ಬೆಂಗಳೂರು: ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾದ ನಂಬಿಯಾರ್ ಬಿಲ್ಡರ್ಸ್, ಸರ್ಜಾಪುರ ರಸ್ತೆಯಲ್ಲಿ ತನ್ನ ಐಷಾರಾಮಿ ಸಂಯೋಜಿತ ಟೌನ್ ಶಿಪ್ ಯೋಜನೆಯಾದ ಡಿಸ್ಟ್ರಿಕ್ಟ್ 25ರ ಮೂರನೇ ಹಂತವನ್ನು ಅನಾವರಣಗೊಳಿಸಿದೆ.
ಈ ಯೋಜನೆಯ ಮೊದಲ ಎರಡು ಹಂತಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ಮೂರನೇ ಹಂತವನ್ನು ಪ್ರಾರಂಭಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ ಈಗಾಗಲೇ 1,600 ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಖರೀದಿಸಿದ್ದು, ಅಂದಾಜು ₹3,200 ಕೋಟಿ ಮೌಲ್ಯದ ವಹಿವಾಟು ದಾಖಲಾಗಿದೆ. ವಿಶೇಷವೆಂದರೆ, ಮೊದಲ ಎರಡು ಹಂತಗಳ ಖರೀದಿದಾರರಲ್ಲಿ ಶೇ. 90 ರಷ್ಟು ಜನ ಸ್ವಂತ ಬಳಕೆಗೆ ಮನೆ ಕೊಂಡುಕೊಂಡಿದ್ದರೆ, ಉಳಿದವರು ಹೂಡಿಕೆಯ ಉದ್ದೇಶದಿಂದ ಖರೀದಿಸಿದ್ದಾರೆ. ಸದ್ಯ ಲಾಂಚ್ ಆಗಿರುವ ಡಿಸ್ಟ್ರಿಕ್ಟ್ 25 ಫೇಸ್ 3 ಯೋಜನೆಯು 1,250 ರಿಂದ 2,980 ಚದರ ಅಡಿ ವಿಸ್ತೀರ್ಣದ ಅತ್ಯುತ್ತಮ ವಿನ್ಯಾಸದ 2ಬಿ ಎಚ್ ಕೆ, 3ಬಿ ಎಚ್ ಕೆ, 4ಬಿ ಎಚ್ ಕೆ ಮತ್ತು 4.5ಬಿ ಎಚ್ ಕೆ ಐಷಾರಾಮಿ ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿದ್ದು, ಇವುಗಳ ಬೆಲೆ ₹1.62 ಕೋಟಿಯಿಂದ ಪ್ರಾರಂಭವಾಗುತ್ತದೆ.
ಒಟ್ಟು 11 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ನಂಬಿಯಾರ್ ಬಿಲ್ಡರ್ಸ್ ನ ಡಿಸ್ಟ್ರಿಕ್ಟ್ 25 ಫೇಸ್ 3, ಪ್ರಸ್ತುತ ಅನುಮೋದನೆ ಪಡೆದಿರುವ 63 ಎಕರೆ ಟೌನ್ ಶಿಪ್ ನ ಒಂದು ಭಾಗವಾಗಿದೆ ಮತ್ತು ಇದರ ಮುಂದಿನ ವಿಸ್ತರಣೆಗೆ ಅನುಮೋದನೆ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಯು ಚಂದಾಪುರ- ದೊಮ್ಮಸಂದ್ರ ರಸ್ತೆಯಲ್ಲಿದ್ದು, ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಗಳಿಗೆ ಸುಲಭ ಸಂಪರ್ಕ ಸಾಧ್ಯವಿದೆ. ಪ್ರಸ್ತಾವಿತ ಮೆಟ್ರೋ ನಿಲ್ದಾಣಕ್ಕೆ ಈ ಯೋಜನೆ ಅತ್ಯಂತ ಹತ್ತಿರದಲ್ಲಿದೆ. ಈ ಯೋಜನೆಯು ಒಟ್ಟು 8 ಟವರ್ಗಳಲ್ಲಿ 1,202 ಮನೆಗಳನ್ನು ಒಳಗೊಂಡಿದ್ದು, ಶೇ. 85 ರಷ್ಟು ಜಾಗವನ್ನು ಮುಕ್ತ ಪ್ರದೇಶಕ್ಕಾಗಿ ಕಾಯ್ದಿರಿಸಲಾಗಿದೆ.
