ನಾವು ಅಲ್ಲಿಯ ಮಾರ್ಕೆಟ್ ಒಂದರಲ್ಲಿ escalator ಹತ್ತುವಾಗ ಹಿಂಬದಿಯಿಂದ ಸ್ಥಳಿಯ ಮಧ್ಯ ವಯಸ್ಸಿನ ಇಬ್ಬರು ಪ್ರಜೆಗಳು ನನ್ನ ಶ್ರೀಮತಿಯ ಕಡೆ ಬೆಟ್ಟು ತೋರಿಸಿ “You are Hindu…right” ಅಂದರು. ನನ್ನ ಶ್ರೀಮತಿಗೆ ಗಾಬರಿ ಮತ್ತು ಏನು ತೋಚದಂತೆ ‘ಹೌದು’ ಎಂದು ಗೋಣಾಡಿಸಿದಳು. ಅವುರುಗಳು ನಮ್ಮ ಪಕ್ಕದಲ್ಲೇ “Yes Hindu Hindu” ಎನ್ನುತಾ ಸಾಗಿದರು. ನಾವು ಯಾವುದೇ ಮಾರ್ಕಟ್ stall ಗಳಿಗೆ ಹೋದರು “Are you a Hindu” ಎಂದು ಕೇಳುತ್ತಿದ್ದರು. ಯಾರು ನಮ್ಮನ್ನು “are you Indian” ಎಂದು ಕೇಳುತ್ತುರಿಲಿಲ್ಲ.
ನನ್ನ ಮನಸ್ಸಿಗೆ ಅನ್ನಿಸಿದ್ದು ಅವರ curiosity ಮತ್ತು translator app (Hindi to Chinese) ಸೆಟ್ ಮಾಡಲು ಅಂತ ಕಾಣುತ್ತದೆ. ಈ ಸಂದರ್ಭದಲ್ಲಿ ನನಗೆ Pahalgam ನೆನಪಾಯಿತು. ಎನೇ ಇರಲಿ ಅಂತ ನಮ್ಮ ಗೈಡ್ Mr Steve ನ್ನು ವಿಚಾರಿಸಿದಾಗ ಆತನು ಸಹ curiosity ಗೆ ಕೇಳಿರಬಹುದು ಎಂದರು. ಅಲ್ಲಿ ನಮ್ಮನ್ನೆಲ್ಲಾ “ಹಿಂದು” ಎಂದು ಕರೆಯುತ್ತಾರೆ ಆದರೆ ನಮ್ಮ ದೇಶದ ಪ್ರಗತಿಪರರು “I am a proud Hindu” ಅಂತಾ ಹೇಳಿದರೆ ಕೋಮುವಾದಿ ಎಂಬ ಬಿರುದನ್ನು ಹಣೆ ಪಟ್ಟಿಗೆ ಅಂಟಿಸಿ ಬಿಡುತ್ತಾರೆ. ಎಂತಾ ವಿಪರ್ಯಾಸ ಅಲ್ಲವೇ?

Confucius ಧರ್ಮ ಗುರುವಿನ ಮೂಲ ಹೆಸರು Kong qiu ಅಥವಾ master kong. ಇಲ್ಲಿಗೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ತನ್ನ ತತ್ವಗಳನ್ನು ಸಾರಿದ್ದ ಗುರು. ಮುಖ್ಯವಾಗಿ ಈ ಗುರು ಸಾರಿದ ಅಂಶ ಏನೆಂದರೆ “ನೀನು ಸಮಾಜದಲ್ಲಿ ಶಾಂತಿಯುಕ್ತನಾಗಿರಬೇಕು, ಸಮಾಧಾನದಿಂದ ನೆಡೆದುಕೊಳ್ಳಬೇಕು, ಗುರು ಹಿರಿಯರಿಗೆ ಮರ್ಯಾದೆಯನ್ನು ಕೊಡಬೇಕು ಮತ್ತು ಪರರಿಗೆ ಉಪಯುಕ್ತವಂತನಾಗಬೇಕು”. ಈ ಸಾರವನ್ನು ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಇಂದಿಗೂ ಅಲ್ಲಿ ಅಳವಡಿಸಲಾಗಿದೆ. ನಮ್ಮ ಹಿಂದು ಧರ್ಮ ತತ್ವ ಇದೇ ಆಗಿದೆ ಅಲ್ಲವೇ? ಆದರೆ ನಮ್ಮಮಕ್ಕಳ ಪಠ್ಯ ಪುಸ್ತಕಗಳಲ್ಲಿ ಇಂತಹ ನೀತಿ ಸಾರಗಳು ಕಾಣುವುದಿಲ್ಲವಲ್ಲ ಎಂಬುದೇ ನನ್ನ ಜಿಜ್ಞಾಸೆ.

