ಹಾಸನ, ಜೂನ್ 29: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಇಂದು (ಜೂನ್ 29) ಹಮ್ಮಿಕೊಳ್ಳಲಾಗಿದೆ.
ಸಂಜೆ 5 ಗಂಟೆಗೆ ಸಾಹಿತಿ ಹಾಗೂ ಉದ್ದಿಮೆದಾರ ವಿಶ್ವಾಸ್ ಡಿ. ಗೌಡ ಅವರ ‘ದುಶಾನ್ ನಿಲಯ’ (ಆರ್ಯಾ ಮ್ಯಾನ್ಸನ್ ಹೋಟೆಲ್ ಎದುರು, ವಾರ್ಡ್ ನಂ. 35, ಹೊಸಕೊಪ್ಪಲು, ಹಾಸನ) ನಿವಾಸದಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ.
ಇದಾದ ಬಳಿಕ ಸಂಜೆ 6 ಗಂಟೆಗೆ ಡಾ. ನಾಯಕರಹಳ್ಳಿ ಮಂಜೇಗೌಡ ಅವರ ‘ಚೈತ್ರ’ ನಿವಾಸದಲ್ಲಿ (ನಂ. 203, 3ನೇ ಮೇನ್, ಕವಿರಾಜ ಮಾರ್ಗ ರಸ್ತೆ, ಹಲ್ಮಿಡಿ ಶಾಸನ ವೃತ್ತ, ಶಾಂತಿನಗರ, ಹಾಸನ) ಎರಡನೇ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ ಬರಗೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ ಗೊರೂರು ಅನಂತರಾಜ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಸದಸ್ಯ ಚಿನ್ನೇನಹಳ್ಳಿಸ್ವಾಮಿ ಅವರು ವಿಶ್ವಾಸ್ ಡಿ. ಗೌಡ ಅವರ ಕೃತಿಯನ್ನು ಪರಿಚಯಿಸಲಿದ್ದು, ಚಂದ್ರಕಾಂತ ಪಡೇಸೂರು ಅವರು ಡಾ. ನಾಯಕರಹಳ್ಳಿ ಮಂಜೇಗೌಡ ಅವರ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