ಇಲ್ಲಿನ ಟವರ್ ಗಳನ್ನು ಒಂದಕ್ಕೊಂದು 40 ರಿಂದ 135 ಮೀಟರ್ಗಳಷ್ಟು ಅಂತರದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ನಿವಾಸಿಗಳಿಗೆ ಹೆಚ್ಚಿನ ಗೌಪ್ಯತೆ, ನೈಸರ್ಗಿಕ ಬೆಳಕು ಮತ್ತು ಮುಕ್ತ ವಾತಾವರಣದ ಅನುಭವ ನೀಡುತ್ತದೆ. ಈ ಟವರ್ ಗಳನ್ನು ಕ್ಲಬ್ ಸೋಹೋ ಮತ್ತು ಹೊಸದಾಗಿ ಪರಿಚಯಿಸಲಾದ 20 ಕ್ಕೂ ಹೆಚ್ಚು ಎಕರೆಯ ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಕಡೆಗೆ ಮುಖಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಇವು ಇಡೀ ಟೌನ್ಶಿಪ್ ವ್ಯವಸ್ಥೆಯ ಪ್ರಮುಖ ಕ್ರೀಡಾ ಸೌಲಭ್ಯಗಳು ಮತ್ತು ಕ್ಲಬ್ ಹೌಸ್ ಗೆ ತೀರಾ ಹತ್ತಿರದಲ್ಲಿವೆ. ಮೊದಲ ಎರಡು ಹಂತಗಳು ಡಿಸ್ಟ್ರಿಕ್ಟ್ 25 ರ ಜೀವನಶೈಲಿ ಮತ್ತು ಕ್ಲಬ್ ಹೌಸ್ ಆಧಾರಿತ ಮೂಲಸೌಕರ್ಯಗಳಿಗೆ ಭದ್ರ ಬುನಾದಿ ಹಾಕಿದ್ದರೆ, ಫೇಸ್ 3 ಯೋಜನೆಯು ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಮೂಲಕ ನಿವಾಸಿಗಳ ಸಕ್ರಿಯ ಜೀವನಶೈಲಿಗೆ ಹೆಚ್ಚಿನ ಒತ್ತು ನೀಡಲಿದೆ. ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯವನ್ನು ದಿನನಿತ್ಯದ ಜೀವನದ ಭಾಗವಾಗಿಸುವಂತೆ ಈ ಹಂತವನ್ನು ಯೋಜಿಸಲಾಗಿದೆ. ವಿಶೇಷವಾಗಿ ಮುಕ್ತ ಜಾಗ, ಮಕ್ಕಳ ಆಟದ ಮೈದಾನ ಮತ್ತು ಸಮುದಾಯದ ಒಳಗೇ ದಿನನಿತ್ಯದ ಮನರಂಜನೆಯನ್ನು ಬಯಸುವ ಕುಟುಂಬಗಳಿಗೆ ಇದು ಅತ್ಯಂತ ಸೂಕ್ತವಾಗಿದೆ.
“ದಿ ಸೋಹೋ ಲೈಫ್” ಪರಿಕಲ್ಪನೆಯಡಿ ವಿನ್ಯಾಸಗೊಳಿಸಲಾದ ಡಿಸ್ಟ್ರಿಕ್ಟ್ 25, ಹೈ-ರೈಸ್ ಅಪಾರ್ಟ್ ಮೆಂಟ್ ಗಳಲ್ಲೇ ವಿಲ್ಲಾ ಶೈಲಿಯ ಜೀವನದ ಅನುಭವವನ್ನು ನೀಡುತ್ತದೆ. ಇಲ್ಲಿನ ಪ್ರತಿಯೊಂದು ಮನೆಯನ್ನು ಕಾರ್ನರ್ ಯೂನಿಟ್ ಆಗಿ ಯೋಜಿಸಲಾಗಿದ್ದು, ಯಾವುದೇ ಸಾಮಾನ್ಯ ಗೋಡೆಗಳನ್ನು ಹೊಂದಿಲ್ಲ. ಅಲ್ಲದೆ, ಪ್ರತಿ ಟವರ್ನ ಪ್ರತಿಯೊಂದು ಮಹಡಿಯಲ್ಲಿ ಕೇವಲ ನಾಲ್ಕು ನಿವಾಸಗಳು ಮಾತ್ರ ಇರಲಿವೆ. ಫೇಸ್ 3 ಯೋಜನೆಯು ಈ ಆಲೋಚನೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ. ಮೊದಲ ಎರಡು ಹಂತಗಳ ಖರೀದಿದಾರರಿಂದ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ, ನಂಬಿಯಾರ್ ಬಿಲ್ಡರ್ಸ್ ಈ ಮನೆಗಳನ್ನು ಮತ್ತಷ್ಟು ಆರಾಮದಾಯಕವಾಗಿ ಪರಿಷ್ಕರಿಸಿದೆ. ಹೆಚ್ಚು ಪರಿಣಾಮಕಾರಿಯಾದ ಯೂನಿಟ್ ಪ್ಲಾನ್ ಗಳು, ವಿಶಾಲವಾದ ಕೋಣೆಗಳು, ಆರಾಮದಾಯಕವಾದ ರೌಂಡ್ ಬಾಲ್ಕನಿಗಳು, ಕಿಚನ್ ಮತ್ತು ಡೈನಿಂಗ್ ನಡುವೆ ಉತ್ತಮ ಸಂಪರ್ಕ, ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ವಾಕ್- ಇನ್ ವಾರ್ಡ್ ರೋಬ್ ಗಳು ಮತ್ತು ಆಯ್ದ ಲೇಔಟ್ ಗಳಲ್ಲಿ ಸ್ಟಡಿ ಸ್ಪೇಸ್ ಗಳನ್ನು ನೀಡಲಾಗಿದೆ.