ನಮ್ಮ ಪ್ರವಾಸ ಪ್ರವಾಸಕ್ಕೆಂದೇ ಇರಬಾರದು. ಅಲ್ಲಿ ಕೇಳಿದ್ದು ಮತ್ತು ನೋಡಿದ್ದು ನಮಗೆ ಪಾಠವಾಗಬೇಕು. ಇಂತಹ ಪಾಠಗಳಲ್ಲಿ ಅಲ್ಲಿಯ infrastructure. ನಿಜ ಹೇಳಬೇಕೆಂದರೆ ಚೀನಾದವರು ನಮಗಿಂತಲೂ ಸುಮಾರು ನೂರು ವರ್ಷಗಳ ಮುಂದೆ ಇದ್ದಾರೆ ಆದರೆ ಅಲ್ಲಿಯ human values ಸೊನ್ನೆ. ಅವರ ಸಂಯಮ ಮತ್ತು ನಡುವಳಿಕೆ ಮೆಚ್ಚುವಂತಾದ್ದೆ. Traffic rules ಮೀರುವಂತಿಲ್ಲಾ. ಆದರೆ ಎಲ್ಲೂ traffic police ಕಾಣುವುದಿಲ್ಲ. ರಸ್ತೆಯ ಉದ್ದ ಅಗಲಕ್ಕೂ ಲಕ್ಷಾಂತರ ಕಣ್ಗಾವು (CCTV) ಗಳು ಇವೆ. ಶಾಂಘೈ ನಗರ ನಮ್ಮ ಮುಂಬೈನಂತೆ. ಪ್ರಪಂಚದಲ್ಲಿ ಒಂದಾದ ಅತ್ಯುನ್ನತ ವಾಣಿಜ್ಯ ನಗರಿ. ಸಿಂಗಾಪುರದ ಹಾಗೆ. ಎಲ್ಲೆಲ್ಲಿ ಕಣ್ಣು ಹಾಯಿಸಿದರು ಗಗನ ಚುಂಬಿ ಕಟ್ಟಡಗಳು ಮತ್ತು international banking ಹೌಸ್ಗಳು. ಮಾಲ್ಗಳಿಗೆ ಲೆಕ್ಕ ಇಲ್ಲ.

