ಆನೆ ಬೆಟ್ಟ ಒಂದು ಸಣ್ಣ ದ್ವೀಪ, ಒಂದು ಕಡೆ ಲೀ ನದಿ ಮತ್ತು ಅದರ tributary ಮತ್ತು ಇನ್ನೊಂದು ಕಡೆ ಬ್ಲಾಸಮ್ ನದಿ ಮತ್ತು ಇದರ tributary ಯಿಂದ ದ್ವೀಪ ಆಗಿದೆ. ಇದರ ಒಳಗೆ ಒಂದು ಚಿಕ್ಕ ಗುಹೆ ಇದೆ. ಈ ಗುಹೆಯನ್ನು water moon cave ಎಂದು ಕರೆಯುತ್ತಾರೆ. ಇಲ್ಲಿ ಗೋಡೆಗೆ ಅಂಟಿಕೊಂಡಂತ್ತೆ ಹಾಳಾದ ಬುದ್ಧನ ವಿಗ್ರಹಗಳನ್ನು restore ಮಾಡಿದ್ದಾರೆ. ಅಂದಿನ ರಾಜರು ಈ ಗುಹೆಯಲ್ಲಿ lady ಬುದ್ಧ ಪ್ರತಿಷ್ಠಾಪನೆ ಮಾಡಿದ್ದಾರೆ. ಮಕ್ಕಳು ಇಲ್ಲದವರು ಇಲ್ಲಿಗೆ ಬಂದು ಹರಕೆ ಮಾಡಿಕೊಳ್ಳುತ್ತಾರಂತೆ.

ಈ ಗುಹೆಯ ಕೊನೆಯಲ್ಲಿ ಆನೆ ಸೊಂಡಿಲಿನ ಆಕೃತಿ ಮತ್ತು ನದಿಗಳ ಸಂಗಮವನ್ನು ನೋಡಬಹುದು. ಇಡೀ ಈ ಪ್ರದೇಶದಲ್ಲಿ ಎಲ್ಲೆಲ್ಲಿ ನೋಡಿದರು ಆನೆಗಳ ಆಕೃತಿಗಳೆ ಕಾಣುತ್ತವೆ. ನಮಗೆ ಆನೆ ಶ್ರೇಷ್ಟ ಆದರೆ ಅವರಿಗೆ ಆನೆ ಆಕೃತಿಗಳು ಪ್ರವಾಸೋದ್ಯಮ.

Guilin ಒಂದು ಅಚ್ಚುಕಟ್ಟಾದ ನಗರ. ಇಲ್ಲಿ ಎಲ್ಲಾ ನಗರಗಳು ಹೀಗೆ ಇರುತ್ತವೆ. ಇಲ್ಲಿಯ ಮೂಲಸೌಕರ್ಯ ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ನಾವು ಈ ಪಟ್ಟಣಕ್ಕೆ ಬಂದಾಗ ನಿರಂತರವಾಗಿ ಸಣ್ಣ ಮಳೆ ಬರುತಿತ್ತು. ಇಲ್ಲಿಯ ಜನ ಸಂಖ್ಯೆ ಸುಮಾರು ನಲವತೈದು ಲಕ್ಷ. ಇಲ್ಲಿಗೆ ಪ್ರವಾಸಿಗರ ದಂಡೇ ಬಂದು ಹೋಗುತ್ತದೆ.

ಈ ನಗರವನ್ನು lime karst ಬೆಟ್ಟಗಳನ್ನು ಕಟ್ ಮಾಡಿ ನಿರ್ಮಿಸಿದ್ದಾರೆ. ಆದುದರಿಂದ ಸುತ್ತಲು ಬೆಟ್ಟದ ಸಾಲುಗಳು. ನೋಡಲು ಕಣ್ಣಿಗೆ ಹಸಿರಿನ ಹಬ್ಬ. ಈ ನಗರವನ್ನು ಫಲವತ್ತತೆಯ (romance) ನಗರ ಎಂದೆನ್ನುತ್ತಾರೆ. ಅಲ್ಲಿ ಹತ್ತಿರದಲ್ಲಿರುವ Yangshuo ಸ್ಥಳದಲ್ಲಿ romance show park ಇದೆ. ಈ show ಸಾರ ಅಲ್ಲಿಯ ವಿಭಿನ್ನ ಪಂಗಡಗಳ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಪ್ರೀತಿಯ ಹಾಡುಗಳು ಮತ್ತು ನೃತ್ಯಗಳು. ಸುಮಾರು ಒಂದೂ ವರೆ ಗಂಟೆಯ ಚೀನಿ ಭಾಷೆಯ show ಹೇಗೆ ಮುಗಿಯಿತು ಎಂಬುದೇ ತಿಳಿಯಾಗಲಿಲ್ಲ.

