ಮೊನ್ನೆಯಷ್ಟೆ ಸದನದಲ್ಲಿ ಕರ್ನಲ್ ಮನೋಜ್ ಮುಕುಂದ ನರ್ವಾನೆಯವರ ಇನ್ನೂ ಲೋಕಾರ್ಪಣೆ ಮಾಡದ ಪುಸ್ತಕ (ಫೋರ್ ಸ್ಟಾರ್ಸ ಆಫ್ ಡೆಸ್ಟಿನಿ) ದ ಪ್ರತಿ ಸದನದಲ್ಲಿ ಲೀಡರ್ ಆಫ್ oppositin ತಮ್ಮ ಕೈಯಲ್ಲಿ ಹಿಡಿದು “ಈ ಪುಸ್ತಕದಲ್ಲಿ ನಮೂದಿಸಿದ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಅವಕಾಶ ಕೊಡಿ” ಎಂದು ಸಭಾಪತಿಯವರಿಗೆ ಕೇಳಿ ಕೊಂಡರು. ಆದರೆ ಸಭಾಪತಿಯವರು “ನೀವು ಬಡ್ಜಟ್ ಆಧಿವೇಶನ ಬಗೆಗಿನ ಪ್ರಶ್ನೆಗಳನ್ನು ಕೇಳಿ” ಎಂದು ಹೇಳಿ ಅವಕಾಶವನ್ನು ನೀಡಲಿಲ್ಲ.
ಇದರಿಂದ ಕೆರಳಿದ ಪ್ರತಿಪಕ್ಷದವರು ಭಾವಿಗೆ ಇಳಿದು ಉಡಾಳ ನಡುವಳಿಕೆ, ಸಭಾತ್ಯಾಗ ಮತ್ತು ಸಭಾಪತಿಗಳ ಅವಿಶ್ವಾಸ ನಿರ್ಣಯದ ಗೊತ್ತುವಳಿ ಹೇರಿದರು. ಇದನ್ನು ಸರ್ಕಾರ ಮುಂದಿನ ಬಜಟ್ ಆಧಿವೇಶನದಲ್ಲಿ ಚರ್ಚೆಯ ವಿಷಯವಾಗಿ ಮಂಡನೆ ಮಾಡುವುರಿದ್ದಾರೆ. ಈ ವಿಷಯ ಜಗತ್ ಜಾಹಿರಾತಾಗಿದೆ ಮತ್ತು ಬೃಹತ್ ಚರ್ಚೆಯ ವಿಷಯ ಆಗಿದೆ. ಸಂಸದರು ಅಥವಾ ಪ್ರತಿಪಕ್ಷದ ಮುಖಂಡರು ಯಾವುದೇ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಅಥವಾ ಪ್ರಶ್ನೆಗಳು ಕೇಳುವ ಮುನ್ನ ಸಭಾಪತಿಗಳ ಗಮನಕ್ಕೆ ತರಬೇಕೆಂಬುದು ಸಂವಿಧಾನಕ ನಿಯಮ. ಈ ನಿಯಮವನ್ನು ಉಲ್ಲಂಘಿಸಿದ ಕಾರಣ ಸಭಾಪತಿಗಳು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡಿರಲಿಲ್ಲ.