ದಕ್ಷಿಣಾಭಿಮುಖ ಕಿಟಕಿಗಳಿಗೆ ಶಾಖವನ್ನು ಕಡಿಮೆ ಮಾಡುವ ವಿಶೇಷ ಗ್ಲೇಜಿಂಗ್ ಗ್ಲಾಸ್ ಬಳಸಲಾಗುತ್ತಿದ್ದು, ಇದು ಮನೆಯೊಳಗಿನ ತಾಪಮಾನವನ್ನು ಸಮತೋಲನದಲ್ಲಿಡುತ್ತದೆ. ಹಾಗೆಯೇ, ಟವರ್ಗಳ ನಡುವಿನ ಹೆಚ್ಚಿನ ಅಂತರವು ನಿವಾಸಿಗಳ ಗೌಪ್ಯತೆ, ನೈಸರ್ಗಿಕ ಬೆಳಕು ಮತ್ತು ಉತ್ತಮ ಗಾಳಿಯ ಸಂಚಾರವನ್ನು ಹೆಚ್ಚಿಸಲಿದೆ. ವಿಶಾಲವಾದ ಸರ್ಜಾಪುರ ವಲಯವು ಪ್ರಸ್ತುತ 50 ಕ್ಕೂ ಹೆಚ್ಚು ಶಾಲೆಗಳು, ಸುಸಜ್ಜಿತ ಆರೋಗ್ಯ ಸೌಲಭ್ಯಗಳು, ಶಾಪಿಂಗ್ ಕೇಂದ್ರಗಳು ಮತ್ತು ದಿನನಿತ್ಯದ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಈ ಕಾರಿಡಾರ್ ಔಟರ್ ರಿಂಗ್ ರೋಡ್ ಕಚೇರಿ ವಲಯ ಸೇರಿದಂತೆ ಪ್ರಮುಖ ಐಟಿ ಪಾರ್ಕ್ಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದರೊಂದಿಗೆ, ಪ್ರಸ್ತಾವಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾರಿಡಾರ್ ಈ ಪ್ರದೇಶದ ದೀರ್ಘಾವಧಿಯ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ನೀಡಲಿದೆ.