ಅವರ psychedelic ಬಣ್ಣದ ಬೆಳಕು, ವೇಷ ಭೂಷಣ, ತರ ತರಹದ ನೃತ್ಯ ನೋಡುಗರ ಕಣ್ಣಿಗೆ ಇಂದ್ರ ಲೋಕವನ್ನೆ ಸೃಷ್ಟಿ ಮಾಡಿದಂತೆ ಬಾಸವಾಗುತ್ತಿತ್ತು. ಈ ಸಮುಚ್ಚಯದಲ್ಲಿ ಹಲವಾರು romance park ಗಳು ಇದ್ದು ಸೆಲ್ಫಿ ಮತ್ತು ಫೋಟೊ ತೆಗೆದುಕೊಳ್ಳುವರಿಗೆ ಸ್ವರ್ಗ. ಈ ಸ್ಥಳ ಹಸಿರು lime karst ಬೆಟ್ಟಗಳ ಸುತ್ತ ಇದ್ದು ಮಧ್ಯ ಕಣಿವೆಯಲ್ಲಿ ಇದೆ ಮತ್ತು highly picturisc ಜಾಗ.

ಭೌಗೋಳಿಕವಾಗಿ ಚೀನಾ ದೇಶದಲ್ಲಿ ಒಂದು ಕಡೆ ಮರಳುಗಾಡು (ಉತ್ತರ ಪಶ್ಚಿಮ) ಮತ್ತು ಇನ್ನೊಂದು ಕಡೆ ಬೆಟ್ಟ ಗುಡ್ಡಗಳ ಸಾಲು (ಪೂರ್ವ ಧಕ್ಷಿಣ). ಸಾಮಾನ್ಯವಾಗಿ ಚೀನಾ ದೇಶವು ಪ್ರಕೃತಿಯ ವಿಕೋಪಕ್ಕೆ ವರ್ಷವಿಡೀ ತುತ್ತಾಗುತ್ತದೆ. ಅಲ್ಲಿಯ national disaster force ಪ್ರಪಂಚದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಧಕ್ಷಿಣ ಪ್ರದೇಶ lime karst ಬೆಟ್ಟ ಮತ್ತು ಕಂಬ ಶಿಖರಗಳಿಂದ ತುಂಬಿದೆ ಮತ್ತು ಸಹಜವಾಗಿಯೇ ಕೆಲವು ಕಡೆ ದೊಡ್ಡ ಗುಹೆಗಳು ನಿರ್ಮಾಣವಾಗಿವೆ. ಇದೇ ತರಹದ ಬೆಟ್ಟದ ಸಾಲುಗಳನ್ನು ಮತ್ತು ಗುಹೆಗಳನ್ನು ಚೀನಾದ ದಕ್ಷಿಣ ಮಹಾ ಸಾಗರಕ್ಕೆ ಹೊಂದಿಕೊಂಡಂತಾ ವಿಯೆಟ್ನಾಮ್, ಮಯನ್ಮಾರ್, ಲಾವೋಸ್, ಥೈಲಾಂಡ್ ದೇಶಗಳಲ್ಲೂ ಸಹ ಕಾಣಲು ಸಿಗುವುದು.

“Reed flute cave” ಗ್ವಿಲಿನ್ ನಗರದಲ್ಲಿ ಇರುವ ಅದ್ಭುತವಾದ ಗುಹೆ. ಈ ಹಿಂದೆ ಆ ಗುಹೆಯಲ್ಲಿ “ರೀಡ್” ಎಂಬ ಒಂದು ಜಾತಿಯ ಬಿದಿರು ಸಿಗುತ್ತಿತ್ತು. ಇದರಿಂದ ಬಹು ಅಮೂಲ್ಯವಾದ ಕೊಳಲು ತಯಾರಿಸುತ್ತಿದ್ದರಂತೆ. ಆ ಕಾರಣದಿಂದ ಈ ಗುಹೆಯನ್ನು “ರೀಡ್ ಕೊಳಲು ಗುಹೆ” ಎಂದು ಕರೆಯಲ್ಪಟ್ಟಿದೆ. ಪ್ರವಾಸೋದ್ಯಮಕ್ಕೆ ಚೀನಿಯರು ತುಂಬ ಉತ್ತೇಜನ ಕೊಡುತ್ತಾರೆ. ಈ ಗುಹೆ ಉದ್ದ, ಎತ್ತರ ಅಗಲದಲ್ಲಿ ದೊಡ್ಡ ಗುಹೆ.

