ಕೆ ಆರ್ ಪೇಟೆ:ಮಾಜಿ ಪ್ರಧಾನಿಗಳು ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿ ದೇವೇಗೌಡ ಅಪ್ಪಾಜಿಯವರ ಧರ್ಮಪತ್ನಿ ಮಾತೃ ಸ್ವರೂಪಿ ಚೆನ್ನಮ್ಮ ಅವರು ನಮ್ಮಲ್ಲರಿಗೂ ತಾಯಿಯಾಗಿದ್ದಾರೆ.ಅವರು ದೈವಾಧೀನರಾಗಿದ್ದು ನಮ್ಮ ಪಕ್ಷಕ್ಕೆ ಅಲ್ಲದೆ ಹಾಗೂ ನಮ್ಮೆಲ್ಲರಿಗೂ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕ್ಷೇತ್ರದ ಶಾಸಕರಾದ ಹೆಚ್ ಟಿ ಮಂಜು ಭಾವುಕರಾಗಿ ನುಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಚೆನ್ನಮ್ಮ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಚೆನ್ನಮ್ಮ ಅವರನ್ನು ನೆನೆದು ಮಾತನಾಡಿದರು.
ಮಾತೃಶ್ರೀ ಚೆನ್ನಮ್ಮ ಅವರ ಮನೆಗೆ ನಾವು ಹೋದಾಗ ನಮ್ಮನ್ನು ಆರೈಕೆ ಮಾಡುತ್ತಿದ್ದನ್ನ ನೋಡಿದಾಗ ನನಗೆ ತಾಯಿಯ ಪ್ರೀತಿ ವಾತ್ಸಲ್ಯ ಭಾವನೆಯನ್ನು ಕಂಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಲ್ಲದೇ ಯಾರೇ ಆಗಲಿ ಮನೆಗೆ ಹೋದಾಗ ಸಂತೈಸುವ ಗುಣಗಳನ್ನು ನೋಡಿದಾಗ ಅವರು ನಿಧನ ಹೊಂದಿದ್ದು ತಡೆಯಲಾರದ ದುಃಖ ನಮಗಾಗಿದೆ.ಚೆನ್ನಮ್ಮ ಅವರ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ.ಅವರ ಆದರ್ಶಮಯ ಬದುಕು,ಸೇವಾ ಮನೋಭಾವ,ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಸ್ಮರಣೀಯವಾದುದು.ಚೆನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ಹಾಗೂ ದೇವೇಗೌಡರು,ಮಾಜಿ ಮುಖ್ಯಮಂತ್ರಿ ಕುಮಾರಣ್ಣ, ರೇವಣ್ಣಾಜಿ,ನಿಖಿಲ್ ಅಣ್ಣ ಸೇರಿದಂತೆ ನಮ್ಮ ಪಕ್ಷದ ನಾನು ಸೇರಿದಂತೆ ಲಕ್ಷಾಂತರ ಮುಖಂಡರು ಕಾರ್ಯಕರ್ತರಿಗೆ ದುಃಖ ತಡೆಯುವ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕರು ತಿಳಿಸಿದರು.
ಮುಂದುವರಿದು ಮಾತನಾಡಿದ ನಮ್ಮ ತಾಲ್ಲೂಕಿನ ಜೆಡಿಎಸ್ ಉಪಾಧ್ಯಕ್ಷರಾದ ಸಂಗಾಪುರ ಪುಟ್ಟಸ್ವಾಮಿಗೌಡ ಅವರ ನಿಧನದಿಂದ ನಮ್ಮ ಪಕ್ಷಕ್ಕೆ ಅಪಾರ ನೋವುಂಟು ಆಗಿದೆ.ಅವರಿಗೂ ಇದೇ ಸಮಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ.ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ಭಗವಂತ ನೀಡಲಿ.ಅವರ ಆತ್ಮಕ್ಕೂ ಚಿರಶಾಂತಿ ನೀಡಲಿ ಎಂದು ತಿಳಿಸಿದರು.

ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಮಲ್ಲೇನಹಳ್ಖಿ ಮೋಹನ್ ಮಾತನಾಡಿ ತಾಯಿ ಬಗ್ಗೆ ಚೆನ್ನಮ್ಮದೇವೇಗೌಡ ಅವರನ್ನು ಉದಾಹರಣೆ ಕೊಟ್ಟರೆ ತಪ್ಪಾಗಲಾರದು.ಗಂಡನಿಗೆ ಉತ್ತಮ ಮಡದಿಯಾಗಿ,ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಸಮಾಜದಲ್ಲಿ ಎಲ್ಲಾ ತಾಯಿಯರಿಗೆ ಮಾದರಿಯಾಗಿದ್ದಾರೆ.