ಈ ಯೋಜನೆಯ ಚಾಲನೆ ಕುರಿತು ಮಾತನಾಡಿದ ನಂಬಿಯಾರ್ ಬಿಲ್ಡರ್ಸ್ ನ ಚೀಫ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಆಫೀಸರ್ ಶ್ರೀ ಸಂಜಿತ್ ನಂಬಿಯಾರ್ ಅವರು, “ಕುಟುಂಬಗಳು ವಾಸ್ತವವಾಗಿ ಹೇಗೆ ಬದುಕಲು ಇಷ್ಟಪಡುತ್ತವೆಯೋ, ಅದೇ ರೀತಿ ಹಂತ ಹಂತವಾಗಿ ಬೆಳೆಯುವ ಟೌನ್ ಶಿಪ್ ಆಗಿ ಡಿಸ್ಟ್ರಿಕ್ಟ್ 25 ಅನ್ನು ಕಲ್ಪಿಸಲಾಗಿದೆ. ಈ ಯೋಜನೆಯು 3,500 ಕ್ಕೂ ಹೆಚ್ಚು ಮರಗಳು ಮತ್ತು 2.50 ಲಕ್ಷ ಚದರ ಅಡಿಯ ಬೃಹತ್ ಸೋಹೋ ಕ್ಲಬ್ ಹೌಸ್ ಒಳಗೊಂಡ 20ಕ್ಕೂ ಹೆಚ್ಚು ಎಕರೆಯ ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಅನ್ನು ಒಳಗೊಂಡಿದೆ. ಕುಟುಂಬಗಳು ಒಟ್ಟಿಗೆ ವಾಸಿಸಲು, ಆಟವಾಡಲು ಮತ್ತು ಹೆಚ್ಚಿನ ಸಮಯವನ್ನು ಕಳೆಯಲು ಇದು ಸೂಕ್ತ ಸ್ಥಳವಾಗಿದೆ. ಇದರ ಮಧ್ಯಭಾಗದಲ್ಲಿ ಫಿಫಾ ಮಾದರಿಯ ಫುಟ್ ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್ ಮತ್ತು ಪೆವಿಲಿಯನ್, ಟೆನ್ನಿಸ್, ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಸ್ಕ್ವಾಷ್ ಮತ್ತು ಪಿಕಲ್ಬಾಲ್ಗಾಗಿ ಮಲ್ಟಿ-ಕೋರ್ಟ್ ಸೌಲಭ್ಯಗಳು ಇರಲಿವೆ. ಇವುಗಳ ಜೊತೆಗೆ ಬೀಚ್ ವಾಲಿಬಾಲ್, ಕ್ರಿಕೆಟ್, ಸೆಲೆಬ್ರೇಷನ್ ಲಾನ್ಸ್ ಮತ್ತು ಈಜುಕೊಳಗಳ ಸೌಲಭ್ಯವೂ ಇದೆ. ದಿನನಿತ್ಯದ ಜೀವನಕ್ಕಾಗಿ ವಿನ್ಯಾಸಗೊಳಿಸಲಾದ ಫೇಸ್ 3, ಕೇವಲ ಸೌಲಭ್ಯಗಳ ಪಟ್ಟಿಯಾಗುಳಿಯದೆ ದೈಹಿಕ ಚಟುವಟಿಕೆ, ಮನರಂಜನೆ ಮತ್ತು ಸಮುದಾಯ ಜೀವನವನ್ನು ಮನೆಯ ದಿನನಿತ್ಯದ ಭಾಗವಾಗಿಸುತ್ತದೆ” ಎಂದರು.
ನಂಬಿಯಾರ್ ಬಿಲ್ಡರ್ಸ್ ನ ಡಿಸೈನ್ ಹೆಡ್ ಶ್ರೀ ಅರುಣ್ ಮಾತನಾಡಿ, “ನಮ್ಮ ಉದ್ದೇಶವು ಸಂಪೂರ್ಣ ಮತ್ತು ಸುಲಭವಾದ ಜೀವನಶೈಲಿಯನ್ನು ಸೃಷ್ಟಿಸುವುದಾಗಿದೆ. ಇದರೊಂದಿಗೆ ಡಿಸ್ಟ್ರಿಕ್ಟ್ 25 ಅನ್ನು ಬೆಂಗಳೂರಿನ ಅತ್ಯುತ್ತಮ ಸಂಯೋಜಿತ ಟೌನ್ಶಿಪ್ಗಳಲ್ಲಿ ಒಂದಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಈ ಯೋಜನೆಯು ಟೌನ್ಶಿಪ್ ಜೀವನಶೈಲಿಯಲ್ಲಿ ಮನೆ ಖರೀದಿದಾರರ ವಿಶ್ವಾಸವನ್ನು ಗಳಿಸಿದೆ. ಇಂದಿನ ಕುಟುಂಬಗಳು ಕೇವಲ ಒಂದು ಮನೆಗಿಂತ ಹೆಚ್ಚಿನದನ್ನು ಬಯಸುತ್ತಿವೆ. ಅವರು ಪ್ರತಿ ದಿನವೂ ಹೊಸ ಉತ್ಸಾಹ ನೀಡುವ ಒಂದು ಸಕ್ರಿಯ ಸಮುದಾಯವನ್ನು ಹುಡುಕುತ್ತಿದ್ದಾರೆ. ಮಕ್ಕಳು ಮುಕ್ತವಾಗಿ ಆಟವಾಡುವ, ನಿವಾಸಿಗಳು ಕ್ರೀಡೆ ಮತ್ತು ಮನರಂಜನೆಯ ಮೂಲಕ ಸಕ್ರಿಯರಾಗಿರುವ ಮತ್ತು ಕುಟುಂಬಗಳು ಸುರಕ್ಷಿತ ವಾತಾವರಣದಲ್ಲಿ ಒಟ್ಟಿಗೆ ಆಚರಣೆಗಳನ್ನು ಆನಂದಿಸುವ ಸ್ಥಳವನ್ನು ಅವರು ಬಯಸುತ್ತಾರೆ. ನಂಬಿಯಾರ್ ಬಿಲ್ಡರ್ಸ್ ಡಿಸ್ಟ್ರಿಕ್ಟ್ 25 ಫೇಸ್ 3 ಈ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಮತ್ತು ಆಧುನಿಕ ಜೀವನಕ್ಕಾಗಿ ವಿನ್ಯಾಸಗೊಳಿಸಲಾದ ರೋಮಾಂಚಕ, ಸ್ವಾವಲಂಬಿ ಸಮುದಾಯವನ್ನು ನೀಡುತ್ತದೆ” ಎಂದರು.
