ಕೆ.ಆರ್.ಪೇಟೆ,ಜು.11: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸುನಿಲ್.ಎಂ.ಎಸ್. ಅವರ ಅಧ್ಯಕ್ಷತೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುನಿಲ್.ಎಂ.ಎಸ್. ಅವರು ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸದಾ ಸಮಾಜಮುಖಿ ಹೋರಾಟ ಮಾಡಬೇಕು. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ದಕ್ಕೆ ಬಂದಾಗ ಬೀದಿಗಿಳಿದು ಪ್ರತಿಭಟನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು.
ಕೇವಲ ಪದವಿಗೋಸ್ಕರ ಸಂಘಟನೆಗೆ ಬರಬಾರದು. ಸೇವೆ ಮಾಡುವ ಗುಣವಿದ್ದರೆ ಮಾತ್ರ ಕನ್ನಡ ಪರ ಸಂಘಟನೆಗೆ ಬರಬೇಕು. ಹಣ ಮಾಡುವ ಆಸೆಯನ್ನು ಬಿಟ್ಟು ಸೇವೆ ಮಾಡಿ ಹೆಸರು ಮಾಡಿ ಸಮಾಜದಲ್ಲಿ ಗುರುತಿಸಿಕೊಂಡು ಮಾದರಿ ವ್ಯಕ್ತಿಯಾಗಬೇಕು ಎನ್ನುವವರು ಮಾತ್ರ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆಗೆ ಬನ್ನಿ ಎಂದು ಸುನಿಲ್.ಎಂ.ಎಸ್. ಕರೆ ನೀಡಿದರು. ಸಮಾಜದಲ್ಲಿ ಜನ ಸಾಮಾನ್ಯರ, ರೈತರ, ಕಾರ್ಮಿಕರ ಸಮಸ್ಯೆಗಳು ಸಾಕಷ್ಟು ಇವೆ.
ಈ ಸಮಸ್ಯೆಗಳ ವಿರುದ್ದ ಹೋರಾಟ ಮಾಡಿ, ರೈತರಿಗೆ, ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಮುಖ್ಯ ಧ್ಯೇಯೋದ್ದೇಶವಾಗಿದೆ. ಈ ಉದ್ದೇಶಗಳನ್ನು ಅರಿತು ತಾಲ್ಲೂಕಿನಲ್ಲಿ ಜನಪರವಾಗಿ ಹೋರಾಟ ರೂಪಿಸಿ ಸಂಘಟನೆಯನ್ನು ಬಲಪಡಿಸಲು ನೂತನ ಅಧ್ಯಕ್ಷರಾದ ಎನ್.ಮೋಹನ್ ಮತ್ತು ಪದಾಧಿಕಾರಿಗಳು ಶ್ರಮಿಸಬೇಕು ಎಂದು ರಾಜ್ಯಾಧ್ಯಕ್ಷ ಸುನಿಲ್ ಅವರು ಸಲಹೆ ನೀಡಿದರು.
ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮೋಹನ.ಎನ್, ಮಹಿಳಾ ಘಟಕದ ಅಧ್ಯಕ್ಷರಾಗಿ ರೋಷನ್ ಭಾನು, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನಿಸಾರ್ ಅಹಮದ್, ತಾಲ್ಲೂಕು ಮಹಿಳಾ ಕಾರ್ಯಾಧ್ಯಕ್ಷರಾಗಿ ಬಿ.ಎಸ್.ವಿದ್ಯಾ, ಮಹಿಳಾ ಉಪಾಧ್ಯಕ್ಷರಾಗಿ ರಾಧಾ, ಅಕ್ಕಿಹೆಬ್ಬಾಳು ಹೋಬಳಿ ಘಟಕದ ಅಧ್ಯಕ್ಷರಾಗಿ ಮಂಜುನಾಥ್, ತಾಲ್ಲೂಕು ಘಟಕದ ಉಪಾಧ್ಯಕ್ಷರುಗಳಾಗಿ ಕೆ.ಆರ್.ಬನ್ನಾರಿ, ಕಿಶೋರ್.ಟಿ.ಎನ್, ತಾಲ್ಲೂಕು ಕಾರ್ಯದರ್ಶಿಗಳಾಗಿ ರಮೇಶ್ ಸೂರಪ್ಪ , ಸಣ್ಣಬೋರಯ್ಯ, ಮಂಜು, ಅಶೋಕ್, ಆಟೋ ಘಟಕದ ಅಧ್ಯಕ್ಷ ತೇಜು, ಸದಸ್ಯರಾಗಿ ಶಿವಣ್ಣ, ಪರಮೇಶ್, ಭಾಸ್ಕರ್, ಮಹೇಶ್, ಶ್ರೀಕಾಂತ್ , ಸಾಗರ್, ಪುರುಷೋತ್ತಮ್, ಅವರನ್ನು ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್.ಸುನಿಲ್ ಘೋಷಣೆ ಮಾಡಿದರು. ಹಾಗೂ ಆದೇಶ ಪತ್ರ ಹಾಗೂ ಗುರುತಿನ ಚೀಟಿಗಳನ್ನು ವಿತರಣೆ ಮಾಡಿ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಸವರಾಜು, ರಾಜ್ಯ ಮಹಿಳಾ ಉಪಾಧ್ಯಕ್ಷೆ ಯಶೋಧಮ್ಮ, ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ದರ್ಶನ್, ಮಂಡ್ಯ ಜಿಲ್ಲಾಧ್ಯಕ್ಷ ಗೋಪಿನಾಥ್, ಮಂಡ್ಯ ಜಿಲ್ಲಾ ಮಹಿಳಾ ಅಧ್ಯಕ್ಷೆ ಯಶೋಧ, ರಾಜ್ಯ ಸಂಚಾಲಕ ರಾಘವೇಂದ್ರ, ಮೈಸೂರು ಜಿಲ್ಲಾ ವಿಭಾಗೀಯ ಘಟಕದ ಜಿಲ್ಲಾಧ್ಯಕ್ಷ ರಾಕೇಶ್ ಇತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