ಆದರೆ ನನಗೆ ಇಲ್ಲಿ ಮಾಲ್, ರಸ್ತೆ, ಸ್ಥಳ ಮತ್ತು ಜನರ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಲು ಕಷ್ಟ. ಈ ನಗರವನ್ನು ನಾನು city of flyovers ಎಂದು ಕರೆಯುತ್ತೇನೆ. ಎಲ್ಲಿಂದ ಎಲ್ಲಿಗೆ ಹೋದರೂ flyovers. ನಮ್ಮ ಮೇಲು ಸೇತುವೆಗಳಂತೆ ಉಬ್ಬು ಮತ್ತು ತಗ್ಗುಗಳು ಅಲ್ಲಿಯ ಮೇಲ್ ಸೇತುವೆ ಮೇಲೆ ಇರುವುದಿಲ್ಲ. ಆದುದರಿಂದ smooth ಮತ್ತು silky trafic. ನಾನು ಈ ಮೇಲು ಸೇತುವೆಗಳ ಮೇಲೆ ಕಣ್ಣು ಹಾಯಿಸಿದಾಗ ಎಲ್ಲೂ ಬಿರುಕು ಬಿಟ್ಟಿರುವುದನ್ನು ನೋಡಲಿಲ್ಲ. ಅಗಲವಾದ ರಸ್ತೆಗಳು ಮತ್ತು ಆ ರಸ್ತೆಗಳಿಗೆ ತಕ್ಕಂತೆ ಪಾದಚಾರಿ ವ್ಯವಸ್ಥೆ. ಇಲ್ಲಿ public cycle ಮತ್ತು e – scooter ಮೇಲೆ QR code ನ್ನು ಸ್ಕಾನ್ ಮಾಡಿ ಗಂಟೆಯ ಆಧಾರಿತ ಮೇಲೆ ಹಣವನ್ನು e – pay ಮೂಲಕ ಸಂದಾಯ ಮಾಡಿದರೆ ಸಾಕು ಅವುಗಳನ್ನು ಉಪಯೋಗಿಸಬಹುದು. ನಮ್ಮಲ್ಲೂ ಇವೆ ಆದರೆ ಅವುಗಳ ಸಮರ್ಪಕತೆಯ ಕೊರತೆ ಇವೆ.

ಈ ದೇಶವನ್ನು ಪೋರ್ಚುಗೀಸ್, ಜಪಾನ್ ಮತ್ತು ಬ್ರಿಟಿಷರು ಅತಿಕ್ರಮಣ ಮಾಡಿದರೂ ವಸಾಹತುವನ್ನು ಸ್ಥಾಪಿಸಲು ಆಗಲಿಲ್ಲ. ಇವರೆಲ್ಲರು ಅಲ್ಲಿಯ ರಾಜವಂಶಸ್ತರ ಜೊತೆ ಒಪ್ಪಂದದಲ್ಲಿ ಇದ್ದರು ಹಾಗು ಯಾವುದೇ ಸಮಯದಲ್ಲಿ ಅವರುಗಳು ಚೀನಾವನ್ನು ಆಳಲಿಲ್ಲ. ಈ ಕಾರಣದಿಂದ ಅಲ್ಲಿಯ ವಾಹನಗಳ ಚಾಲನೆ right hand drive (Not a commonwealth country). ಇದಾಗಲು ಒಂದು ಕಾರಣವಿದೆ, 19 ನೆ ಮಧ್ಯ ಶತಮಾನದಲ್ಲಿ ಎರಡು ಬಾರಿ ಕ್ವಿಂಗ್ ರಾಜವಂಶಸ್ತರು ಗ್ರೇಟ್ ಬ್ರಿಟನ್ ರನ್ನು ಸೋಲಿಸಿದ್ದರು. ಕಾರಣ ಬ್ರಿಟನ್ನರು ಅಫೀಮನ್ನು ಚೀನಾ ಒಳಗೆ ಭಾರತ ಮತ್ತು ಹಾಂಗ್ಕಾಂಗ್ ಮೂಲಕ smuggle ಮಾಡುತ್ತಿದ್ದಾರೆ ಎನ್ನುವ ಉದ್ದೇಶಕ್ಕೆ. ಈ ಯುದ್ದವನ್ನು opium war ಎಂದೇ ಕರೆಯುತ್ತಾರೆ. ಈ ಕಾರಣದಿಂದ ಬ್ರಿಟಿಷರು ತಮ್ಮ ಆಧಿಪತ್ಯ ಅಥವಾ ವಸಾಹತುವನ್ನು ಸ್ಥಾಪಿಸಲು ಅಲ್ಲಿ ಆಗಲಿಲ್ಲ.

