ತುಮಕೂರು : ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ),ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರುಗಳ ಸಹಯೋಗದಲ್ಲಿ ಜುಲೈ 13 ಸೋಮವಾರದಂದು ಬೆಳಿಗ್ಗೆ 10 ರಿಂದ 1ಗಂಟೆಯರವರೆಗೆ ಕೊರಟಗೆರೆ ತಾಲ್ಲೋಕು ಎಲೆರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕ್ಯಾನ್ಸರ್ ಹಾಗೂ ಗರ್ಭಕೋಶ ತಪಾಸಣಾ ಶಿಬಿರ ಮತ್ತು ವಾಸನ್ ಐ-ಕೇರ್ ರವರಿಂದ ಉಚಿತ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಡಾ||ಹನುಮಂತನಾಥಸ್ವಾಮೀಜಿಗಳು ವಹಿಸುವರು,ಅಧ್ಯಕ್ಷತೆ ಕೊರಟಗೆರೆ ತಹಸೀಲ್ದಾರ್ ಮಂಜುನಾಥ್,ಮುಖ್ಯ ಅತಿಥಿಗಳಾಗಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ)ದ ಗೌರವಾಧ್ಯಕ್ಷರಾದ ನಟರಾಜಶೆಟ್ಟರು,ಅಧ್ಯಕ್ಷರಾದ ಟಿ.ಎಸ್.ಮೋಹನ್ ಕುಮಾರ್,ವಾಸನ್ ಐ ಕೇರ್ ನ ನಾಗರಾಜು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಎನ್.ಕೃಷ್ಣಮೂರ್ತಿ,ಆರ್.ಎಸ್.ರಾಜಣ್ಣ,ಎನ್.ನಂಜುಂಡಾರಾಧ್ಯ,ಎನ್.ಪ್ರತಾಪ್ ಆರಾಧ್ಯ,ಲಕ್ಷ್ಮೀಕಾಂತ್ ಹಾಗೂ ಇತರರು ಆಗಮಿಸಲಿದ್ದಾರೆ.ಸಾರ್ವಜನಿಕರು,ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಂಘದ ಕಾರ್ಯದರ್ಶಿ ಶ್ರೀಮತಿ ಗೀತಾನಾಗೇಶ್ ಮನವಿ ಮಾಡಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