ನಮ್ಮ ಅನಂತಪುರ ಜಿಲ್ಲೆಯಲ್ಲಿ ಕಂಡುಬರುವ bellum ಗುಹೆಗೆ ಹೋಲಿಸಿದರೆ ಚಿಕ್ಕದು. ಬೊರ್ರಾ ಗುಹೆಗೆ ಹೋಲಿಸಿದರೆ ದೊಡ್ಡದು. ಆದರೆ ನಮ್ಮ ಪ್ರವಾಸೋದ್ಯಮ ಚೀನಿಯರ ಮುಂದೆ ಏನೇನು ಇಲ್ಲ. ಇಡೀ ಗುಹೆಯನ್ನು ಸೂಕ್ತ ಬಣ್ಣದ ಬೆಳಕಿನಿಂದ ಕಂಗೊಳಿಸಲಾಗಿದೆ. ಲಕ್ಷಾಂತರ ವರ್ಷಗಳಿಂದ ಮಿನರಲ್ ನೀರು ಮೇಲಿನಿಂದ ಜಿನಿಗಿ stalactites ಮತ್ತು stalagmites, ಅಂದರೆ ಮೇಲ್ಛಾವಣಿಯಿಂದ ಕೆಳೆಗೆ ನೇತಾಡುವ ಚೂಪನೆಯ ಕಂಬಗಳು ಮತ್ತು ನೀರು ಜಿನಿಗಿರುವ ಕಡೆ ನೆಲದಿಂದ ಎದ್ದ ಚೂಪನೆಯ ಅರ್ಧ ಕಂಬಗಳು.

ಕೆಲವು ಕಡೆ ಸಹಜವಾದ ಕಂಬ ಕಾಣುವುದು. ಈ ಗುಹೆ ಜೀವಂತ ಗುಹೆ. ಅಂದರೆ ನೀರು ಜಿನಿಗುತ್ತಲೇ ಇರುತ್ತದೆ. ನೀರಿನ ಹರಿವೆಕೆಯಿಂದ ಅನೇಕ ಆಕಾರಗಳು ಮೂಡಿವೆ. ಉದಾಹರಣೆಗೆ ಮೊಸಳೆ, ಆಮೆ, ಬುದ್ಧ, ತಲೆ ಬುರುಡೆ, ನೀರಿನ falls ಹೀಗೆ. ಇದೇ ತರಹ ನಮ್ಮಲ್ಲಿರುವ ಗುಹೆಗಳಲ್ಲಿ ಸಹ ಇವೆ. ಲಿಂಗ, ಗಣೇಶ, ಮನುಷ್ಯ ಹೀಗೆ.

