ತುಮಕೂರು:ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನಗೊಳಿಸುವ ಒಂದು ಶ್ರೇಷ್ಠ ಜೀವನ ಪದ್ಧತಿಯಾಗಿದೆ ಇದು ಕೇವಲ ವ್ಯಾಯಾಮಕ್ಕೆ ಸೀಮಿತವಾಗದೆ ವ್ಯಕ್ತಿಯ ಪ್ರಜ್ಞೆಯನ್ನು ಸಾರ್ವತ್ರಿಕ ಪ್ರಜ್ಞೆಯೊಂದಿಗೆ ಬೆಸೆಯುವ ಸಮಗ್ರ ಪ್ರಕ್ರಿಯೆಯಾಗಿದೆ.ಜಾಗತಿಕ ಪ್ರಪಂಚಕ್ಕೆ ಯೋಗವು ಭಾರತೀಯ ಸಂಸ್ಕೃತಿಯ ಅತ್ಯಮೂಲ್ಯವಾದ ಕೊಡುಗೆಯಾಗಿದೆ ಎಂದು ಡಾ.ಜಿ.ಆರ್.ರೇವಣ್ಣಸಿದ್ದಪ್ಪನವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು,. ದೈಹಿಕ ಶಿಕ್ಷಣ ವಿಭಾಗ. ಎನ್.ಎಸ್.ಎಸ್, ಮತ್ತು ಎನ್ ಸಿಸಿ ,ಸ್ಕೌಟ್ ಅಂಡ್ ಗೈಡ್ಸ್, ಹಾಗೂ ರೆಡ್ ಕ್ರಾಸ್ ಘಟಕಗಳ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಆರ್.ರೇವಣ್ಣಸಿದ್ದಪ್ಪನವರು ಕಾರ್ಯಕ್ರಮನ ಉದ್ದೇಶಿಸಿ ಮಾತನಾಡುತ್ತಾ ಯೋಗ ಎಂಬ ಪದವು ಸಂಸ್ಕೃತದ “ಯುಜ್” ಎಂಬ ಪದದ ಉತ್ಪತ್ತಿಯಾಗಿದೆ ಇದರ ಅರ್ಥ ಸೇರಿಸುವುದು, ಜೋಡಿಸುವುದು ಎಂದಾಗುತ್ತದೆ ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಪರಮಾತ್ಮನೊಂದಿಗೆ ಪ್ರಕೃತಿ ಯೊಂದಿಗೆ ಬೆಸೆಯುವುದೇ ಯೋಗದ ಮುಖ್ಯವಾದ ಧ್ಯೇಯವಾಗಿದೆ. ಪತಂಜಲಿ ಮಹರ್ಷಿಗಳು ಯೋಗ ಸೂತ್ರಗಳನ್ನು ಬರೆದು ಇದನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟಿದ್ದಾರೆ.ಆಧುನಿಕ ಜೀವನಶೈಲಿಯು ಬದುಕಿನ ಒತ್ತಡವನ್ನು ನಿವಾರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಮತಿ ನಂದಿನಿ ಮತ್ತು ಶ್ರೀ ಮಲ್ಲಿಕಾರ್ಜುನ್ ರವರು ಯೋಗವು ಬದುಕಿಗೆ ಎಷ್ಟು ಅವಶ್ಯಕ ಎಂಬುದನ್ನ ಮನವರಿಕೆ ಮಾಡಿಕೊಟ್ಟರು ನಂತರ ಹಲವಾರು ಯೋಗಾಸನಗಳನ್ನು ಅಭ್ಯಾಸ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಉದಯ್ ಕುಮಾರ್.ಎಂ, ಎನ್.ಸಿ.ಸಿ ಅಧಿಕಾರಿಗಳಾದಂತಹ ಕ್ಯಾ.ರಾಮಲಿಂಗರೆಡ್ಡಿ,ಲೆಫ್ಟಿನೆಂಟ್ ಶೃತಿ ಪಿ.ರವರು,. ಎನ್.ಎಸ್.ಎಸ್ ಅಧಿಕಾರಿಗಳಾದಂತಹ ಸೋಮಶೇಖರ್.ಎಲ್.ಆರ್, ಡಾ||ರಂಗನಾಥ್.ಬಿ., ಕು. ಪಲ್ಲವಿ.ಎ .ಆರ್,ಶ್ರೀಮತಿ ಸುಧಾ.ಆರ್. ಸ್ಕೌಟ್ ಅಂಡ್ ಗೈಡ್ಸ್ ನ ಅಧಿಕಾರಿಗಳಾದಂತಹ ಮೋಹನ್ ಕುಮಾರಿ, ಕೆಂಪರಾಜು ರೆಡ್ ಕ್ರಾಸ್ ಅಧಿಕಾರಿ ಕುಮಾರಸ್ವಾಮಿ.ಸಿ.ಎಸ್, ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ವರ್ಗದವರು,ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಸ್ವಯಂ ಸೇವಕರು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
