ಕೆ.ಆರ್ .ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್ ಎನ್ ನಾಗೇಶ್, ಉಪಾಧ್ಯಕ್ಷರಾಗಿ ಸುಕನ್ಯ ಪುಟ್ಚೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಯಸಿ ನಾಗೇಶ್, ಉಪಾಧ್ಯಕ್ಷ ಸ್ಥಾನ ಬಯಸಿ ಸುಕನ್ಯ ಪುಟ್ಟೇಗೌಡ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ
ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಘದ ಸಿ.ಇ.ಓ ಜಯರಾಜು ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ ಎಸ್ ಎನ್ ನಾಗೇಶ್,ಉಪಾಧ್ಯಕ್ಷರಾಗಿ ಸುಕನ್ಯಾಪುಟ್ಚೇಗೌಡ ಆಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು ಪಟಾಕಿಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷ ರನ್ನು ಅಭಿನಂದಿಸಿ ಮಾತನಾಡಿದ ತಾಲ್ಲೋಕು ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್ ಮಾತನಾಡಿ ಹಿಂದಿನಿಂದಲೂ ಸಂತೇಬಾಚಹಳ್ಳಿ ಹೋಬಳಿಯು ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದು ಇಲ್ಲಿನ ಪ್ರಭುದ್ದ ಮತದಾರರು ಮೊತ್ತೊಮ್ಮೆ ಜೆಡಿಎಸ್ ಗೆ ಮತ ನೀಡಿ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ ಆದುದರಿಂದ ನಮ್ಮ ಕ್ಷೇತ್ರದ ಎಲ್ಲಾ ಮತದಾರ ಬಂಧುಗಳಿಗೂ, ಗೆಲುವಿಗೆ ಸಹಕಾರ ನೀಡಿದ ಮುಖಂಡರಿಗೂ ಕ್ಷೇತ್ರದ ಶಾಸಕರಾದ ಹೆಚ್. ಟಿ.ಮಂಜಣ್ಣ ಅವರಿಗೂ ಆನಂತ ಆನಂತ ಧನ್ಯವಾದಗಳನ್ನು ತಿಳಿಸಿದರು.

ಚುನಾವಣಾ ಪೂರ್ವದಲ್ಲಿ ನಮ್ಮ ವಿರೋಧಿಗಳು ನಮ್ಮ ವಿರುದ್ದ ಯಾವುದೇ ಅಪಪ್ರಚಾರ ಮಾಡಿದರೂ ಸಹ ನಮ್ಮ ಕ್ಷೇತ್ರದ ಮತದಾರರು ಯೂವುದೇ ಆಮಿಷಕ್ಕೆ ಒಳಗಾಗದೆ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ನಮ್ಮ ನೆಚ್ಚಿನ ನಾಯಕರಾದ ಶಾಸಕ ಹೆಚ್,ಟಿ ಮಂಜು ರವರ ಕೈಬಲಪಡಿಸಿದ್ದಾರೆ. ಶಾಸಕ ಮಂಜಣ್ಣ ಅವರ ನೇತೃತ್ವದಲ್ಲಿ ಮುಂಬರುವ ಗ್ರಾ,ಪಂ ತಾ,ಪಂ ಜಿ,ಪಂ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವು ಇನ್ನಷ್ಟು ಜಯಬೇರಿ ಬಾರಿಸಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಕೆ ನಂಜಪ್ಪ,, ಎನ್.ಕೆ. ದನೇಶ್, ಗಂಗಾಧರ್, ಚಿಕ್ಕಯ್ಯ, ಮಂಜುಳ,
ಗಂಗಾದರ್,ನಾಗರಾಜೇಗೌಡ, ವಿಕ್ರಾಂತ್ ಲಕ್ಷ್ಮಣ್, ಗ್ರಾ. ಪಂ.ಮಾಜಿ ಸದಸ್ಯ, ರಮೇಶ್,ಮಂಜೇಗೌಡ,ಸತೀಶ್ ಧರ್ಮ,ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಜು,ಮೋಹನ್, ನವೀನ್ , ಮಂಜೇಗೌಡ ಕ್ರೈನ್ ನಂಜೇಗೌಡ,ಪ||ಜಯರಾಮು, ರೇವಣ್ಣ,ಡೇರಿ ರಮೇಶ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