ಪತಿಯವರಾದ ದೇವೇಗೌಡರ ರಾಜಕೀಯ ಜೀವನದಲ್ಲಿ ಏಳಿಗೆಗೆ ಬೆನ್ನೆಲುಬಾಗಿ ಚೆನ್ನಮ್ಮಾಜಿ ಬೆನ್ನ ಹಿಂದೆ ಇದ್ದಾರೆ ಎಂಬುದು ಜಗಜ್ಜಾಹಿರಾಗಿದೆ.ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನ ಮಂತ್ರಿಯಾಗಲು,ಪುತ್ರರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಅವರಿಗೆ ಚೆನ್ನಮ್ಮ ಆಶೀರ್ವಾದದಿಂದ ಇಷ್ಟೆಲ್ಲಾ ಸಾಧನೆಗೆ ಕಾರಣವಾಗಿದೆ.ಚೆನ್ನಮ್ಮ ಅವರ ಆಶೀರ್ವಾದ ನಮ್ಮ ಪಕ್ಷದ ಮೇಲೆ, ಲಕ್ಷಾಂತರ ಕಾರ್ಯಕರ್ತರ ಮೇಲೆ ಇರಲಿ ಎಂದು ತಿಳಿಸಿದರು. *ಮಾಜಿ ಶಾಸಕ ಬಿ.ಪ್ರಕಾಶ್* ಮಾತನಾಡಿ ದೇವೇಗೌಡರು, ಕುಮಾರಣ್ಣ ಅವರ ಯಸಸ್ಸಿಮ ಹಿಂದೆ ಚೆನ್ನಮ್ಮ ಅವರು ಇದ್ದರು.

ದೇವೇಗೌಡರು ಇಷ್ಟು ಸುಧೀರ್ಘ ವರ್ಷಗಳ ಕಾಲ ಆರೋಗ್ಯದಿಂದ ಇರಬೇಕಾದರೆ ಚನ್ನಮ್ಮ ಅವರೇ ಕಾರಣ, ದೇವೇಗೌಡರಿಗೆ ಇಷ್ಟವಾದ ಪೌಷ್ಟಿಕವಾದ ಆಹಾರವನ್ನು ತಾವೇ ತಯಾರಿಸಿ ನೀಡುತ್ತಿದ್ದುದೇ ಕಾರಣವಾಗಿದೆ. ಅಪಾರ ದೈವಭಕ್ತಿ ಚನ್ನಮ್ಮ ಅವರಲ್ಲಿತ್ತು. ದೇಶದ ಆದರ್ಶ ದಂಪತಿಗಳಲ್ಲಿ ಮೊದಲ ಸ್ಥಾನ ನಮ್ಮ ಚೆನ್ನಮ್ಮ ದೇವೇಗೌಡರಿಗೆ ಸಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾರ ಮಲ್ಲೇನಹಳ್ಳಿ ಎಂ.ಮೋಹನ್, ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಎ.ಆರ್.ರಘು, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ರಾಜ್ಯ ಸಹಕಾರ ಮರಾಟ ಮಹಾಮಂಡಳ ನಿರ್ದೇಶಕ ಎಸ್.ಎಲ್.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್ ನಿರ್ದೇಶಕರಾದ ಹೆಚ್ ಟಿ ಲೋಕೇಶ್, ನಾಗರಘಟ್ಟ ದಿಲೀಪ್ ,ಕೆ.ಬಿ.ನಾಗೇಶ್, ಮಧು ,ಕೊರಟೀಕೆರೆ ದಿನೇಶ್, ಸ್ವಾಮಿಗೌಡ, ತೋಟಪ್ಪಶೆಟ್ಟಿ,ಸಾಮಿಲ್ ರವಿಕುಮಾರ್,ಹೆಚ್.ಕೆ. ಅಶೋಕ್, ಸಾರಂಗಿ ನಾಗೇಶ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ಹುಲ್ಲೇಗೌಡ,ರಾಮಚಂದ್ರು, ವಡ್ಡರಹಳ್ಳಿ ಮಹದೇವ್, ಎಪಿಎಂಸಿ ಮಾಜಿ ಅಧ್ಯಕ್ಷರಾದ
ಚಂದ್ರಹಾಸ, ನಾಗರಾಜೇಗೌಡ ,ನಂಜೇಗೌಡ, ತಾ.ಪಂ.ಮಾಜಿ ಸದಸ್ಯ ರಾಜು,ಮರಡಹಳ್ಳಿ ಪ್ರದೀಪ್, ಸಚಿನ್,ಕುಮಾರಸ್ವಾಮಿ, ಮಧು, ಚಂದ್ರೇಗೌಡ,ಬೇಲದಕೆರೆ ನಂಜಪ್ಪ, ಪಾಪೇಗೌಡ, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ರತಿ ಮಹಾದೇವ್, ಜಯಲಕ್ಷ್ಮಿ, ರೇಖಾ,ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
