೀಡಲಿದ್ದಾರೆ. ಹಾಸನದ ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾoಶುಪಾಲ ಡಾ. ಹೆಚ್ ಆರ್ ಆದರ್ಶ ವಚನಗಳ ಅಮೃತವನ್ನು ಲೋಕಕ್ಕೆ ಅರ್ಪಿಸುವರು.
ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲ್ಲೂಕು ಚುಸಾಪ ಅಧ್ಯಕ್ಷೆ ಪದ್ಮಮೂರ್ತಿ, ಹೊಳೆನರಸೀಪುರ ತಾಲ್ಲೂಕು ಚುಸಾಪ ಅಧ್ಯಕ್ಷೆ ಪ್ರೇಮಮಂಜುನಾಥ್, ಬೆಳಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಹಾಸನ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾನಾಗೇಂದ್ರ, ಹಾಸನ ತಾಲ್ಲೂಕು ಚುಸಾಪ ಅಧ್ಯಕ್ಷ ಕುಮಾರ್ ಹೆಚ್ ಬಿ, ಬೇಲೂರ್ ತಾಲ್ಲೂಕು ಚುಸಾಪ ಅಧ್ಯಕ್ಷ ಕಿರಣ್ ಕುಮಾರ್, ಸಕಲೇಶಪುರ ತಾಲ್ಲೂಕು ಚುಸಾಪ ಅಧ್ಯಕ್ಷ ಮಲ್ಲೇಶ್ ಜಿ, ಕದಳಿ ವೇದಿಕೆಯ ಅಧ್ಯಕ್ಷೆ ಗಿರಿಜಾ ನಿರ್ವಾಣಿ ಇನ್ನಿತರರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