ನಮಗೆ ಸ್ವಾತಂತ್ರ್ಯ ಸಿಕ್ಕಿ ಎಂಬತ್ತು ವರ್ಷಗಳಾದವು. ನಮ್ಮ ದೇಶದಲ್ಲಿ ಇಲ್ಲಿಯವರಿಗೂ ಡೀಸೆಲ್ ಟ್ರೈನ್ಸ ಇದ್ದವು. ಈಗಷ್ಟೇ ವಂದೇ ಭಾರತ್ ಸ್ಪೀಡ್ ರೈಲುಗಳನ್ನು ನೋಡುತ್ತಿದ್ದೇವೆ. ಅಲ್ಲಿಯ ಮಾಮೂಲಿ electric ರೈಲುಗಳು average 250 ಕಿಲೋಮೀಟರ್ಸ ವೇಗದಲ್ಲಿ ಚಲಿಸುತ್ತವೆ. ನಾವು ಗ್ವಿಲಿನ್ ಇಂದ ಝಾನ್ಜಿಜೇ ನಗರಕ್ಕೆ ಟ್ರೈನ್ ಲ್ಲಿ ಪ್ರಯಾಣ ಬೆಳೆಸಿದೆವು. ಅಲ್ಲಿಯ ರೈಲುನಿಲ್ದಾಣ ನಮ್ಮ airport ತರ ಇರುತ್ತವೆ. ವಿಮಾನ ನಿಲ್ದಾಣ ತರಹವೆ security check ಇರುತ್ತದೆ. ನಮ್ಮ ಪ್ರಯಾಣದಲ್ಲಿ ಬಳಿಸುವ foldable knife ನ್ನು ತೆಗೆಯಲು ಹೇಳಿ ಅವರ ಹತ್ತಿರ ಇರುವ scale ನಲ್ಲಿ check ಮಾಡಿದರು. ಮೂರು ಇಂಚಿನ ಮೇಲೆ ಇದ್ದಿದ್ದರಿಂದ ಅದನ್ನು ಬಿಸಾಡಿದರು. ಅಲ್ಲಿಯ platforms ಗಳಲ್ಲಿ ಜನಜಂಗುಳಿ ಇರುವುದಿಲ್ಲ. ಟ್ರೈನ್ ಐದು ನಿಮಿಷ ಬರುವ ಮುನ್ನ ನಮ್ಮನ್ನು platform ಗೆ ಬಿಡುತ್ತಾರೆ.

ನಾವು ಲಗ್ಗೇಜ್ ತೆಗೆದುಕೊಂಡು ಸ್ವಲ್ಪ ದೂರವೇ ಹೋಗಬೇಕಿತ್ತು. ಲಿಫ್ಟ್ ಮತ್ತು ಎಸ್ಕಲೇಟರ್ ಇರುತ್ತವೆ ಆದರೆ ಲಗೇಜ್ ಸಮೇತ ಹೋಗಲು ಜಾಗೃತೆ ವಹಿಸಬೇಕು. ನಮ್ಮ travel mate ಎಸ್ಕಲೇಟರ್ ಇಂದ ಬಿದ್ದರು. ದೈವವಶಾತ್ ಅವರಿಗೆ ಏನು ಆಗಿರಲಿಲ್ಲ. Platform ಮೇಲೆ ಬೋಗಿ ನಂಬರ್ ನೋಡಿಕೊಂಡು ಹತ್ತಬೇಕು.

ಇಲ್ಲಿಯ ಹಾಗೆ ಒಂದೇ ನಿಮಿಷ ಸಮಯ ಇರುತ್ತದೆ. ಅಂದು rush ಇದ್ದಿದ್ದರಿಂದ ನಮಗೆ ಕಷ್ಟವಾಯಿತು. ಅಲ್ಲಿಯ ರೈಲುಗಳು ನಮ್ಮ ವಂದೇ ಭಾರತ್ ರೈಲುಗಳಿಗಿಂತ ಉತ್ತಮವಾಗಿ ಇರುತ್ತವೆ.

ನಾವು ಸುಮಾರು ಏಳು ಗಂಟೆ ಪ್ರಯಾಣಿಸಿದವು ಆದರೆ ನಮಗೆ ಅಷ್ಟೇನು ದಣಿವಾಗಿಲಿಲ್ಲ. ನಾವು ಹತ್ತಿದ್ದ ರೈಲು local ರೈಲು. ಎಲ್ಲಾ ಸ್ಟೇಶನ್ ಲ್ಲೂ ನಿಲ್ಲಿಸುತ್ತಾನೆ. Speed ಮಾತ್ರ 250 ಕಿಲೋಮೀಟರ್ಸ. ಮೇಲ್ವಿಚಾರಕರು, ಸೆಕ್ಯುರಿಟಿಯವರು ಮತ್ತು ಕ್ಲೀನ್ ಮಾಡುವರು ಅರ್ಧ ಗಂಟೆಗೆ ಒಮ್ಮೆ ಬರುತ್ತಾರೆ. ಆದುದರಿಂದ ರೈಲು ಎಕ್ದಮ್ clean. ಬಾತ್ರೂಮ್ ಅಂತು ತುಂಬಾ ಶ್ವಚ್ಚವಾಗಿತ್ತು (probably due to tissue paper usage).
ಮುಂದುವರಿಯುವುದು…