ಹಾಗಾದರೆ ಆ ಪುಸ್ತಕದಲ್ಲಿ ಅಂತಹ ಚರ್ಚೆಯ ವಿಷಯವಾದರೂ ಏನಿತ್ತು? ಕರ್ನಲ್ ನರ್ವಾನೆ ತಮ್ಮ ಪುಸ್ತಕದಲ್ಲಿ ಅವರು 2020 ರ ಇಸವಿಯಲ್ಲಿ ಆರ್ಮಿ ಚೀಫ್ ಆಗಿದ್ದಾಗ ಲಡಾಕ್ ಗಲ್ವಾನ್ ಪ್ರಾಂತ್ಯದಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ಸಂಘರ್ಷ ಆದಾಗ ಡಿಫೆನ್ಸ ಮಂತ್ರಿ ಶ್ರೀಯುತ ರಾಜನಾಥ್ ಸಿಂಗ್ ರಿಗೆ ಕರೆ ಮಾಡಿ ಚೀನಿಯರ ಟ್ಯಾಂಕ್ಸ ಮತ್ತು ಆ ದೇಶದ ಸೈನಿಕರು ನಮ್ಮ ಗಡಿಯ ಹತ್ತಿರ ಬಂದಿರುವುದನ್ನು ತಿಳಿಸಿ ಏನು ಮಾಡಬೇಕೆಂಬುದನ್ನು ಕೇಳಿದ್ದರಂತೆ. ಆಗ ಮಂತ್ರಿಗಳು ನಿಮಗೆ ತೋಚಿದ್ದನ್ನು ಮಾಡಿ ಎಂದು ಹೇಳಿದ್ದರಂತೆ. ಈ ವಿಷಯವನ್ನು ಕರ್ನಲ್ ತಮ್ಮ ಪುಸ್ತಕದಲ್ಲಿ ಬಹು ದೊಡ್ಡ ಜವಾಬ್ದಾರಿಯನ್ನು ನೀಡಿ ತಮಗೆ ಕ್ಷಣಾರ್ಧ ಏನು ತೋಚಲ್ಲಿಲ್ಲ ಎಂಬುದನ್ನು ವಿಸ್ತಾರವಾಗಿ ಬರೆದಿದ್ದಾರೆ. ಈ ವಿಚಾರ ಗಮನಿಸಿದ ಪ್ರತಿಪಕ್ಷದ ನಾಯಕರು ಇಂತಹ ಕಟು ನಿಲುವಳಿ ಭಾರತ ತೆಗೆದುಕೊಳ್ಳುಬಹುದೇ ಮತ್ತು ಭಾರತವನ್ನು ಇಂದಿನ ಸರ್ಕಾರ ಇಕ್ಕಟ್ಟಿಗೆ ಸಿಲಿಕಿಸುತ್ತಿದ್ದರೆನ್ನುವುದು ಅವರ ಪ್ರಶ್ನೆಯ ವಿಷಯವಾಗಿತ್ತು ಮತ್ತು ಭಾರತದ ಗಡಿ ಭಾಗವನ್ನು ಚೀನ ಮಿಲಿಟರಿ ಅತಿಕ್ರಮಣ ಮಾಡಿದ್ದಾರೆ ಎಂಬ ವಾದ ಸಹ ಇವರದಾಗಿತ್ತು.

ಈಗಷ್ಟೇ ಲೋಕಸಭೆಯ ಸಭಾಪತಿಗಳ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಎರಡು ದಿನಗಳು ಚರ್ಚೆ ಮತ್ತು ಪ್ರತಿ ಚರ್ಚೆಯ ನಂತರ ಸಭಾಪತಿಗಳು ಅವಿಶ್ವಾಸ ಮಂಡನೆ ವಿರುದ್ಧ ಸರ್ಕಾರ ಗೆದ್ದೂ ಆಯಿತು. ನನ್ನ ವಿಷಯ ಇದಲ್ಲ. ಆದರೆ ಪ್ರತಿ ಸಲವೂ ಚೀನಾದ ಹೆಸರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿ ಕಾಲ ಹರಣ ಆಗುತ್ತದೆಯಲ್ಲ ಎನ್ನುವುದೇ ನನ್ನ ಕಳಕಳಿ. ಹೀಗಿರುವಾಗ ಚೀನಾ ಅಷ್ಟು ಬಲಿಷ್ಠವೇ? ಕೇಳುವುದುಕ್ಕಿಂತ ನೋಡಿ ತಿಳಿದುಕೊಳ್ಳುವ ಇಚ್ಚೆಯಿತ್ತು. ಆ ಇಚ್ಛೆ ಮೊನ್ನೆಯಷ್ಟೇ ಈಡೇರಿತು.