ಮಾತು ಮುಂದುವರಿಸಿದ ಅವರು, “ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಹೊರತುಪಡಿಸಿ, ಟೌನ್ ಶಿಪ್ ನ ಜೀವನಶೈಲಿಯನ್ನು ಕ್ಲಬ್ ಸೋಹೋ ಮುನ್ನಡೆಸಲಿದ್ದು, ಹಿರಿಯರು, ಮಕ್ಕಳು, ಸಾಕುಪ್ರಾಣಿಗಳು, ಯೋಗ, ಈಜು ಮತ್ತು ಸಮುದಾಯದ ಬಳಕೆಯ ಜಾಗಗಳು ಇದಕ್ಕೆ ಪೂರಕವಾಗಿರಲಿವೆ. ಇಲ್ಲಿನ ಸೌಲಭ್ಯಗಳ ಪಟ್ಟಿಯಲ್ಲಿ ರಿಫ್ಲೆಕ್ಸಾಲಜಿ ಟ್ರ್ಯಾಕ್ ಹೊಂದಿರುವ ಹಿರಿಯರ ಪ್ಲಾಜಾ, ಮಕ್ಕಳ ಆಟದ ಮೈದಾನಗಳು ಸೇರಿದಂತೆ ಡಿಸ್ಟ್ರಿಕ್ಟ್ 25 ನಲ್ಲಿ 150ಕ್ಕೂ ಹೆಚ್ಚು ಜೀವನಶೈಲಿ ಸೌಲಭ್ಯಗಳನ್ನು ಯೋಜಿಸಲಾಗಿದೆ. ಇಲ್ಲಿ ಕೇವಲ ಸೌಲಭ್ಯಗಳ ಸಂಖ್ಯೆಗೆ ಮಾತ್ರವಲ್ಲದೆ, ದಿನನಿತ್ಯದ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳು, ಉದ್ಯೋಗಸ್ಥರು ಮತ್ತು ಹಿರಿಯರಿಗೆ ದಿನದ ವಿವಿಧ ಸಮಯಗಳಲ್ಲಿ ಉಪಯುಕ್ತವಾಗುವಂತೆ ಈ ಜಾಗಗಳನ್ನು ರೂಪಿಸಲಾಗಿದೆ. ಇದು ಈ ಟೌನ್ ಶಿಪ್ ಅನ್ನು ಕೇವಲ ವಸತಿ ಸಂಕೀರ್ಣದಂತೆ ಮಾಡದೆ, ಒಂದು ಸೊಗಸಾದ ನೆರೆಹೊರೆಯಂತೆ ಪರಿವರ್ತಿಸುತ್ತದೆ” ಎಂದರು.