ಈ ದೇಶದ national highway ಯನ್ನು elevated highway transit (ಜಪಾನ್ ದೇಶದಲ್ಲೂ ಇದೇ ಮಾದರಿ ಇರುತ್ತದೆ) ಎಂದು ಕರೆಯುತ್ತಾರೆ ಮತ್ತು ಈ highway ವಿಭಜಕಗಳನ್ನು ಗಮನಿಸಿದರೆ ಖುಷಿ ಆಗುತ್ತದೆ. ಈ ವಿಭಜಕಗಳು ಹೈ ಕ್ವಾಲಿಟಿ ಕಬ್ಬಿಣದಿಂದ ಮಾಡಿದ್ದು ಆಗಾಗ anti corrosive ಅಥವಾ ತುಕ್ಕು ನಿರೋಧಕ ಪೈಂಟ್ ಮಾಡಿರುತ್ತಾರೆ. ನಮ್ಮ ದೇಶದಲ್ಲೇನಾದರು ಇಂತಹ ವಿಭಜಕಗಳನ್ನು install ಮಾಡಿದರೆ ಕಿಡಗೇಡಿಗಳು ಕಿತ್ತು ಹಾಕಿರುತ್ತಾರೆ ಅಥವಾ maintainance ಇಲ್ಲದೆ ತುಕ್ಕು ಹಿಡಿದಿರುತ್ತವೆ.

ನಮ್ಮ ಪ್ರವಾಸದಲ್ಲಿ ಬಹುತೇಕ ಹೋಟೆಲ್ಸ್ ಐದನೆ ದರ್ಜೆಯವು. ನಮ್ಮ ಎರೆಡು ಹೋಟೆಲ್ಗಳಲ್ಲಿ room service ರೋಬೋಟ್ಗಳು ಮಾಡುತಿದ್ದವು. ಇಲ್ಲಿಯ ರೂಮ್ಸ್ ಹಾಗು ಲಿಫ್ಟ್ ಮತ್ತು ರೋಬೋಟ್ same sensor enabled. ಆದುದರಿಂದ ಇವೇ lift ನಲ್ಲಿ ನಮ್ಮ ರೂಮಿಗೆ ಬಂದು ಬೆಲ್ ಮಾಡಿ ನಾವು ಕೇಳಿದ್ದನ್ನು ತನ್ನ ಬಾಕ್ಸನ್ನು ತೆಗೆಯಲು ಹೇಳಿ ಕೊಟ್ಟು ಹೋಗುತ್ತಿದ್ದವೆ. ಇನ್ನು ಮುಂದೆ ಮನುಷ್ಯರ ಅಗತ್ಯ ಅಧೋಗತಿ ಆಗಬಹುದಲ್ಲವೇ?

ಮೇ ತಿಂಗಳು ನಮಗೆ summer ಆದರೆ ಅಲ್ಲಿ ವಸಂತ ಋತು. ಎರಡು ದಿವಸದ ಮುಂಚೆ ಅಮೇರಿಕ ಅಧ್ಯಕ್ಷ Donald Trump ಚೀನಾ ದೇಶಕ್ಕೆ ಬೇಟಿ ನೀಡಿದ್ದರು. ಈ ಸಮಯದ ಹವಾಮಾನ ಅಹ್ಲಾದಕರವವಾಗಿ ಇರುವುದರಿಂದ ಅಲ್ಲಿಯ ಎಲ್ಲಾ ವಿಮಾನ ನಿಲ್ದಾಣಗಳು ಪ್ರವಾಸಿಗರಿಂದ ತುಂಬಿರುತ್ತಿದ್ದವು. ಬಹುತೇಕ ಪ್ರವಾಸಿಗರು ಚೀನಾ, ಈರೋಪ್, ರಷ್ಯ ಮತ್ತು ಭಾರತದವರು.
ಮುಂದುವರಿಯುವುದು…

– ನಾಗೇಶ್ ಎಂ.ಎನ್.