ಕೆಂಪೆಗೌಡ ವಿಮಾನ ನಿಲ್ದಾಣದಿಂದ ಥೈಲಾಂಡ ದೇಶದ ರಾಜಧಾನಿಯಾದ ಸುವರ್ಣಭೂಮಿ ವಿಮಾನ ನಿಲ್ದಾಣದ ಮೂಲಕ ಚೀನಾ ರಾಜಧಾನಿ ಬೀಜಿಂಗಿನ ಕ್ಯಾಪಿಟಲ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದವು. ಸುಮಾರು ಒಂಭತ್ತು ಗಂಟೆ ಪ್ರಯಾಣ ಮತ್ತು ಮೂರು ಗಂಟೆಗಳ layoff ಇದ್ದು ಸ್ವಲ್ಪ ಬಳಲಿದ್ದೆವು. ನಾನು ಚೀನಾ ದೇಶದ ಭೌಗೋಳಿಕ ಲಕ್ಷಣಗಳನ್ನು ವಿವರಿಸಲು ಇಲ್ಲಿ ಹೋಗುವುದಿಲ್ಲ. ಚೀನ ಭೂಮಿ ಸ್ಪರ್ಶ ಮಾಡಿದ ತಕ್ಷಣ ನನ್ನ ನೆನಪಿಗೆ ಬಂದಿದ್ದು ಆ ದೇಶದಲ್ಲಿ ದೊರೆಯುವ rare earth metals.
ಗುಂಪು ಪ್ರವಾಸಿಗರಿಗೆ ಇಲ್ಲಿಯ ವೀಸಾ group visa, individual visa ಅಲ್ಲ. ಈ ವೀಸಾ ಇದ್ದರೆ immigration ಸುಲಭ. ಗುಂಪು ವೀಸಾಕ್ಕೆಂದೇ ವಲಸೆ counter ಇರುತ್ತವೆ. ಅಲ್ಲಿಯ policy ಎನೆಂದರೆ, ಮಿತ ಲಗೇಜ್. ಅಲ್ಲಿಯ ಸ್ಥಳೀಯ ನಾಗರಿಕ ವಿಮಾನ ಬಯುಸುವರು ಒಬ್ಬ ಪ್ರವಾಸಿಗೆ ಒಂದು check in ಬ್ಯಾಗೇಜ್ ಮತ್ತು ಒಂದು cabin ಬ್ಯಾಗಿಗೆ ಮಾತ್ರ ಅನುಮತಿ ನೀಡುತ್ತಾರೆ. ಅಲ್ಲಿಯ ತಾಂತ್ರಿಕತೆ ಎಷ್ಟು ಮುಂದವರಿದಿದೆ ಎಂದರೆ ಯಾವುದೇ ಏರಪೋರ್ಟ ಒಳ ಹೋಗುವ ಮುನ್ನ face scan ಮಾಡಿದರೆ ಸಾಕು ಎಲ್ಲವು ಸುಗಮ. ನಮ್ಮಲ್ಲಿಯ digi yathra (metro ನಗರಗಳಲ್ಲಿ ಮಾತ್ರ ಲಭ್ಯ) ಇದ್ದ ಹಾಗೆ. ಪ್ರವಾಸಿಗರ ಬಯೋ ಮೆಟ್ರಿಕ್ಸ ಮತ್ತು ಫೇಸ್ ಸ್ಕಾನ್ ಇಮ್ಮಿಗ್ರೇಶನ್ ಸಮಯದಲ್ಲೇ ತೆಗದುಕೊಂಡಿರುತ್ತಾರೆ.

