ಕೊರಟಗೆರೆ :- ತುಮಕೂರು ಜಿಲ್ಲೆಯ ಮಾವುಕೆರೆ ಗ್ರಾಮದ ಮಾಜಿ ಚೇರ್ಮನ್ ಎಂ.ಸಿ. ನಂಜಯ್ಯ ಹಾಗೂ ಜಯಲಕ್ಷ್ಮಮ್ಮ ಅವರ ಪುತ್ರಿ, ನಿವೃತ್ತ ಶಿಕ್ಷಕರಾದ ಹೆಚ್. ಹನುಮಯ್ಯ ಮತ್ತು ಶ್ರೀಮತಿ ಸೌಭಾಗ್ಯ ಅವರ ಸೊಸೆ, ಪ್ರಸನ್ನಕುಮಾರ್ ಹೆಚ್. ಅವರ ಧರ್ಮಪತ್ನಿ ರೂಪ ಎಂ.ಎನ್. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಪದವಿಯನ್ನು ಪ್ರದಾನ ಮಾಡಿದೆ.
ಪ್ರಸ್ತುತ ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರೂಪ ಎಂ.ಎನ್. ಅವರು “An Economic Analysis of Agro Based Industries and Their Impact on Rural Economy in Karnataka” (ಕರ್ನಾಟಕದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಆರ್ಥಿಕ ವಿಶ್ಲೇಷಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ಅವುಗಳ ಪ್ರಭಾವ) ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.
ಈ ಸಂಶೋಧನಾ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಅಂಗೀಕರಿಸಿದ್ದು, ಡಾ. ನೀಲಾ ಚೋಟಾಯಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅವರ ಈ ಶೈಕ್ಷಣಿಕ ಸಾಧನೆಗೆ ವಿಶ್ವವಿದ್ಯಾನಿಲಯದ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಕುಟುಂಬದವರು, ಮಕ್ಕಳು. ಕವನ ಹಾಗೂ ಚಿ. ಕುಶಾಲ್, ಸಹೋದ್ಯೋಗಿಗಳು ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ರೂಪ ಎಂ.ಎನ್. ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನದ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