ನಂಬಿಯಾರ್ ಬಿಲ್ಡರ್ಸ್ ಕುರಿತು:
ನಂಬಿಯಾರ್ ಬಿಲ್ಡರ್ಸ್ನ 17 ವರ್ಷಗಳ ಬ್ರ್ಯಾಂಡ್ ಪ್ರಯಾಣವು ಸ್ಪಷ್ಟ ಉದ್ದೇಶ, ಸ್ಥಿರತೆ ಮತ್ತು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ತತ್ವದೊಂದಿಗೆ ಸಾಗಿದೆ. ತಮ್ಮ ‘ಥಾಟ್ಫುಲ್, ಮೈಂಡ್ಫುಲ್ ಮತ್ತು ಸೋಲ್ಫುಲ್’ ದೃಷ್ಟಿಕೋನದಲ್ಲಿ ಬೇರೂರಿರುವ ಸಂಸ್ಥೆಯು ಬುದ್ಧಿವಂತ ವಿನ್ಯಾಸ, ಉನ್ನತ ನಿರ್ಮಾಣ ಗುಣಮಟ್ಟ ಮತ್ತು ಪ್ರತಿ ಹಂತದಲ್ಲೂ ಪಾರದರ್ಶಕ ಸಂವಹನದ ಮೂಲಕ ಪ್ರೀಮಿಯಂ ಜೀವನಶೈಲಿಯನ್ನು ಸೊಗಸುಗೊಳಿಸುವತ್ತ ಹರಿಸಿದೆ. ಪ್ರಾಯೋಗಿಕ ಅನುಭವಗಳನ್ನು ಸುಧಾರಿಸುವ ಮೂಲಕ, ವರ್ಚುವಲ್ ವಾಕ್ಥ್ರೂಗಳಂತಹ ಹೊಸತನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ದೀರ್ಘಾವಧಿಯ ಬಾಂಧವ್ಯಗಳನ್ನು ಪೋಷಿಸುವ ಮೂಲಕ ಸಂಸ್ಥೆಯು ವ್ಯಾಪಾರದ ವಿಸ್ತರಣೆಗಿಂತ ಮುಂಚಿತವಾಗಿ ನಂಬಿಕೆಯನ್ನು ಗಳಿಸಿದೆ. ಇಂದು, ನಂಬಿಯಾರ್ ಬಿಲ್ಡರ್ಸ್ ಕೇವಲ ಹೆಗ್ಗುರುತಿನ ಯೋಜನೆಗಳಿಗೆ ಮಾತ್ರವಲ್ಲದೆ, ಮನೆಗಳನ್ನು ಶಾಶ್ವತ ಜೀವನಶೈಲಿಯಾಗಿ ಪರಿವರ್ತಿಸುವ ಪ್ರಾಮಾಣಿಕತೆ, ಕಾಳಜಿ ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ.
ನಂಬಿಯಾರ್ ಬೆಲ್ಲೆಜಿಯಾ,ಎಲೆಗೆಂಜಾ ಮತ್ತು ನಂಬಿಯಾರ್ ಮಿಲೇನಿಯಾ ಸೇರಿದಂತೆ ಯಶಸ್ವಿ ಸಮುದಾಯಗಳನ್ನು ಹಸ್ತಾಂತರಿಸಿದ ನಂತರ, ಕಂಪನಿಯು ಈಗ ತನ್ನ ವಸತಿ ವಲಯದ ಪರಿಣತಿಯನ್ನು ತನ್ನ ಮೊದಲ ಬೃಹತ್ ಸಂಯೋಜಿತ ಟೌನ್ಶಿಪ್ ಯೋಜನೆಯಾದ ನಂಬಿಯಾರ್ ಬಿಲ್ಡರ್ಸ್ ಡಿಸ್ಟ್ರಿಕ್ಟ್ 25 ನಿರ್ಮಿಸಲು ಬಳಸುತ್ತಿದೆ. ಚಂದಾಪುರ- ದೊಮ್ಮಸಂದ್ರ ರಸ್ತೆಯ ಬಳಿ 63 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಡಿಸ್ಟ್ರಿಕ್ಟ್ 25, ತನ್ನ ಮೊದಲ ಎರಡು ಹಂತಗಳಲ್ಲಿ ಅಂದಾಜು ₹3,200 ಕೋಟಿ ಮೌಲ್ಯದ 1,600 ಕ್ಕೂ ಹೆಚ್ಚು ಮನೆಗಳ ಮಾರಾಟವನ್ನು ದಾಖಲಿಸಿದೆ. ಈ ಟೌನ್ಶಿಪ್ ಅನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಬೆಂಗಳೂರಿನ ಆಗ್ನೇಯ ಬೆಳವಣಿಗೆಯ ಕಾರಿಡಾರ್ನಲ್ಲಿ ನಂಬಿಯಾರ್ ಬಿಲ್ಡರ್ಸ್ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದ್ದಂತೆ ಭವಿಷ್ಯದ ವಿಸ್ತರಣೆಗೂ ಇಲ್ಲಿ ಅವಕಾಶವಿದೆ.