ಮೊದಲೆ ತಿಳಿಸಿದಂತೆ ಚೀನಾ ಅಹಂಕಾರದಿಂದ ಮೆರೆಯಲು ಕಾರಣ ತನ್ನ ತಕ್ಕೆಯಲ್ಲಿ ಹೇರಳವಾಗಿ rare metals ನ ಖನಿಜ ಸಂಪತ್ತು ಇರುವುದರಿಂದ. ಮೊಬೈಲ್ ಫೋನ್ ಇಂದ ಹಿಡಿದು ಕೃತಕ ಬುದ್ದಿಮತಿ (Artificial Intelligence) ವರಿಗೂ ಈ ಖನಿಜದ ಅಂಶವನ್ನು ಅವಲಂಬಿಸಿರುತ್ತವೆ. ಆದುದರಿಂದ ಪ್ರಪಂಚದ ಅನೇಕ ಮುಂದುವರಿದ ದೇಶಗಳು ಚೀನಾ ದೇಶದಿಂದ ಈ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತವೆ. ಒಮ್ಮೊಮ್ಮೆ ಈ ದೇಶದ ಎದರು ಕೆಲವು ದೇಶಗಳು ಮಂಡಿ ಊರಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಆ ದೇಶದ ಹುಟ್ಟಡಗಿಸಲು ಭಾರತ ದೇಶ ಸೇರಿದಂತೆ ಸುಮಾರು ನಲವತ್ತು ದೇಶಗಳು ಈ ಖನಿಜಗಳಿಗೆ ಪರ್ಯಾಯ ವ್ಯವಸ್ಥೆಗೆ ಒಪ್ಪಂದ ಮಾಡಿಕೊಂಡಿವೆ.

ಆ ದೇಶದ ಪ್ರಜೆಗಳು ಆಚಾರ ವಿಚಾರಗಳಲ್ಲಿ ಭಾರತವನ್ನು ಹಿಂದಿಕ್ಕಿದ್ದಾರೆ. ಇವರ ನಂಬಿಕೆಗಳು ನಮ್ಮ ನಂಬಿಕೆಗಳಿಗಿಂತ ಮುಂದೆ ಇದ್ದಾರೆ. ಇಲ್ಲಿಯ ಧರ್ಮದ ಮೂಲ ಭಾರತ ದೇಶದಿಂದ ವಲಸೆ ಹೋದ ಬೌದ್ಧ ಅನುಯಾಯಿಗಳದು. ಅಂದರೆ ಸುಮಾರು ಐದು ಸಾವಿರ ವರ್ಷಗಳ ಹಿಂದಿನದು. ಭಾರತದಿಂದ ಬಿಕುಗಳ ವಲಸೆಯ ಕಾರಣ ಅಂದು ನಮ್ಮ ದೇಶದಲ್ಲಿ ಆದಂತಾ ಬಿಕುಗಳ ಮಾರಣಹೋಮ. ಅಲ್ಲಿಯ ಪ್ರಜೆಗಳು ಬೌದ್ಧ ಧರ್ಮವನ್ನು ಒಪ್ಪಿ ಹಲವಾರು ಪಂಗಡಗಳನ್ನು ಹೊಂದಿದವು. ಅವುಗಳಲ್ಲಿ ಪ್ರಮುಖವಾದದ್ದು budhism ಮತ್ತು taosim.
ಆ ದೇಶ ಕಮ್ಯುನಿಸ್ಟರ ಆಳ್ವಿಕೆಯಲ್ಲಿ ಇರುವುದರಿಂದ ಬಹುತೇಕ gen z ಯರು ಧರ್ಮ ಸ್ವೀಕೃತರಲ್ಲ. ಇಸ್ಲಾಂ ಮತ್ತು ಇಸಾಯಿ ಧರ್ಮದವರು ಇದ್ದರೂ ಅವರಿಗೆ ಧರ್ಮ ಸ್ವತಂತ್ರ ಇರುವುದಿಲ್ಲ. ಅವರವರ ಆಚರಣೆಗೆ ಅನುಮತಿ ಕೊಟ್ಟರೂ ಕಮ್ಯುನಿಸ್ಟರ ಕಪಿ ಮುಷ್ಟಿಯಲ್ಲೇ ನಡೆದುಕೊಳ್ಳಬೇಕು. ಅವರ ಎದರು ಬಾಲ ಬಿಚ್ಚುವಹಾಗಿಲ್ಲ. ಈ ದೇಶದಲ್ಲಿ free ಅಥವಾ liberal ಪತ್ರಿಕೋದ್ಯಮ ಇರುವುದಿಲ್ಲ.
ಮುಂದುವರಿಯುವುದು..
